ಸಿಲಿಕಾನ್ ಸಿಟಿಯಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ ವೀರಯೋಧ #ಅಭಿನಂದನ್ #ಮೀಸೆ

ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರ ಮೀಸೆ ಇದೀಗ ದೇಶಾದ್ಯಂತ ಹೊಸ ಟ್ರೆಂಡ್ ಸೃಷ್ಟಿ ಮಾಡುತ್ತಿದ್ದು, ಇದೀಗ ಸಿಲಿಕಾನ್ ಸಿಟಿಗೂ ಅಭಿನಂದನ್ ಮೀಸೆ ಶೈಲಿ ಕಾಲಿಟ್ಟಿದೆ.

Published: 03rd March 2019 12:00 PM  |   Last Updated: 03rd March 2019 01:31 AM   |  A+A-


ಸಿಲಿಕಾನ್ ಸಿಟಿಯಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ ವೀರಯೋಧ #ಅಭಿನಂದನ್_ಮೀಸೆ

Posted By : SVN SVN
Source : ANI
ಬೆಂಗಳೂರು: ಪಾಕಿಸ್ತಾನದ ಎಫ್ 16 ಯುದ್ಧ ವಿಮಾನವನ್ನು ಹೊಡೆದುರುಳಿಸಿ, ಪಾಕ್ ನೆಲದಲ್ಲೇ ಪಾಕಿಸ್ತಾನಿ ಯೋಧರ ಪ್ರಶ್ನೆಗಳಿಗೆ ದಿಟ್ಟ ಉತ್ತರ ನೀಡಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರ ಮೀಸೆ ಇದೀಗ ದೇಶಾದ್ಯಂತ ಹೊಸ ಟ್ರೆಂಡ್ ಸೃಷ್ಟಿ ಮಾಡುತ್ತಿದ್ದು, ಇದೀಗ ಸಿಲಿಕಾನ್ ಸಿಟಿಗೂ ಅಭಿನಂದನ್ ಮೀಸೆ ಶೈಲಿ ಕಾಲಿಟ್ಟಿದೆ.

ಅಭಿನಂದನ್ ವರ್ತಮಾನ್ ಅವರ ಧೈರ್ಯ, ಸಾಹಸವನ್ನು ದೇಶದ ಜನತೆ ಮೆಚ್ಚಿಕೊಂಡಿದ್ದು, ಈಗ ಅವರ ಮೀಸೆಯೂ ಜನರ ಪ್ರೀತಿಗೆ ಕಾರಣವಾಗಿದೆ. ಈ ಹಿಂದೆ ಇದೇ ಅಭಿನಂದನ್ ಮೀಸೆಯನ್ನು ಪಾಕಿಸ್ತಾನದ ನಟಿ ವೀಣಾ ಮಲಿಕ್ ಸಹ ನಾನು ಇದುವರೆಗೂ ಈ ರೀತಿಯ ಮೀಸೆಯನ್ನು ಎಲ್ಲೂ ನೋಡಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. 

ಅಭಿನಂದನ್ ಅವರನ್ನು ಪಾಕಿಸ್ತಾನದ ವಶಕ್ಕೆ ಪಡೆದಾಗ ಪಾಕ್ ಪರ ಮಾತನಾಡಿ ಟ್ರೋಲ್ ಗೊಳಗಾಗಿದ್ದ ವೀಣಾ ಮಲಿಕ್ ನಂತರ, ಅಭಿನಂದನ್ ಮೀಸೆಯ ಬಗ್ಗೆಯೂ ಕಾಮೆಂಟ್ ಮಾಡಿದ್ದರು. ಇದೀಗ ಇದೇ ಮೀಸೆ ಬೆಂಗಳೂರಿನಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ್ದು, ಸಿಲಿಕಾನ್ ಸಿಟಿಯ ಯುವಕರು ಈ ಹೊಸ ಮಾದರಿಯ ಮೀಸೆಗೆ ಮಾರು ಹೋಗಿದ್ದಾರೆ. ಬೆಂಗಳೂರಿನ ಹಲವು ಬಾರ್ಬರ್ ಶಾಪ್ ಗಳಲ್ಲಿ ಯುವಕರು ಕೇಳಿ ಕೇಳಿ ಇದೇ ಮೀಸೆಯ ಶೈಲಿ ಮಾಡಿಸಿಕೊಳ್ಳುತ್ತಿದ್ದಾರೆ.
Stay up to date on all the latest ರಾಜ್ಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp