23 ವರ್ಷಗಳ ಬಳಿಕ ಉದ್ಯಾನನಗರಿಯಲ್ಲಿ 37.5 ಡಿಗ್ರಿಗೆ ಉಷ್ಣಾಂಶ ಏರಿಕೆ, ಮಳೆಯಾಗುವ ಸಾಧ್ಯತೆ

ಬಿಸಿಲ ಝಳಕ್ಕೆ ಉದ್ಯಾನನಗರಿ ಬೆಂಗಳೂರು ತತ್ತರಿಸಿ ಹೋಗಿದ್ದು, ಬರೊಬ್ಬರಿ 23 ವರ್ಷಗಳ ಬಳಿಕ ಸಿಲಿಕಾನ್ ಸಿಟಿಯ ತಾಪಮಾನ ಶುಕ್ರವಾರ 37.5 ಡಿಗ್ರಿಗೆ ಏರಿಕೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಬಿಸಿಲ ಝಳಕ್ಕೆ ಉದ್ಯಾನನಗರಿ ಬೆಂಗಳೂರು ತತ್ತರಿಸಿ ಹೋಗಿದ್ದು, ಬರೊಬ್ಬರಿ 23 ವರ್ಷಗಳ ಬಳಿಕ ಸಿಲಿಕಾನ್ ಸಿಟಿಯ ತಾಪಮಾನ ಶುಕ್ರವಾರ 37.5 ಡಿಗ್ರಿಗೆ ಏರಿಕೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಹವಾಮಾನ ಇಲಾಖೆ ಮೂಲಗಳು, '1996ರಲ್ಲಿ ಬೆಂಗಳೂರಿನ ಉಷ್ಣಾಂಶ 37.5 ಡಿಗ್ರಿಗೆ ಸಮಾನವಾಗಿ ಎರಿಕೆ ಕಂಡಿತ್ತು. ಈ ಬಾರಿಯು ರಾಜಧಾನಿಯ ಉಷ್ಣಾಂಶ 37.5 ಡಿಗ್ರಿಗೆ ಏರಿಕೆ ಕಂಡಿದ್ದು, ಮಳೆ, ಮೋಡಗಳ ಸೃಷ್ಠಿಯಾಗಿದೆ. ಹೀಗಾಗಿ ಇಂದು ಅಥವಾ ನಾಳೆ ಸಂಜೆಯ ವೇಳೆ ಉದ್ಯಾನನಗರಿಯ ಹಲವೆಡೆ ಮಳೆಯಾಗುವ ಸಾಧ್ಯತೆ ಎಂದು ಹೇಳಲಾಗಿದೆ.
ವಿಪರೀತ ತಾಪಮಾನ ಏರಿಕೆಯಿಂದ ಮಾರ್ಚ್​ ತಿಂಗಳಿನಲ್ಲಿ ಉಷ್ಣಾಂಶ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದ್ದು, ದಾಖಲೆ ಮಟ್ಟ ಮೀರಿ ಉಷ್ಣಾಂಶ ಹೆಚ್ಚುತ್ತಿರುವುದರಿಂದ ಆತಂಕದ ಮನೆ ಮಾಡಿದೆ. ಬೆಂಗಳೂರಿನಲ್ಲಿ ಪ್ರಸ್ತುತ 35ರಿಂದ 38 ಡಿಗ್ರಿ ಸೆಲ್ಸಿಯಸ್ ದಾಖಲೆಯ ಉಷ್ಣಾಂಶವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com