ಅಪಘಾತ: ಆರ್'ಟಿಒ ಅಧಿಕಾರಿಗೆ ಥಳಿಸಿದ ಸ್ಥಳೀಯರು

ವೇಗವಾಗಿ ಕಾರಿನಲ್ಲಿ ಬರುತ್ತಿದ್ದ ಸಾರಿಗೆ ಇಲಾಖೆ ಇನ್ಸ್ ಪೆಕ್ಟರ್ ಒಬ್ಬರು ಆಟೋರಿಕ್ಷಾಗೆ ರಭಸದಿಂದ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕನ ಕೈಮೂಳೆ ಮುರಿದಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಠಾಣಾ ಪೊಲೀಸ್ ವ್ಯಾಪ್ತಿಯಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ವೇಗವಾಗಿ ಕಾರಿನಲ್ಲಿ ಬರುತ್ತಿದ್ದ ಸಾರಿಗೆ ಇಲಾಖೆ ಇನ್ಸ್ ಪೆಕ್ಟರ್ ಒಬ್ಬರು ಆಟೋರಿಕ್ಷಾಗೆ ರಭಸದಿಂದ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕನ ಕೈಮೂಳೆ ಮುರಿದಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಠಾಣಾ ಪೊಲೀಸ್ ವ್ಯಾಪ್ತಿಯಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ. 

ಮಂಜುನಾಥ್ ಎಲೆಕ್ಟ್ರಾನಿಕ್ ಸಿಟಿ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಮೋಟಾರು ವಾಹನ ಇನ್ಸ್ ಪೆಕ್ಟರ್ ಆಗಿದ್ದಾರೆ. ಕರ್ತವ್ಯ ಪೂರ್ಣಗೊಂಡ ಬಳಿಕ ಮಂಜುನಾಥ್ ಅವರು ಮಧ್ಯಾಹ್ನ 2.30ರ ಸುಮಾರಿಗೆ ಹೆಬ್ಬಗೋಡಿಗೆ ತೆರಳುತ್ತಿದ್ದರು. ಹುಸ್ಕುರ್ ಬಳಿ ತೆರಳುತ್ತಿದ್ದ ಸಂದರ್ಭದಲ್ಲಿ ರಸ್ತೆಯಲ್ಲಿ ಬರುತ್ತಿದ್ದ ಆಟೋವೊಂದು ಓವರ್ ಟೇಕ್ ಮಾಡಿದೆ. ಈ ವೇಳೆ ಮಂಜುನಾಥ್ ಅವರಿದ್ದ ಕಾರು ಆಟೋಗೆ ರಭಸದಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಆಟೋ ಚಾಲಕ ಸಯ್ಯದ್ ಇಮ್ರಾನ್ (36) ಕೆಳಗೆ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. 

ಬಳಿಕ ಕಾರಿನಿಂದ ಇಳಿದ ಮಂಜುನಾಥ್ ಅವರು ಚಾಲಕನಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಕೂಡಲೇ ಸ್ಥಲಕ್ಕೆ ಬಂದ ಸ್ಥಳೀಯಕರು ಕಾರು ಚಾಲಕ ಕುಡಿದಿದ್ದು, ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾನೆಂದು ತಿಳಿದು, ಥಳಿಸಲು ಮುಂದಾಗಿದ್ದಾರೆ. 

ಕೂಡಲೇ ವಿಚಾರ ತಿಳಿದ ಪರಪ್ಪನ ಅಗ್ರಹಾರ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಸ್ಥಳದಲ್ಲಿ ಮಾತಿನ ಚಕಮಕಿ ನಡೆಯುತ್ತಿದ್ದ ಹಿನ್ನಲೆಯಲ್ಲಿ ಕೆಲ ಕಾಲ ಸಂಚಾರ ದಟ್ಟಣೆ ಎದುರಾಗಿತ್ತು. ಬಳಿಕ ಮಂಜುನಾಥ್ ಅವರನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ವಶಕ್ಕೆ ಪಡೆದು ತಪಾಸಣೆ ನಡೆಸಿದ್ದಾರೆ. ಈ ವೇಳೆ ಮಂಜುನಾಥ್ ಕುಡಿಯದೇ ಇರುವುದು ಖಚಿತಗೊಂಡಿದೆ. ಬಳಿಕ ಯಾವುದೇ ಪ್ರಕರಣ ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com