ಬೆಂಗಳೂರು ಮಹಿಳೆಯರೇ ಪಿಂಕ್ ಸಾರಥಿ ಬಗ್ಗೆ ನಿಮಗೆಷ್ಟು ಗೊತ್ತು?

ರಸ್ತೆಗಳಲ್ಲಿ ಪ್ರಯಾಣಿಸುವ ಮಹಿಳೆಯರ ರಕ್ಷಣೆಗಾಗಿ ರಾಜ್ಯ ಸರ್ಕಾರ ನಿರ್ಭಯಾ ಯೋಜನೆಯಡಿಯಲ್ಲಿ ಪಿಂಕ್ ಸಾರಥಿ ಸೇವೆಯನ್ನು ಆರಂಭಿಸಿದೆ, ಆದರೆ, ಈ ಸೇವೆ ಬಗ್ಗೆ ನಗರದಲ್ಲಿರುವ ಸಾಕಷ್ಟು ಮಹಿಳೆಯರಿಗೆ ಅರಿವೇ ಇಲ್ಲಂತಾಗಿದೆ. 
ಪಿಂಕ್ ಸಾರಥಿ
ಪಿಂಕ್ ಸಾರಥಿ

ಬೆಂಗಳೂರು: ರಸ್ತೆಗಳಲ್ಲಿ ಪ್ರಯಾಣಿಸುವ ಮಹಿಳೆಯರ ರಕ್ಷಣೆಗಾಗಿ ರಾಜ್ಯ ಸರ್ಕಾರ ನಿರ್ಭಯಾ ಯೋಜನೆಯಡಿಯಲ್ಲಿ ಪಿಂಕ್ ಸಾರಥಿ ಸೇವೆಯನ್ನು ಆರಂಭಿಸಿದೆ, ಆದರೆ, ಈ ಸೇವೆ ಬಗ್ಗೆ ನಗರದಲ್ಲಿರುವ ಸಾಕಷ್ಟು ಮಹಿಳೆಯರಿಗೆ ಅರಿವೇ ಇಲ್ಲಂತಾಗಿದೆ. 

ಮಹಿಳೆಯರ ರಕ್ಷಣೆಗಾಗಿ ಪ್ರತೀನಿತ್ಯ ನಗರದ ರಸ್ತೆಗಳಲ್ಲಿ 25 ವಾಹನಗಳು ಚಲಿಸುತ್ತಿದೆ. ಆದರೆ, ಸೇವೆ ಆರಂಭವಾದಾಗಿನಿಂದಲೂ ಈ ವರೆಗೂ ಕೇವಲ 18 ದೂರುಗಳು ಮಾತ್ರವೇ ಬಂದಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ರಸ್ತೆಗಳಲ್ಲಿ ಚಲಿಸುವ ಈ ಪಿಂಕ್ ವಾಹನಗಳ ಬಗ್ಗೆ ಎಷ್ಟೋ ಮಹಿಳೆಯರಿಗೆ ಮಾಹಿತಿಗಳೇ ಇಲ್ಲ. ರಸ್ತೆಯಲ್ಲಿ ಚಲಿಸುವ ಈ ಪಿಂಕ್ ವಾಹನಗಳನ್ನು ಗುರ್ತಿಸುವವರ ಸಂಖ್ಯೆಯಂತೂ ಬೆರಳೆಕೆಯಷ್ಟು ಮಾತ್ರವಾಗಿದೆ. ಈ ವಾಹನವನ್ನು ಸಂಪರ್ಕಿಸುವುದು ಹೇಗೆ ಎಂಬುದು ಕೂಡ ಎಷ್ಟೋ ಮಹಿಳೆಯರಿಗೆ ತಿಳಿದೇ ಇಲ್ಲ. 

ಪಿಂಕ್ ಸಾರಥಿ ಸೇವೆಯನ್ನು ಆರಂಭಿಸಿದ್ದ ರಾಜ್ಯ ಸರ್ಕಾರ ಸೇವೆಗಾಗಿ ಕಾಲ್ ಸೆಂಟರ್ (18004251663) ನಂಬರ್'ನ್ನು ನೀಡಿತ್ತು. ಇದೀಗ ಈ ರಕ್ಷಣಾ ವಾಹನ ವಾಟ್ಸ್ ಆ್ಯಪ್  (7760991212) ನಂಬರ್ ನ್ನು ಹೊಂದಿದೆ. ಸೇವೆ ಬಗ್ಗೆ ಅರಿವಿಲ್ಲದ ಮಹಿಳೆಯರು ಈ ಬಗ್ಗೆ ಮಾಹಿತಿ ನೀಡಿದರೆ, ಮೊದಲ ಬಾರಿಗೆ ಮಾಹಿತಿ ಕೇಳುತ್ತಿರುವ ರೀತಿಯಲ್ಲಿ ಪ್ರತಿಕ್ರಿಯೆಗಳನ್ನು ನೀಡಲು ಆರಂಭಿಸಿದ್ದಾರೆ. 

ಕೆಲ ಮಹಿಳೆಯರು ವಾಹನವನ್ನು ನೋಡಿ ಇದು ಪಿಂಕ್ ಹೊಯ್ಸಳ. ಬೆಂಗಳೂರು ನಗರ ಪೊಲೀಸರಿಗೆ ಸಂಬಂಧಿಸಿದ್ದು ಎಂದು ಹೇಳುತ್ತಿದ್ದಾರೆ. 

ಸೇವೆ ಬಗ್ಗೆ ನನಗೆ ತಿಳಿದೇ ಇಲ್ಲ. ಸರ್ಕಾರ ಸೇವೆ ಬಗ್ಗೆ ಜನರಿಗೆ ಮಾಹಿತಿ ನೀಡುವ ಕಾರ್ಯವನ್ನು ಮಾಡಬೇಕು. ಮಹಿಳೆಯರಿಗೆ ಫೋನ್ ನಂಬರ್ ಗಳು ತಿಳಿಯುವಂತೆ ಮಾಡಬೇಕು ಎಂದು ಬಿಕಾಂ ಪದವಿ ಮಾಡುತ್ತಿರುವ ವಿದ್ಯಾರ್ಥಿನಿ ಶಾಲಿನಿ ಹೇಳಿದ್ದಾರೆ. 

ಬಸ್ ಗಳನ್ನು ಹತ್ತಿದ ಸಂದರ್ಭದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುತ್ತೇನೆ. ಬಸ್ ನಿರ್ವಾಹಕರು ಸರಿಯಾಗಿ ಚಿಲ್ಲರೆ ನೀಡುವುದಿಲ್ಲ. ನಿಗದಿತ ಸ್ಥಳದಲ್ಲಿ ಬಸ್ ಗಳನ್ನು ನಿಲ್ಲಿಸುವುದಿಲ್ಲ. ಹೆಚ್ಚು ಜನ ಇದ್ದ ಸಂದರ್ಭದಲ್ಲಂತೂ ಕೆಲ ಪುರುಷರು ದುರ್ನಡತೆ ತೋರುತ್ತಾರೆ. ಪಿಂಕ್ ಸೇವೆ ಅಷ್ಟೇ ಅಲ್ಲದೆ, ಬಸ್ ಗಳಲ್ಲಿ ಕ್ಯಾಮೆರಾಗಳನ್ನು ಇಟ್ಟು ಪೊಲೀಸರು ಪರಿಶೀಲನೆ ನಡೆಸುತ್ತಿರಬೇಕು ತೇಜಸ್ವಿನಿ ಎಂಬುವವರು ಹೇಳಿದ್ದಾರೆ. 

ಸಾರಥಿ ವಾಹನಗಳ ಬಗ್ಗೆ ನನಗೆ ತಿಳುವಳಿಕೆ ಇರಲಿಲ್ಲ. ಮೆಜೆಸ್ಟಿಕ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸರ್ಕಾರ ಈ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡಬೇಕೆಂದು ತಿಳಿಸಿದ್ದಾರೆ. 

ಸೇವೆ ಆರಂಭವಾದಾಗಿನಿಂದಲೂ ಈ ವರೆಗೂ ನಮಗೆ ದೊಡ್ಡ ಮಟ್ಟದ ದೂರುಗಳಾವುದೂ ದಾಖಲಾಗಿಲ್ಲ. ಬನಶಂಕರಿಯಿಂದ ಗೊರಗುಂಟೆ ಪಾಳ್ಯದವರೆಗೂ ಗಸ್ತು ತಿರುಗುತ್ತಿರುತ್ತೇವೆ. ಸಣ್ಣಪುಟ್ಟ ಬಸ್ ನಿಲ್ದಾಣಗಳಲ್ಲೂ ಸುತ್ತಾಡುತ್ತಿರುತ್ತೇವೆ. ಈ ವೇಳೆ ಲೈಂಗಿಕ ದೌರ್ಜನ್ಯದಂತಹ ದೂರುಗಳಾವುದೂ ಬಂದಿಲ್ಲ ಎಂದು ಮೆಜೆಸ್ಟಿಕ್ ಮತ್ತು ಯಶವಂತಪುರದ ಪಿಂಕ್ ಸಾರಥಿಯ ಇಬ್ಬರು ಸಿಬ್ಬಂದಿಗಳು ಹೇಳಿದ್ದಾರೆ. 

ಕಾಲ್ ಸೆಂಟರ್ ನಂಬರ್ ಹಾಗೂ ವಾಟ್ಸ್ ಆ್ಯಪ್ ನಂಬರ್ ಗಳನ್ನು ಬಸ್ ನಿಲ್ದಾಣಗಳಲ್ಲಿ ಹಾಕಲಾಗುತ್ತದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com