ದೋಸ್ತಿಗಳಿಗೆ ಶಾಕ್; ಮೈತ್ರಿ ಸರ್ಕಾರದ ರಾಜಕೀಯ ನೇಮಕಾತಿಗಳ ರದ್ದು ಮಾಡಿದ ಸಿಎಂ ಯಡಿಯೂರಪ್ಪ

ಬಿಜೆಪಿ ಸರ್ಕಾರ ಅಧಿಕಾರಕ್ಕೇರುತ್ತಲೇ ಕಾಂಗ್ರೆಸ್-ಜೆಡಿಎಸ್ ದೋಸ್ತಿಗಳಿಗೆ ಶಾಕ್ ನೀಡಿರುವ ಸಿಎಂ ಬಿಎಸ್ ಯಡಿಯೂರಪ್ಪ ಮೈತ್ರಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾಗಿದ್ದ ಎಲ್ಲ ರಾಜಕೀಯ ನೇಮಕಾತಿಗಳ ರದ್ದು ಮಾಡಿದ್ದಾರೆ.

Published: 02nd August 2019 12:00 PM  |   Last Updated: 02nd August 2019 08:10 AM   |  A+A-


CM Yeddyurappa canceled Congress-JDS Coalition Political Recruitments

ಸಂಗ್ರಹ ಚಿತ್ರ

Posted By : SVN SVN
Source : UNI
ಬೆಂಗಳೂರು: ಬಿಜೆಪಿ ಸರ್ಕಾರ ಅಧಿಕಾರಕ್ಕೇರುತ್ತಲೇ ಕಾಂಗ್ರೆಸ್-ಜೆಡಿಎಸ್ ದೋಸ್ತಿಗಳಿಗೆ ಶಾಕ್ ನೀಡಿರುವ ಸಿಎಂ ಬಿಎಸ್ ಯಡಿಯೂರಪ್ಪ ಮೈತ್ರಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾಗಿದ್ದ ಎಲ್ಲ ರಾಜಕೀಯ ನೇಮಕಾತಿಗಳ ರದ್ದು ಮಾಡಿದ್ದಾರೆ.

ಹೌದು.. ಮೈತ್ರಿ ಸರ್ಕಾರದಲ್ಲಿ ನೇಮಿಸಿದ್ದ ಹಲವು ಪ್ರಮುಖ ಹುದ್ದೆಗಳ ನೇಮಕಾತಿಯನ್ನು ಸಿಎಂ ಬಿಎಸ್ ಯಡಿಯೂರಪ್ಪ ರದ್ದು ಮಾಡಿದ್ದು, ಪ್ರಮುಖವಾಗಿ ಕೃಷಿ ಉತ್ಪನ್ನ ಮಾರುಕಟ್ಟೆಯ ವಿವಿಧ ಸಮಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳ ಸದಸ್ಯತ್ವವನ್ನು ರದ್ದುಪಡಿಸಿ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯಾದ್ಯಂತ ಸಾವಿರಾರು ಎಪಿಎಂಪಿಗಳಿಗೆ ಇತ್ತೀಚಿಗೆ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳನ್ನು ಮೈತ್ರಿ ಸರ್ಕಾರ ನೇಮಕಗೊಳಿಸಿ ಆದೇಶಿಸಿತ್ತು. ಆದರೆ ದಿಢೀರ್ ರಾಜ್ಯ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಕಾಂಗ್ರೆಸ್-ಜೆಡಿಎಸ್ ಸರ್ಕಾರದ ನೇಮಕಗೊಳಿಸಿದ್ದ ವಿವಿಧ ಸಮಿತಿಗಳ ಪದಾಧಿಕಾರಿಗಳಿಗೆ ಕೋಕ್ ನೀಡಿದೆ.

ಆ ಮೂಲಕ ದೋಸ್ತಿ ನಾಯಕರಿಗೆ ಸಿಎಂ ಬಿಎಸ್ ಯಡಿಯೂರಪ್ಪ ಶಾಕ್ ನೀಡಿದ್ದಾರೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp