ಶಾಲಾ ಮಕ್ಕಳೊಂದಿಗೆ ಕಾಲ ಕಳೆದ ಶಿಕ್ಷಣ ಸಚಿವ ಸುರೇಶ್ ಕುಮಾರ್
ಶಾಲಾ ಮಕ್ಕಳೊಂದಿಗೆ ಕಾಲ ಕಳೆದ ಶಿಕ್ಷಣ ಸಚಿವ ಸುರೇಶ್ ಕುಮಾರ್

ಶಾಲಾ ಮಕ್ಕಳೊಂದಿಗೆ ಕಾಲ ಕಳೆದ ಶಿಕ್ಷಣ ಸಚಿವ ಸುರೇಶ್ ಕುಮಾರ್

ಅಕ್ಷರ ಕ್ರಾಂತಿ ಮೂಡಿಸುವ ಸಂಕಲ್ಪ ಮಾಡಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಶಾಲಾ ಮಕ್ಕಳೊಂದಿಗೆ ಗುರುವಾರ ಕಾಲ ಕಳೆದಿದ್ದಾರೆ. 

ತುಮಕೂರು: ಅಕ್ಷರ ಕ್ರಾಂತಿ ಮೂಡಿಸುವ ಸಂಕಲ್ಪ ಮಾಡಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಶಾಲಾ ಮಕ್ಕಳೊಂದಿಗೆ ಗುರುವಾರ ಕಾಲ ಕಳೆದಿದ್ದಾರೆ. 

ಪಾವಗಡ ತಾಲೂಕಿನ ಅಚಮ್ಮನಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಡೀ ರಾತ್ರಿ ಕಳೆದಿರುವ ಸುರೇಶ್ ಕುಮಾರ್ ಅವರು ಮಕ್ಕಳೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಮಕ್ಕಳ ಸಮಸ್ಯೆಗಳನ್ನು ಆಲಿಸಿದ್ದಾರೆ. 

ಸಚಿವರೊಂದಿಗೆ ಮಾತನಾಡಿರುವ ಹೇಮಂತ್ ನಾಯ್ಡು ಎಂಬ ವಿದ್ಯಾರ್ಥಿ ಕೆಲ ಪ್ರಶ್ನೆಗಳನ್ನು ಕೇಳಿದ್ದಾನೆ. 13 ಸಾವಿನರ ಎಕರೆ ಭೂಮಿಯಲ್ಲಿ ವಿಶ್ವದಲ್ಲಿಯೇ ಅತೀ ದೊಡ್ಡ ಸೋಲಾರ್ ಪಾರ್ಕ್'ನ್ನು ರಾಜ್ಯ ಹೊಂದಿದೆ. ಆದರೂ, ನಮ್ಮಲ್ಲಿ ವಿದ್ಯುತ್ ಕೊರತೆ ಕಾಡುತ್ತಿದೆ ಎಂದು ಕೇಳಿದ್ದಾನೆ. 

ಈ ವೇಳೆ ಪ್ರತಿಕ್ರಿಯೆ ನೀಡಿರುವ ಸುರೇಶ್ ಕುಮಾರ್ ಅವರು, ಸಮುದ್ರದ ಜೊತೆ ನೆಂಟಸ್ಥನ ಆದರೆ ಉಪ್ಪಿಗೆ ಭಾರವಂತೆ ಎಂದ ಅವರು, ಸಮಸ್ಯೆಗಳನ್ನು ಪರಿಹರಿಸುವುದಾಗಿ ತಿಳಿಸಿದ್ದಾರೆ. 

ರಾತ್ರಿ ಕಳೆದಿದ್ದರಿಂದ ಮಕ್ಕಳೊಂದಿಗೆ ಮಾತನಾಡುವ ಅವಕಾಶ ಸಿಕ್ಕಿತು. ಅಲ್ಲದೆ, ವಾಸ್ತವಿಕ ಸತ್ಯಾಂಶಗಳೂ ತಿಳಿಯಿತು ಎಂದು ಸುರೇಶ್ ಕುಮಾರ್ ಹೇಳಿದ್ದಾರೆ. 

ಇದಲ್ಲದೆ ಸಚಿವರು ತಿರುಮಣಿ, ವಲ್ಲೂರು, ಕ್ಯಾಥಗನಚರ್ಲು ಮತ್ತು ವೆಂಕಟಮ್ಮನಹಳ್ಳಿ ಗ್ರಾಮಗಳಿಗೂ ಭೇಟಿ ನೀಡಿ ಮಕ್ಕಳೊಂದಿಗೆ ಮಾತುಕತೆ ನಡೆಸಿದ್ದಾರೆ. ಭೇಟಿ ವೇಳೆ ಕೆಲ ಮಕ್ಕಳು ಆಂಗ್ಲ ಮಾಧ್ಯಮಗಳನ್ನು ತೆರೆಯುವಂತೆ ಸಚಿವರ ಬಳಿ ಆಗ್ರಹಿಸಿದ್ದಾರೆ. ಈ ಬಗ್ಗೆ ಆಶವಾದ ಚರ್ಚೆ ನಡೆಯಬೇಕಿದ್ದು, ನಿರ್ದೇಶನಗಳಿಗೆ ಮಾರ್ಗದರ್ಶನ ಅಗತ್ಯವಿದೆ ಸಚಿವರು ತಿಳಿಸಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com