ನಿನಗೆ ಸಹಾಯ ಮಾಡಲು ನನ್ನನ್ನು ದೇವರು ಕಳುಹಿಸಿದ್ದಾರೆ: ಮನೆ ಕೆಲಸದಾಕೆಗೆ ಫೇಸ್ ಬುಕ್ ಗೆಳೆಯನಿಂದ ವಂಚನೆ

ಅಲ್ಲಿ ಇಲ್ಲಿ ಕೆಲಸ ಮಾಡಿಕೊಂಡು ಹೊಟ್ಟೆ ಪಾಡು ನೋಡಿಕೊಂಡು ಅಷ್ಟೋ ಇಷ್ಟೋ ಹಣ ಉಳಿಸಿ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದ ಮಹಿಳೆ ಫೇಸ್‌ಬುಕ್ ಲಕ್ಷಾಂತರ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಅಲ್ಲಿ ಇಲ್ಲಿ ಕೆಲಸ ಮಾಡಿಕೊಂಡು ಹೊಟ್ಟೆ ಪಾಡು ನೋಡಿಕೊಂಡು ಅಷ್ಟೋ ಇಷ್ಟೋ ಹಣ ಉಳಿಸಿ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದ ಮಹಿಳೆ ಫೇಸ್‌ಬುಕ್ ಲಕ್ಷಾಂತರ ರುಪಾಯಿ ಹಣ ಕಳೆದುಕೊಂಡಿದ್ದಾಳೆ. 
ಫೇಸ್​ಬುಕ್ ಮೂಲಕ ಪರಿಚಯವಾದ ಲಂಡನ್ ಸ್ನೇಹಿತ 27 ಲಕ್ಷ ರೂ. ಮತ್ತು ದುಬಾರಿ ಗಿಫ್ಟ್ ಆಮಿಷವೊಡ್ಡಿ ಮಹಿಳೆಯಿಂದ 2.50 ಲಕ್ಷ ರೂ. ಪಡೆದು ವಂಚನೆ ಮಾಡಿದ್ದಾನೆ. ಅಂಗನವಾಡಿ ರಸ್ತೆಯ ಅಮುದಾ ವಂಚನೆಗೆ ಒಳಗಾದ ಮಹಿಳೆ. ಇವರು ಕೊಟ್ಟ ದೂರಿನ ಮೇರೆಗೆ ಆರೋಪಿ ಕೆ. ಸುಬೀನ್ಸ್ ವಿರುದ್ಧ  ಚನ್ನಮ್ಮನಕೆರೆ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಲಾಗಿದೆ.
ಏಪ್ರಿಲ್​ನಲ್ಲಿ ಫೇಸ್​ಬುಕ್​ನಲ್ಲಿ ಸುಬೀನ್ಸ್ ಪರಿಚಯವಾಗಿದ್ದು, ಲಂಡನ್ನಲ್ಲಿ ಇರುವುದಾಗಿ  ಹೇಳಿ ಸ್ನೇಹ ಬೆಳೆಸಿದನು ನಾನು ದೇವರ ಸಂದೇಶವಾಹಕ, ನಿನಗೆ ಸಹಾಯ ಮಾಡಲು ಬಂದಿದ್ದೇನೆ, ದೇವರೇ ನನ್ನನ್ನು ಇಲ್ಲಿಗೆ ಕಳುಹಿಸಿದ್ದಾರೆ ಎಂದು ಹೇಳಿ ನಂಬಿಸಿದ್ದ. ಕೆಲ ದಿನಗಳ ಬಳಿಕ ಲಂಡನ್​ನಿಂದ ದುಬಾರಿ ಗಿಫ್ಟ್ ಮತ್ತು 27 ಲಕ್ಷ ರೂ. ಕಳುಹಿಸುತ್ತೇನೆ. ಅದಕ್ಕೆ ತಗಲುವ ಕೊರಿಯರ್ ಮತ್ತು ಆದಾಯ ತೆರಿಗೆ ಶುಲ್ಕಪಾವತಿ ಮಾಡಬೇಕೆಂದು ಹೇಳಿದ.
ಏಪ್ರಿಲ್ 14 ರಂದು ಕರೆ ಮಾಡಿ, ಹಣ ಮತ್ತು ಗಿಫ್ಟ್ ಏರ್ ಪೋರ್ಟ್ ನಲ್ಲಿದೆಸ 25 ಸಾವಿರ ರು ನೀಡುವಂತೆ ಹೇಳಿದ, ಅದರಂತೆ ಆಕೆ ಹಣ ನೀಡಿದ್ದಳು, ಮತ್ತೆ ಕರೆ ಮಾಡಿ, ತೆರಿಗೆಯಾಗಿ 75ಸಾವಿರ ರು ನೀಡಬೇಕು ಎಂದು ಹೇಳಿದ. ತನ್ನ ಬಳಿಯಿದ್ದ ಚಿನ್ನಾಭರಣ ಮಾರಿ 75 ಸಾವಿರ ಹಣ ಹೊಂದಿಸಿ ಆತನಿಗೆ ನೀಡಿದ್ದಳು.ಟ
ಏಪ್ರಿಲ್ 15 ರಂದು ಮತ್ತೆ ಕರೆ ಮಾಡಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕೊರಿಯರ್ ಜಪ್ತಿ ಮಾಡಿದ್ದಾರೆ. ಒಂದೂವರ ಲಕ್ಷ ರೂ. ಬೇಕೆಂದು ಕೇಳಿದ್ದ, ಗಾಂಧಿ ಬಜಾರ್ ನ ಲೇವಾದೇವಿಗಾರರಿಂದ ಒಂದೂವರೆ ಲಕ್ಷ ರು ಹಣ ಪಡೆದು ಆತನ ಖಾತೆಗೆ ಜಮೆ ಮಾಡಿದ್ದಾಳೆ, ಅದಾದ ನಂತರ ಗಿಫ್ಟ್ ಕೆಂಪೇಗೌಡ ಏರ್ ಪೋರ್ಟ್ ನಲ್ಲಿದೆ 40 ಸಾವಿರ ರು ಬೇಕೆಂದು ಕೇಳಿದ್ದ, 
ಇದರಿಂದ ಅನುಮಾನಗೊಂಡ ಅಮುದಾ ಮಗಳು ಮತ್ತೊಂದು ಫೇಸ್ ಬುಕ್ ಖಾತೆಯಿಂದ ಆತನ ಜೊತೆ ಚಾಟಿಂಗ್ ಮಾಡಿದ್ದಾಳೆ, ಅವನು ಬೇರೆ ಬೇರೆ ಫೋಟೋ ಬಳಸಿ ಚೀಟಿಂಗ್ ಮಾಡಿರುವುದು ತಿಳಿದು ಬಂದಿದೆ, ಅದಾದ ನಂತರ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com