ರಾಜ್ಯದ ಅತೀ ಹೆಚ್ಚು ಮಳೆ ಬೀಳುವ ಆಗುಂಬೆಯಲ್ಲೇ ಮಳೆ ಕೊರತೆ!

ದಕ್ಷಿಣ ಭಾರತದ ಚಿರಾಪುಂಜಿ ಎಂದೇ ಖ್ಯಾತಿಯಾಗಿರುವ ರಾಜ್ಯದ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ಆಗುಂಬೆಯಲ್ಲೇ ಈ ಬಾರಿ ಮಳೆ ಕೊರತೆಯುಂಟಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಶಿವಮೊಗ್ಗ: ದಕ್ಷಿಣ ಭಾರತದ ಚಿರಾಪುಂಜಿ ಎಂದೇ ಖ್ಯಾತಿಯಾಗಿರುವ ರಾಜ್ಯದ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ಆಗುಂಬೆಯಲ್ಲೇ ಈ ಬಾರಿ ಮಳೆ ಕೊರತೆಯುಂಟಾಗಿದೆ.
ಹೌದು..ಕಳೆದ ವರ್ಷಕ್ಕಿಂತ ಈ ವರ್ಷ ಆಗುಂಬೆಯಲ್ಲಿ ಮಳೆ ಪ್ರಮಾಣ ತೀವ್ರ ಪ್ರಮಾಣದಲ್ಲಿ ಕುಗ್ಗಿದ್ದು, ಕಳೆದ ಜನವರಿಯಿಂದ ಈ ವರೆಗೂ ಆಗುಂಬೆಯಲ್ಲಿ ಕೇವಲ 5 ಸೆಂಮೀ ಮಳೆಯಾಗಿದೆ. ಕಳೆದ ವರ್ಷ ಈ ಹೊತ್ತಿಗೆ 27 ಸೆಂಮೀ ಮಳೆಯಾಗಿತ್ತು. ಅರಣ್ಯ ನಾಶವೇ ಮಳೆ ಕೊರತೆಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದ್ದು, ಶಿವಮೊಗ್ಗ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಲ್ಲಿ ಕೃಷಿ ಮತ್ತು ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. 
ಹವಾಮಾನ ಇಲಾಖೆಯ ದತ್ತಾಂಶಗಳ ಪ್ರಕಾರ, ಆಗುಂಬೆಯಲ್ಲಿನ ಮಳೆ ಕಾಡುಗಳಲ್ಲಿ 5 ಪಟ್ಟಿಗಿಂತ ಕಡಿಮೆ ಮಳೆಯಾಗಿದೆ. ಕಳೆದ ವರ್ಷ ಮೇ ತಿಂಗಳ ಹೊತ್ತಿಗೆ 20 ಸೆಂಮೀ ಮಳೆಯಾಗಿತ್ತು.  2016ರಲ್ಲಿ 6,151.7 ಮಿಮೀ ಮಳೆಯಾಗಿದ್ದರೆ, 2017ರಲ್ಲಿ 6,276.4 ಮಿ,ಮೀ ಮಳೆಯಾಗಿತ್ತು. 2018ರಲ್ಲಿ 8,208.9ಮಿ ಮೀ ಮಳೆಯಾಗಿದೆ. ಅಂತೆಯೇ ಇಲ್ಲಿ ಸರಾಸರಿ 7,624.2 ಮಿಮೀ ಮಳೆಯಾಗುತ್ತದೆ ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವಿಚಾರವಾಗಿ ಮಾತನಾಡಿರುವ ಪರಿಸರ ತಜ್ಞ ಅಜಯ್ ಕುಮಾರ್ ಅವರು, ಬಹುದೊಡ್ಡ ಪ್ರಮಾಣದಲ್ಲಿ ಅರಣ್ಯ ನಾಶವಾಗುತ್ತಿದೆ. ಅಂತೆಯೇ ಅಭಿವೃದ್ದಿ ಹೆಸರಲ್ಲಿ ಮತ್ತು ಬಗರ್ ಹುಕುಂ ಕ್ರಮಬದ್ಧಗೊಳಿಸುವಿಕೆ ಕೂಡ ಮಳೆ ಕೊರತೆಗೆ ಕಾರಣ ಎನ್ನಲಾಗಿದೆ. ಮಾಲತಿ, ವರಾಹಿ ನದಿಗಳಲ್ಲಿನ ನೀರು ಕಡಿಮೆಯಾಗಿದ್ದು, ತುಂಗಾ ನದಿಯಲ್ಲಿನ ನೀರಿನ ಹರಿವು ಕೂಡ ಕಡಿಮೆಯಾಗಿದೆ. ಪ್ರಮುಖ ಹೊಳೆ ಮತ್ತು ಝರಿಗಳು ಒಣಗುತ್ತಿದೆ. ಶಿವಮೊಗ್ಗ ಜಿಲ್ಲೆ ಆಗುಂಬೆ ಮಳೆಯ ಮೇಲೆ ಆಧಾರಿತವಾಗಿದೆ. ಆದರೆ ಅಲ್ಲಿನ ಅರಣ್ಯ ಪ್ರಾಂತ್ಯಗಳಲ್ಲಿ ಏನಾಗುತ್ತಿದೆ ಎಂಬುದು ಯಾರಿಗೂ ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com