ಕರ್ನಾಟಕ ಪ್ರವಾಹ: ರಂಗನತಿಟ್ಟು ಪಕ್ಷಿಧಾಮದಲ್ಲಿ ತಗ್ಗಿದ ನೆರೆ, ಆದರೂ ಪ್ರವಾಸಿಗರಿಗಿಲ್ಲ ಪ್ರವೇಶ!

ಕರ್ನಾಟಕದ ಖ್ಯಾತ ಪ್ರವಾಸಿತಾಣ ರಂಗನತಿಟ್ಟು ಪಕ್ಷಿಧಾಮದಲ್ಲಿ ಉಂಟಾಗಿದ್ದ ಪ್ರವಾಹ ತಗ್ಗಿದ್ದು, ದ್ವೀಪದಂತಾಗಿದ್ಜ ಗುಡ್ಡಗಳು ನಿಧಾನವಾಗಿ ಹೊರಜಗತ್ತಿಗೆ ಕಾಣತೊಡಗಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶ್ರೀರಂಗಪಟ್ಟಣ: ಕರ್ನಾಟಕದ ಖ್ಯಾತ ಪ್ರವಾಸಿತಾಣ ರಂಗನತಿಟ್ಟು ಪಕ್ಷಿಧಾಮದಲ್ಲಿ ಉಂಟಾಗಿದ್ದ ಪ್ರವಾಹ ತಗ್ಗಿದ್ದು, ದ್ವೀಪದಂತಾಗಿದ್ಜ ಗುಡ್ಡಗಳು ನಿಧಾನವಾಗಿ ಹೊರಜಗತ್ತಿಗೆ ಕಾಣತೊಡಗಿವೆ.

ಕೊಡಗು ಮತ್ತು ಮಡಿಕೇರಿ ಭಾಗದಲ್ಲಿ ಸುರಿಯುತ್ತಿದ್ದ ಭಾರಿ ಮಳೆಯಿಂದಾಗಿ ಶರವಾತಿ ನದಿಗೆ ವ್ಯಾಪಕ ನೀರು ಹರಿದಿತ್ತು. ಪರಿಣಾಮ ಭದ್ರಾ ಜಲಾಶಯದಿಂದ ಹೆಚ್ಚುವರಿ ನೀರನ್ನು ಒಮ್ಮೆಲೆ ಹರಿಸಿದ ಪರಿಣಾಮ ಕೆಆರ್ ಎಸ್ ಗು ಕೂಡ ಭಾರಿ ಪ್ರಮಾಣದ ನೀರು ಹರಿದು ಇಲ್ಲಿನ ಖ್ಯಾತ ರಂಗನತಿಟ್ಟು ಪಕ್ಷಿಧಾಮ ಜಲಾವೃತ್ತವಾಗಿತ್ತು. ಇದೀಗ ಪ್ರವಾಹ ತಗ್ಗಿದ್ದು ನೀರಿನ ಪ್ರಮಾಣ ಕೂಡ ಕಡಿಮೆಯಾಗಿದೆ.

ಹೀಗಾಗಿ ರಂಗನತಿಟ್ಟು ಪಕ್ಷಿಧಾಮ ಸಹಜಸ್ಥಿತಿಗೆ ಮರಳುತ್ತಿದೆ. ಪ್ರವಾಹತಗ್ಗಿದ್ದರೂ ರಂಗನತಿಟ್ಟು ಪಕ್ಷಿಧಾಮಕ್ಕೆ ಇನ್ನೂ ಕೆಲ ದಿನಗಳ ಕಾಲ ಪ್ರವಾಸಿಗರ ನಿರ್ಬಂಧಿಸಲು ಇಲ್ಲಿನ ಆಡಳಿತ ಮಂಡಳಿ ನಿರ್ಧರಿಸಿದೆ. ಮುಂದಿನ ಮೂರು ಅಥವಾ ನಾಲ್ಕು ದಿನಗಳ ಕಾಲ ಪರಿಸ್ಥಿತಿ ಅವಲೋಕಿಸಿ ಪ್ರವಾಸಿಗರಿಗೆ ಪ್ರವೇಶ ಕಲ್ಪಿಸುವ ಕುರಿತು ನಿರ್ಧರಿಸಲಾಗುತ್ತದೆ ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com