ಬೆಂಗಳೂರು: ಪಿಒಪಿ ಗಣೇಶ ಮೂರ್ತಿಗಳ ನಿಲ್ಲದ ಹಾವಳಿ

ಬಿಬಿಎಂಪಿ ಎಷ್ಟೇ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದರೂ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಮೂರ್ತಿಗಳು ಹಾವಳಿ ಮಾತ್ರ ಇನ್ನೂ ನಿಂತಿಲ್ಲ.
ನೀರಿನಲ್ಲಿ ತೇಲಿ ಬರುತ್ತಿರುವ ಗಣೇಶ ಮೂರ್ತಿಗಳು
ನೀರಿನಲ್ಲಿ ತೇಲಿ ಬರುತ್ತಿರುವ ಗಣೇಶ ಮೂರ್ತಿಗಳು

ಬೆಂಗಳೂರು: ಬಿಬಿಎಂಪಿ ಎಷ್ಟೇ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದರೂ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಮೂರ್ತಿಗಳು ಹಾವಳಿ ಮಾತ್ರ ಇನ್ನೂ ನಿಂತಿಲ್ಲ. 

ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿಗಳ ಸಂಖ್ಯೆ ಶೇ.99ರಷ್ಟು ಕಡಿಮೆಯಾಗಿದ್ದು, ರಾಜ್ಯದಲ್ಲಿ ಬಹುತೇಕ ಮಂದಿ ಮಣ್ಣಿನ ಗಣೇಶ ಮೂರ್ತಿಗಳನ್ನು ಬಳಕೆ ಮಾಡಿದ್ದಾರೆಂದು ಬಿಬಿಎಂಪಿ ಹೇಳಿತ್ತು. ಆದರೆ, ಸರ್ಜಾಪುರ ನಿವಾಸಿಗಳು ಮಾತ್ರ ಬಿಬಿಎಂಪಿಯ ಈ ಮಾಹಿತಿಯನ್ನು ಅಲ್ಲಗೆಳೆದಿದೆ. 

ಪಿಒಪಿ ಗಣೇಶ ಮೂರ್ತಿ ಕಡಿಮೆಯಾಗಿರುವುದು ನಮಗಂತೂ ಎಲ್ಲಿಯೂ ಕಾಣುತ್ತಿಲ್ಲ. ಕೈಕೊಂಡ್ರಹಳ್ಳಿ ಕೆರೆಯಲ್ಲಿ ಈಗಲೂ ಸಾಕಷ್ಟು ಗಣೇಶ ಮೂರ್ತಿಗಳ ಭಾಗಗಳು ತೇಲಿ ಬರುತ್ತಿವೆ. ಕೆರೆ ಸ್ವಚ್ಛಗೊಳಿಸಲು ಈವರೆಗೂ ಯಾರೊಬ್ಬರೂ ಬಂದಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ. 

ಪಿಒಪಿ ಗಣೇಶ ಮೂರ್ತಿಗಳಿಗೆ ನಿಷೇಧ ಹೇರಿದ್ದರೂ ಹೆಚ್ಚೆಚ್ಚು ಸಂಖ್ಯೆಯ ಪಿಒಪಿ ಗಣೇಶ ಮೂರ್ತಿಗಳನ್ನು ಕೆರೆಯಲ್ಲಿ ಮುಳುಗಿಸಲಾಗಿದೆ. ಕರ್ನಾಟಕ ಪರಿಸರ ಮಾಲಿನ್ಯ ಮಂಡಳಿ ಬಿಬಿಎಂಪಿ ಏನು ಮಾಡುತ್ತಿದೆ. ಕೆರೆ ನಾಶಗೊಂಡಿದ್ದು, ನೀರು ವಾಸನೆ ಬರಲು ಆರಂಭವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. 

ಕಳೆದ ವರ್ಷ ಹಾಕಲಾಗಿದ್ದ ಗಣೇಶ ಮೂರ್ತಿಗಳನ್ನು ತೆಗೆದಿರಲಿಲ್ಲ. ಗಣೇಶ ಚತುರ್ಥಿಗೆ ಇನ್ನು ಒಂದು ವಾರವಿರುವಾಗ ಕೆರೆಯನ್ನು ಸ್ವಚ್ಛಗೊಳಿಸಲಾಗಿತ್ತು. ಈ ವರ್ಷ ಕೂಡ ಇದೇ ರೀತಿ ಆಗುವ ರೀತಿ ಕಾಣುತ್ತದೆ ಎಂದು ಸ್ಥಳೀಯ ನಿವಾಸಿ ಆಶಿಶ್ ಹೇಳಿದ್ದಾರೆ. 

ಕೆಲ ಮೂರ್ತಿಗಳು 5 ಅಡಿಗಿಂತಲೂ ದೊಡ್ಡದಾಗಿವೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ಜನರೂ ಕೂಡ ತಮ್ಮ ತಮ್ಮ ಜವಾಬ್ದಾರಿಗಳನ್ನು ತಿಳಿಯಬೇಕು. ಬಿಬಿಎಂಪಿ ನನ್ನ ಕೆಲಸವನ್ನು ಸೂಕ್ತ ರೀತಿಯಲ್ಲಿ ಮಾಡುತ್ತಿಲ್ಲ. ಜನರನ್ನು ಕಳುಹಿಸಿ ಕರೆ ಸ್ವಚ್ಛಗೊಳಿಸುವ ಕಾರ್ಯಗಳನ್ನು ಮಾಡುತ್ತಿಲ್ಲ. ಕೆರೆಯಲ್ಲಿ ಅರ್ಧಂಬರ್ಧ ಬಿದ್ದಿರುವ ಗಣೇಶ ಮೂರ್ತಿಗಳನ್ನು ನೋಡಿದರೆ ಬಹಳ ನೋವಾಗುತ್ತದೆ ಎಂದು ಸುಷ್ಮಾ ರೆಡ್ಡಿ ಎಂಬುವವರು ತಿಳಿಸಿದ್ದಾರೆ. 

ಪಿಒಪಿ ಗಣೇಶ ಮೂರ್ತಿಗಳ ಬಳಕೆ ಸಂಖ್ಯೆ ಶೂನ್ಯಕ್ಕೆ ಇಳಿದಿಲ್ಲ. ಆದರೆ, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಕಡಿಮೆಯಾಗಿದೆ. ನಾಗರೀಕರ ಬದಲಾವಣೆಯಿಂದ ಇದು ಸಾಧ್ಯವಾಗಿದೆ. ಕೆಲವರು ಇನ್ನೂ ಪಿಒಪಿ ಗಣೇಶ ಮೂರ್ತಿಗಳನ್ನೇ ಬಳಕೆ ಮಾಡುತ್ತಿದ್ದಾರೆ. ನಗರ ಎಲ್ಲಾ ಕೆರೆಗಳನ್ನೂ ಸ್ವಚ್ಛಗೊಳಿಸುತ್ತಿದ್ದೇವೆ. ಕೈಕೊಂಡ್ರಹಳ್ಳಿ ಕೆರೆಯನ್ನೂ ಶೀಘ್ರದಲ್ಲಿಯೇ ಸ್ವಚ್ಛಗೊಳಿಸಲಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com