ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಇಂಪ್ಯಾಕ್ಟ್: ಗಣಿ ಕಾರ್ಮಿಕರ ಕುಟುಂಬಗಳಿಗೆ ನೆರವಾದ ದಾನಿಗಳು

ಕೊರೋನ ಭೀತಿಯಿಂದ ಮನೆಯಿಂದ ಆಚೆ ಬರದೆ ಹಸಿವಿನಿಂದ ಬಳಲಿದ್ದ 70ಕ್ಕೂ ಹೆಚ್ಚು ಗಣಿ ಕಾರ್ಮಿಕರ ಕುಟುಂಬಗಳ ಹಸಿವನ್ನ ದಾನಿಗಳು ನೀಗಿಸಿದ್ದಾರೆ.
ಗಣಿ ಕಾರ್ಮಿಕರ ಕುಟುಂಬಗಳಿಗೆ ನೆರವಾದ ದಾನಿಗಳು
ಗಣಿ ಕಾರ್ಮಿಕರ ಕುಟುಂಬಗಳಿಗೆ ನೆರವಾದ ದಾನಿಗಳು
Updated on: 

ಹೊಸಪೇಟೆ: ಕೊರೋನ ಭೀತಿಯಿಂದ ಮನೆಯಿಂದ ಆಚೆ ಬರದೆ ಹಸಿವಿನಿಂದ ಬಳಲಿದ್ದ 70ಕ್ಕೂ ಹೆಚ್ಚು ಗಣಿ ಕಾರ್ಮಿಕರ ಕುಟುಂಬಗಳ ಹಸಿವನ್ನ ದಾನಿಗಳು ನೀಗಿಸಿದ್ದಾರೆ.

ಬಳ್ಳಾರಿ ಜಿಲ್ಲೆ ಹೊಸಪೇಟೆ ಹೊರ ವಲಯದ ಕಾರಿಗನೂರು ಕ್ಯಾಂಪನ್ ನಲ್ಲಿ ವಾಸವಾಗಿದ್ದ ಗಣಿ ಕಾರ್ಮಿಕ ಕುಟುಂಬಗಳು ಲಾಕ್ ಡೌನ್ ಹಿನ್ನಲೆಯಲ್ಲಿ ಅಗತ್ಯ ವಸ್ತುಗಳು ಸಿಗದೇ ಹಸಿವಿನಿಂದ ಕಂಗಾಲಾಗಿದ್ದವು. ಈ ಕುರಿತಂತೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಬಿತ್ತರಿಸಿತ್ತು. ಈ ವರದಿ  ನೋಡಿ ಎಚ್ಚೆತ್ತದಾನಿಗಳು ಇದೀಗ ಇಲ್ಲಿನ ಪ್ರತಿ‌ ಮನೆಗೆ ಅಕ್ಕಿ ಬೇಳೆ ಕೊಡುವ ಮೂಲಕ ದೈರ್ಯ ನೀಡಿದ್ದಾರೆ.

ಹೊಸಪೇಟೆಯ ರವಿ ಜೈನ್ ನೇತೃತ್ವದಲ್ಲಿ ಗಣಿಕಾರ್ಮಿಕರ ಕುಟುಂಬಗಳಿಗೆ ದವಸ ಧಾನ್ಯಗಳನ್ನು ನೀಡಲಾಗಿದ್ದು, ಅಕ್ಕಿ,ಬೇಳೆ ಅಡುಗೆ ಪದಾರ್ಥಗಳನ್ನು ನೀಡಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com