ಹಾಸನ: ಮಹಿಳೆಯ ಪ್ರಜ್ಞೆ ತಪ್ಪಿಸಿ 1.75 ಲಕ್ಷ ರೂ.ಮೌಲ್ಯದ ಮಾಂಗಲ್ಯ ಸರ ಅಪಹರಣ  

ಮಹಿಳೆಯ ಪ್ರಜ್ಞೆ ತಪ್ಪಿಸಿ 1.75 ಲಕ್ಷ ರೂ ಮೌಲ್ಯದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದಲ್ಲಿ ನಡೆದಿದೆ‌.

Published: 12th September 2019 06:58 PM  |   Last Updated: 12th September 2019 07:00 PM   |  A+A-


CasualPhoto

ಸಾಂದರ್ಭಿಕ ಚಿತ್ರ

Posted By : nagaraja
Source : UNI

ಹಾಸನ: ಮಹಿಳೆಯ ಪ್ರಜ್ಞೆ ತಪ್ಪಿಸಿ 1.75 ಲಕ್ಷ ರೂ ಮೌಲ್ಯದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದಲ್ಲಿ ನಡೆದಿದೆ‌.

ದಮ್ಮನಿಂಗಲ ಗ್ರಾಮದ ಕೆಂಗಮ್ಮ ಸರ ಕಳೆದುಕೊಂಡ ಮಹಿಳೆ. ಪುತ್ರ ಕೇಶವನ ಆರೋಗ್ಯ ತಪಾಸಣೆ ಮಾಡಿಸಲು ಇಲ್ಲಿನ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಕೇಶವನನ್ನು ಆಸ್ಪತ್ರೆಯ ಬಳಿ ಇರಿಸಿ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣದ ಬಳಿಗೆ ಕೆಂಗಮ್ಮ ಬಂದಿದ್ದಾರೆ. 

ಅದೇ ಮಾರ್ಗದಲ್ಲಿ ಪರ್ಸ್ ಒಂದು ಬಿದ್ದಿತ್ತು. ಅಲ್ಲಿದ್ದ ಅಪರಿಚಿತ ಮಹಿಳೆಯೊಬ್ಬಳು, ಕೆಂಗಮ್ಮ ಅವರಿಗೆ  'ನಿಮ್ಮ ಪರ್ಸ್ ಬಿದ್ದಿದೆ ಎತ್ತಿಕೊಳ್ಳಿ' ಎಂದು ಹೇಳಿದ್ದಾರೆ. ಅದರಂತೆ ಕೆಂಗಮ್ಮ ಪರ್ಸ್ ಎತ್ತಿಕೊಂಡಾಗ ಹಣ ಹಂಚಿಕೊಳ್ಳೋಣ, ಬನ್ನಿ ಪಕ್ಕದ ಪಾಕ್೯ಗೆ ಹೋಗೋಣ ಎಂದು ಹೇಳಿ ಅಲ್ಲಿಗೆ ಕರೆದುಕೊಂಡು ಹೋಗಿದ್ದಾಳೆ

ಅಷ್ಟೊತ್ತಿಗೆ ಅಲ್ಲಿಗೆ ಸುಮಾರು 40 ವರ್ಷ ಪ್ರಾಯದ ವ್ಯಕ್ತಿ ಬಂದು 'ಪಸ್೯ ನನ್ನದು' ಎಂದು ಹೇಳಿ ಕೆಂಗಮ್ಮ ಅವರ ಪ್ರಜ್ಞೆ ತಪ್ಪಿಸಿ ಸುಮಾರು 55 ಗ್ರಾಂ ತೂಕದ ಸರ ಕಸಿದುಕೊಂಡು ಇಬ್ಬರೂ ಪರಾರಿಯಾಗಿದ್ದಾರೆ.ಶ್ರವಣಬೆಳಗೊಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.


Stay up to date on all the latest ರಾಜ್ಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp