ಏ.12ರಿಂದ ಬೆಂಗಳೂರು ನಗರ ಜಿಲ್ಲೆಗಳಲ್ಲಿ ಕೋವಿಡ್ ಸಮೀಕ್ಷೆ ಆರಂಭ

ನಗರದ ಎಲ್ಲಾ ಜಿಲ್ಲೆಗಳಲ್ಲಿ ಮನೆ ಮನೆಗೆ ತೆರಳಿ ಕೋವಿಡ್ ಸಮೀಕ್ಷೆ ನಡೆಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಗರದ ಎಲ್ಲಾ ಜಿಲ್ಲೆಗಳಲ್ಲಿ ಮನೆ ಮನೆಗೆ ತೆರಳಿ ಕೋವಿಡ್ ಸಮೀಕ್ಷೆ ನಡೆಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. 

ಸಮೀಕ್ಷಾ ಕಾರ್ಯವನ್ನು ಬೆಂಗಳೂರು ನಗರ ಜಿಲ್ಲಾ ಆಡಳಿತ ಮಂಡಳಿಗಳು ನಡೆಸುತ್ತಿದ್ದು, ಏಪ್ರಿಲ್ 12 ರಿಂದ ಈ ಸಮೀಕ್ಷೆ ಆರಂಭವಾಗಲಿದೆ. ಆಶಾ ಕಾರ್ಯಕರ್ತೆಯರು ಹಾಗೂ ಅಂಗವಾಡಿಯವರಿಗೆ ಸಮೀಕ್ಷಾ ಕಾರ್ಯ ನಡೆಸಲಿದ್ದಾರೆ. 

ಏಪ್ರಿಲ್ ಅಂತ್ಯದವರೆಗೂ ಸಮೀಕ್ಷೆ ನಡೆಯಲಿದ್ದು, ಪ್ರತೀನಿತ್ಯ 60,000 ಮನೆಗಳಲ್ಲಿ ಸಮೀಕ್ಷೆ ನಡೆಯಲಿದೆ ಎಂದು ಉಪ ಆಯುಕ್ತ ಜಿಎನ್ ಶಿವಮೂರ್ತಿಯವರು ಹೇಳಿದ್ದಾರೆ. 

ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಪಂಚಾಯತ್ ಸಿಬ್ಬಂದಿಗಳು ಹಾಗೂ ಶಾಲಾ ಶಿಕ್ಷಕರನ್ನೊಳಗೊಂಡ ತಂಡಗಳನ್ನು ಈಗಾಗಲೇ ರಚನೆ ಮಾಡಲಾಗಿದ್ದು, ಭಾನುವಾರದಿಂದ ಈ ಸಮೀಕ್ಷಾ ಕಾರ್ಯ ನಡೆಯಲಿದೆ. ಸಮೀಕ್ಷೆ ನಡೆಸಲು ಬರುವ ಸಿಬ್ಬಂದಿಗಲು ಮನೆಯಲ್ಲಿ ಕೊರೋನಾ ಲಕ್ಷಣಗಳು ಯಾರಿಗಾದರೂ ಇವೆಯೇ ಎಂದು ಪ್ರಶ್ನಿಸುತ್ತಾರೆ. ಅಲ್ಲದೆ, ಒಂದು ವೇಳೆ ಬಂದಿದ್ದೇ ಆದರೆ, ಏನನ್ನು ಮಾಡಬೇಕು, ಏನನ್ನು ಮಾಡಬಾರದು ಎಂಬುದನ್ನು ತಿಳಿಸುತ್ತಾರೆ. 

ಅಲ್ಲದೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸುವ ವಿವರಗಳಿರುವ ಭಿತ್ತಿಪತ್ರಗಳನ್ನೂ ಕೂಡ ಇದೇ ವೇಳೆ ಸಮೀಕ್ಷೆ ನಡೆಸುವ ಮನೆಗಳಿಗೆ ನೀಡಲಿದ್ದಾರೆಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com