ವ್ಯಕ್ತಿಯಲ್ಲಿ ಕೊರೋನಾ ಪಾಸಿಟಿವ್: ದೆವ್ವದ ನಗರಿಯಂತಾದ ಹುಬ್ಬಳ್ಳಿ

ಪೇಟೆ ಮುಲ್ಲಾ ಓಣಿಯ 27 ವರ್ಷದ ಈ ವ್ಯಕ್ತಿಯು ರಾಜ್ಯದ 194 ನೇ ರೋಗಿಯಾಗಿರುವುದರಿಂದ ಪಿ-194 ಎಂದು ಗುರುತಿಸಲಾಗುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಹುಬ್ಬಳ್ಳಿ ಜಿಲ್ಲೆಯಲ್ಲಿ ಮತ್ತೊಬ್ಬ ವ್ಯಕ್ತಿಗೆ ಕೋವಿಡ್-19 ಕೊರೊನಾ ಸೋಂಕು ದೃಢಪಟ್ಟಿದೆ. ಹುಬ್ಬಳ್ಳಿಯ ಕಮರಿಪೇಟೆ ಮುಲ್ಲಾ ಓಣಿಯ 27 ವರ್ಷದ ಈ ವ್ಯಕ್ತಿಯು ರಾಜ್ಯದ 194 ನೇ ರೋಗಿಯಾಗಿರುವುದರಿಂದ ಪಿ-194 ಎಂದು ಗುರುತಿಸಲಾಗುತ್ತಿದೆ.

ಇನ್ನು ಹುಬ್ಬಳ್ಳಿಯ ಈ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮುಲ್ಲಾ ಓಣಿಗೆ ಬ್ಯಾರಿಕೇಡ್ ಅಳವಡಿಸಿದ್ದಾರೆ, ಪೌರ ಕಾರ್ಮಿಕರು ತಮ್ಮ ಮುಖಗಳನ್ನು ಮುಚ್ಚಿಕೊಂಡು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ,  ಪ್ರತಿ ಮನೆ ಮತ್ತು ಬೀದಿಯಲ್ಲಿ ಸೋಡಿಯಂ ಹೈಪೋಕ್ಲೋರೈಟ್ ಸಿಂಪಡಿಸುವುದು. ಕೆಲವು ಭಾಗಗಳಲ್ಲಿ ಬ್ಲೀಚಿಂಗ್ ಪೌಡರ್ ಕೂಡ ಸಿಂಪಡಿಸಲಾಗುತ್ತಿದೆ.

ಇವರು ಮಾರ್ಚ್ 16 ರಂದು ತನ್ನ ಸಹೋದರನೊಂದಿಗೆ ಹುಬ್ಬಳ್ಳಿಯಿಂದ ಹೈದರಾಬಾದಗೆ ವಿ.ಆರ್.ಎಲ್ ಬಸ್ ಮೂಲಕ ಪ್ರಯಾಣಿಸಿ, ಮಾ.17 ರಂದು ಹೈದರಾಬಾದ್ ತಲುಪಿದ್ದರು. ಮಾ.18 ರಂದು ಗೋಮತಿ ಎಕ್ಸಪ್ರೆಸ್ ರೈಲಿನ ಮುಖಾಂತರ ದೆಹಲಿಯನ್ನು ರಾತ್ರಿ 7: 00 ಗಂಟೆಗೆ ತಲುಪಿದ್ದಾರೆ.

27 ವರ್ಷದ  ಸೋಂಕಿತ ವ್ಯಕ್ತಿ ತಮ್ಮ ಸಂಬಂಧಿಕರು ಮತ್ತು ಸ್ನೇಹಿತರ ಮನೆಗೆ ಬೇಟಿ ನೀಡಿದ್ದಾನೆ, ಅದಾದ ನಂತರ ತಾರಿಹಾಳದಲ್ಲಿರುವ ಕಾರ್ಖಾನೆಗೆ ತೆರಳಿದ್ದಾನೆ. ಜೊತೆಗೆ ಲಾಕ್ ಡೌನ್ ಹಿನ್ನೆಲೆಯಲ್ಲಿ ನಿರ್ಗತಿಕರಿಗೆ ಆಹಾರ ನೀಡಿದ್ದಾನೆ,

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com