ಬೀದರ್: ಹೊಂಡದಲ್ಲಿ ಬಿದ್ದು ಅವಳಿ ಮಕ್ಕಳ ಸಾವು

ನೀರಿನ ಹೊಂಡದಲ್ಲಿ ಬಿದ್ದು ಅವಳಿ ಮಕ್ಕಳು ಸಾವನ್ನಪ್ಪಿರುವ ಘಟನೆ ಬೀದರ್ ಜಿಲ್ಲೆ ಬಸವಕಲ್ಯಾಣದ ಶಿವಾಜಿ ಚೌಕ್ ನಲ್ಲಿ ರವಿವಾರ ಬೆಳಕಿಗೆ ಬಂದಿದೆ.
ಬೀದರ್: ಹೊಂಡದಲ್ಲಿ ಬಿದ್ದು ಅವಳಿ ಮಕ್ಕಳ ಸಾವು
ಬೀದರ್: ಹೊಂಡದಲ್ಲಿ ಬಿದ್ದು ಅವಳಿ ಮಕ್ಕಳ ಸಾವು
Updated on: 

ಬೀದರ್: ನೀರಿನ ಹೊಂಡದಲ್ಲಿ ಬಿದ್ದು ಅವಳಿ ಮಕ್ಕಳು ಸಾವನ್ನಪ್ಪಿರುವ ಘಟನೆ ಬೀದರ್ ಜಿಲ್ಲೆ ಬಸವಕಲ್ಯಾಣದ ಶಿವಾಜಿ ಚೌಕ್ ನಲ್ಲಿ ರವಿವಾರ ಬೆಳಕಿಗೆ ಬಂದಿದೆ.

ನಿತೀನ್ ಸೂರ್ಯವಂಶಿ ಅವರ ಮಕ್ಕಳಾದ ಆರ್ಯನ್ (5) ಮತ್ತು ದರ್ಶನ್ (5) ಮೃತಪಟ್ಟ ಅವಳಿ ಮಕ್ಕಳು. ಇವರು ನಿನ್ನೆಯಿಂದ ಕಾಣೆಯಾಗಿದ್ದು ಇಂದು ನೀರಿನ ಹೊಂಡದಲ್ಲಿ ಅವರ ಶವಗಳು ಪತ್ತೆಯಾಗಿವೆ.

ಶನಿವಾರ ಸಂಜೆ ಮನೆಯ ಸಮೀಪ ಆಟವಾಡುತ್ತಿದ್ದ ಮಕ್ಕಳು ಆಕಸ್ಮಿಕವಾಗಿ ನೀರಲ್ಲಿ ಬಿದ್ದು ಸಾವನ್ನಪ್ಪಿರುವರೆಂದು ಹೇಳಲಾಗಿದೆ.

ಬಸವಕಲ್ಯಾಣ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com