ಹೆಲ್ಮೆಟ್ ಹಾಳಾಗೋಗ್ಲಿ.. ಚಪ್ಪಲಿ ಹಾಕ್ಕೊಂಡು ಗಾಡಿ ಓಡ್ಸಿದ್ರೂ ದಂಡ ಗ್ಯಾರಂಟಿ..!

ಮೋಟಾರು ಕಾಯ್ದೆ ತಿದ್ದುಪಡಿ ಬಳಿಕ ನೂತನ ಸಂಚಾರಿ ನಿಯಮಗಳು ಹಾಗೂ ದುಬಾರಿ ದಂಡದಿಂದ ಬೇಸ್ತು ಬಿದ್ದಿರುವ ಸಾರ್ವಜನಿಕರಿಗೆ ಮತ್ತೊಂದು ಶಾಕ್ ಕಾದಿದ್ದು, ಇನ್ನುಮುಂದೆ ಚಪ್ಪಲಿ ಹಾಕಿಕೊಂಡು ವಾಹನ ಚಲಾಯಿಸದರೂ ದಂಡ ಗ್ಯಾರಂಟಿ ಎನ್ನಲಾಗುತ್ತಿದೆ.

Published: 11th September 2019 09:37 AM  |   Last Updated: 11th September 2019 09:37 AM   |  A+A-


Motorcycle Riders

ಸಂಗ್ರಹ ಚಿತ್ರ

Posted By : Srinivasamurthy VN
Source : Online Desk

ಬೆಂಗಳೂರು: ಮೋಟಾರು ಕಾಯ್ದೆ ತಿದ್ದುಪಡಿ ಬಳಿಕ ನೂತನ ಸಂಚಾರಿ ನಿಯಮಗಳು ಹಾಗೂ ದುಬಾರಿ ದಂಡದಿಂದ ಬೇಸ್ತು ಬಿದ್ದಿರುವ ಸಾರ್ವಜನಿಕರಿಗೆ ಮತ್ತೊಂದು ಶಾಕ್ ಕಾದಿದ್ದು, ಇನ್ನುಮುಂದೆ ಚಪ್ಪಲಿ ಹಾಕಿಕೊಂಡು ವಾಹನ ಚಲಾಯಿಸದರೂ ದಂಡ ಗ್ಯಾರಂಟಿ ಎನ್ನಲಾಗುತ್ತಿದೆ.

ಹೌದು.. ಈಗಾಗಲೇ ಜಾರಿಗೆ ಬಂದಿರುವ ಹೊಸ ಹೊಸ ಟ್ರಾಫಿಕ್ ನಿಯಮಗಳಿಂದ ವಾಹನ ಸವಾರರು ಆಘಾತಕ್ಕೊಳಗಾಗಿದ್ದು, ಈ ಬೆನ್ನಲ್ಲೆ ವಾಹನ ಸವಾರರರಿಗೆ ಮತ್ತೊಂದು ಶಾಕ್ ತಗುಲಿದೆ. ಸವಾರರು ಸ್ಲಿಪ್ಪರ್, ಹವಾಯಿ ಚಪ್ಪಲ್ ಹಾಕಿಕೊಂಡು ಗೇರ್ ಹೊಂದಿರುವ ದ್ವಿಚಕ್ರ ವಾಹನ ಓಡಿಸುವಂತಿಲ್ಲ. ಒಂದು ವೇಳೆ ಈ ನಿಯಮವನ್ನು ಉಲ್ಲಂಘಿಸಿದರೆ 1,000 ರೂ ದಂಡ ತೆರಬೇಕಾಗಿರುತ್ತದೆ. ಈ ತಪ್ಪು ಮರುಕಳಿಸಿದರೆ ದಂಡದ ಜೊತೆಗೆ 15 ದಿನಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

ಸ್ಲಿಪ್ಪರ್, ಹವಾಯಿ ಚಪ್ಪಲಿ ಹಾಕಿದರೆ ದ್ವಿಚಕ್ರ ವಾಹನದ ಗೇರ್ ಬದಲಾಯಿಸಲು, , ಪಾರ್ಕಿಂಗ್‍ನಿಂದ ವಾಹನ ತೆಗೆಯಲು ಸಮಸ್ಯೆ ಆಗಲಿದೆ. ಜೊತೆಗೆ ಅಪಘಾತದವಾದಾಗ ಕಾಲಿಗೆ ಗಾಯವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಸವಾರರು ಶೂ ಧರಿಸಿದರೆ ಒಳ್ಳೆಯದು ಎಂಬುದು ನಿಯಮದ ಉದ್ದೇಶವಾಗಿದೆ. 1988ರ ಮೋಟಾರು ವಾಹನ ಕಾಯ್ದೆಯಲ್ಲೇ ಇದನ್ನು ಉಲ್ಲೇಖಿಸಲಾಗಿದೆ.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp