ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ, ಬೀದಿ ಬದಿ ವ್ಯಾಪಾರಿ ಸಾವು

ಕೆಎಸ್‌ಆರ್‌ಟಿಸಿ ಬಸ್ಸೊಂದು ತಳ್ಳುಗಾಡಿಗೆ ಡಿಕ್ಕಿ ಹೊಡೆದ ಪರಿಣಾಮ ಬೀದಿ ಬದಿ ವ್ಯಾಪಾರಿಯೊಬ್ಬರು ಮೃತಪಟ್ಟಿರುವ ಘಟನೆ ವಿವಿಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು:  ಕೆಎಸ್‌ಆರ್‌ಟಿಸಿ ಬಸ್ಸೊಂದು ತಳ್ಳುಗಾಡಿಗೆ ಡಿಕ್ಕಿ ಹೊಡೆದ ಪರಿಣಾಮ ಬೀದಿ ಬದಿ ವ್ಯಾಪಾರಿಯೊಬ್ಬರು ಮೃತಪಟ್ಟಿರುವ ಘಟನೆ ವಿವಿಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ನಡೆದಿದೆ.

ಶ್ರೀನಗರದ ಕಾಳಿದಾಸ ನಗರದ ರಾಮದಾಸ್ (45)ಎಂದು ಮೃತಪಟ್ಟ ವ್ಯಾಪಾರಿ. ತಳ್ಳುಗಾಡಿಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದ ರಾಮದಾಸ್ ಅವರು ಶುಕ್ರವಾರ ಬೆಳಗ್ಗೆ ಕೆ.ಆರ್. ಮಾರುಕಟ್ಟೆಗೆ ತರಕಾರಿ ತರಲು ಗಾಡಿ ನೂಕಿಕೊಂಡು ಹೋಗುತ್ತಿದ್ದರು.

ಮಾರ್ಗಮಧ್ಯೆ ಪ್ರದೀಪ್ ಸರ್ಕಲ್ ಬಳಿ ಬಿಎಂಟಿಸಿ ಬಸ್‌ವೊಂದು ಕೆಟ್ಟುನಿಂತಿತ್ತು. ಸಿಟಿಮಾರುಕಟ್ಟೆಯಿಂದ ರಾಮನಗರದ ಕಡೆಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಮಧ್ಯೆ ರಾಮದಾಸ್ ಗಾಡಿ ಸಿಕ್ಕಿ ಹಾಕಿಕೊಂಡಿದೆ. ಬಸ್ ತಗುಲಿ ಗಾಡಿಯ ಮರದ ಹಲಗೆ ರಾಮದಾಸ್ ಅವರ ಹೊಟ್ಟೆಗೆ ಚುಚ್ಚಿ ತೀವ್ರ ರಕ್ತಸ್ತಾವವಾಗಿ ಅವರು ಮೃಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com