ಭಾರೀ ಟೀಕೆಗಳ ಬಳಿಕ ಪ್ರವಾಹ ಪೀಡಿತ ಗದಗಕ್ಕೆ ಸಚಿವ ಸಿಸಿ ಪಾಟೀಲ್ ಭೇಟಿ

ಟೀಕೆಗಳ ಕುರಿತ ಮಾಧ್ಯಮಗಳ ವರದಿಯಿಂದ ಎಚ್ಚೆತ್ತ ಜಿಲ್ಲಾ ಉಸ್ತುವಾರಿ ಸಚಿವ ಸಿಸಿ ಪಾಟೀಲ್ ಅವರು ಪ್ರವಾಹ ಪೀಡಿತ ಗದಗ ಜಿಲ್ಲೆಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯನ್ನು ವೀಕ್ಷಣೆ ಮಾಡಿದರು. 
ಸಿಸಿ ಪಾಟೀಲ್
ಸಿಸಿ ಪಾಟೀಲ್

ಗದಗ: ಟೀಕೆಗಳ ಕುರಿತ ಮಾಧ್ಯಮಗಳ ವರದಿಯಿಂದ ಎಚ್ಚೆತ್ತ ಜಿಲ್ಲಾ ಉಸ್ತುವಾರಿ ಸಚಿವ ಸಿಸಿ ಪಾಟೀಲ್ ಅವರು ಪ್ರವಾಹ ಪೀಡಿತ ಗದಗ ಜಿಲ್ಲೆಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯನ್ನು ವೀಕ್ಷಣೆ ಮಾಡಿದರು. 

ಗದಗ ಜಿಲ್ಲೆಯ ಹಲವು ಗ್ರಾಮಗಳಿಗೆ ಭೇಟಿ ನೀಡಿದ ಸಚಿವರು ಜನರ ಸಮಸ್ಯೆಗಳನ್ನು ಆಲಿಸಿದರು. ಪ್ರವಾಹ ಪೀಡಿತರ ಸಮಸ್ಯೆ ಪರಿಸಲು ಸರ್ಕಾರ ದೊಡ್ಡ ಮೊತ್ತದ ಪರಿಹಾರವನ್ನು ವ್ಯಯಿಸುತ್ತಿದೆ. ನೆರೆ ಪೀಡಿತ ಪ್ರದೇಶಗಳಿಗೆ ಸರ್ಕಾರ ಎಷ್ಟು ಹಣವನ್ನು ಖರ್ಚು ಮಾಡುತ್ತಿದೆ ಎಂಬುದು ನಿಮಗೇ ಗೊತ್ತಿದೆ ಎಂದು ಜನರೊಂದಿಗೆ ಮಾತುಕತೆ ನಡೆಸಿದ್ದಾರೆ. 

ಶಾಸಕರೂ ಕೂಡ ಹಣವನ್ನು ಪಡೆಯದೆಯೇ ಅದನ್ನೂ ನೆರೆ ಪೀಡಿತರಿಗೆ ನೀಡುತ್ತಿದ್ದಾರೆ. ಗ್ರಾಮಸ್ಥರ ಸ್ಥಳಾಂತರ ಕುರಿತು ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಸ್ಥಳಾಂತರವಾಗುವುದೇ ಆದರೆ, ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. 

ಇದೇ ವೇಳೆ ರೋಣ ತಾಲೂಕಿನ ಹೊಳೆಆಲೂರು ಪಟ್ಟಣಕ್ಕೆ ಸಚಿವರು ಭೇಟಿ ನೀಡಿದ್ದು, ಈ ವೇಳೆ ಮಹಿಳೆಯೊಬ್ಬರು ಸಚಿವನ್ನು ತರಾಟೆಗೆ ತೆಗೆದುಕೊಂಡಿದ್ದರು ಎಂದು ವರದಿಗಳು ತಿಳಿಸಿವೆ. 

ಇಷ್ಟಿ ದಿನ ಎಲ್ಲಿ ಹೋಗಿದ್ರಿ? ಈಗೇರೆ ಬಂದಿದ್ದೀರಿ ಎಂದು ಸಚಿವರನ್ನು ಮಹಿಳೆ ಪ್ರಶ್ನಿಸಿದ್ದಾರೆ. ಇದಕ್ಕೆ ಗರಂ ಆದ ಸಚಿವರು, ಯಾರೋ ಹೇಳಿಕೊಟ್ಟಂತೆ ಮಾತನಾಡ ಬೇಡಿ. ರಸ್ತೆ ದುರಸ್ತಿ, ಮನೆ ದುರಸ್ತಿ ಆಮೇಲೆ ನೋಡುತ್ತೇವೆ. ಒಂದು ಬುಟ್ಟಿ ಮಣ್ಣು ಹಾಕಲಿಕ್ಕೂ ಸರ್ಕಾರದಲ್ಲಿ ಹಣವಿಲ್ಲ ಎಂದು ತಿಳಿಸಿದ್ದಾರೆ. 

ಬಳಿಕ ಮಹಿಳೆ ತಮ್ಮ ಅಸಮಾಧಾನವನ್ನು ಮುಂದುವರೆಸುತ್ತಿದ್ದ ಹಿನ್ನಲೆಯಲ್ಲಿ ನಾನು ಬೆಂಗಳೂರಿಗೆ ಹೋಗಬೇಕು. ಫ್ಲೈಟ್ ಮಿಸ್ ಇಗುತ್ತದೆ. ಸಮಯವಿಲ್ಲ ಬೇಗ ಹೋಗಬೇಕೆಂದು ಹೇಳಿದರು. ಈ ವೇಳೆ ಕೋಪಗೊಂಡ ಮಹಿಳೆ, ಸಮಯವಿಲ್ಲದಿದ್ದರೆ, ಬೆಂಗಳೂರಿನಲ್ಲೇ ಕುಳಿತು ಮಾತನಾಡ, ನಾವು ಟಿವಿಯಲ್ಲಿಯೇ ನೋಡುತ್ತೇವೆ. ಇಲ್ಲಿಗೇಕೆ ಬಂದಿರಿ ಎಂದರು. ಬಳಿಕ ಸಚಿವರು ಪಟ್ಟಣದಿಂದ ಕಾಲ್ಕಿತ್ತರು ಎಂದು ವರದಿಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com