ಚೈನೀಸ್ ರ್ಯಾಪಿಡ್ ಟೆಸ್ಟ್ ಕಿಟ್ ಗಳೊಂದಿಗೆ ಪರೀಕ್ಷಾ ಕಾರ್ಯ ಶೀಘ್ರದಲ್ಲೇ ಆರಂಭ: ಸಚಿವ ಸುಧಾಕರ್

ಚೀನಾದಲ್ಲಿ ಉತ್ಪಾದನಾ ಘಟಕ ಹೊಂದಿರುವ ಸಿಂಗಾಪುರ ಕಂಪನಿಯಿಂದ 1 ಲಕ್ಷ ರ್ಯಾಪಿಡ್ ಆ್ಯಂಟಿಬಾಡಿ ಟೆಸ್ಟ್ ಕಿಟ್ ಗಳು ಬರುವ ಹಾದಿಯನ್ನಾ ರಾಜ್ಯ ಸರ್ಕಾರ ಕಾಯುತ್ತಿದ್ದು, ಈ ನಡುವಲ್ಲೇ ಸ್ಥಲೀಯ ಆ್ಯಕ್ಯುರೆಸಿ ಟೆಸ್ಟ್ ಕಿಟ್ ಗಳ ಮೂಲಕ ಪರೀಕ್ಷೆಗಳನ್ನು ಆರಂಭಿಸಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಹೇಳಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಚೀನಾದಲ್ಲಿ ಉತ್ಪಾದನಾ ಘಟಕ ಹೊಂದಿರುವ ಸಿಂಗಾಪುರ ಕಂಪನಿಯಿಂದ 1 ಲಕ್ಷ ರ್ಯಾಪಿಡ್ ಆ್ಯಂಟಿಬಾಡಿ ಟೆಸ್ಟ್ ಕಿಟ್ ಗಳು ಬರುವ ಹಾದಿಯನ್ನಾ ರಾಜ್ಯ ಸರ್ಕಾರ ಕಾಯುತ್ತಿದ್ದು, ಈ ನಡುವಲ್ಲೇ ಸ್ಥಲೀಯ ಆ್ಯಕ್ಯುರೆಸಿ ಟೆಸ್ಟ್ ಕಿಟ್ ಗಳ ಮೂಲಕ ಪರೀಕ್ಷೆಗಳನ್ನು ಆರಂಭಿಸಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಹೇಳಿದ್ದಾರೆ. 

ವೈರಸ್ ಕುರಿತಂತೆ ನಿಖರತೆಯನ್ನು ನಿರ್ಣಯಿಸಲು ಪ್ರಸ್ತುತ ಪಾಸಿಟಿವ್ ಬಂದಿರುವಂತಹ ವ್ಯಕ್ತಿಗಳು ಹಾಗೂ ಚೇತರಿಸಿಕೊಂಡ ಪ್ರಕರಣಗಳಲ್ಲಿ ಚೀನಾದ ಟೆಸ್ಟ್ ಕಿಟ್ ಗಳನ್ನು ಬಳಸಬೇಕು ಎಂದು ಸುಧಾಕರ್ ಅವರು ತಿಳಿಸಿದ್ದಾರೆ. 

ರ್ಯಾಪಿಡ್ ಟೆಸ್ಟ್ ಕಿಟ್ ಗಳು ಶೇ.80ರಷ್ಟು ನಿಖರವಾಗಿರುತ್ತವೆ. ಆದರೆ. ಆದರೆ ಆರ್‌ಟಿಪಿಸಿಆರ್‌ಗಳು (ರಿವರ್ಸ್ ಟ್ರಾನ್ಸ್‌ಕ್ರಿಪ್ಷನ್ ಪಾಲಿಮರೇಸ್ ಚೈನ್ ರಿಯಾಕ್ಷನ್ ಪರೀಕ್ಷೆಗಳು) ಇನ್ನೂ ಶೇ.95ರಷ್ಟು ನಿಖರತೆಯನ್ನು ಹೊಂದಿದ್ದು, ಅತ್ಯುತ್ತಮ ಪರೀಕ್ಷಾ ವಿಧಾನವಾಗಿದೆ. ಸೋಂಕು ಉಳ್ಳವರು ಹಾಗೂ ಸೋಂಕಿನಿಂತ ಗುಣಮುಖರಾಗುತ್ತಿರುವವರಿಗೆ ಆರ್'ಟಿಕೆ ಬಶಳಕೆ ಮಾಡಲು ಶಿಫಾರಸು ಮಾಡುತ್ತಿದ್ದೇನೆ. ಪ್ರತೀಗೂ ಟೆಸ್ಟ್'ಗ ರೂ.1000 ವೆಚ್ಚ ತಗುಲುತ್ತದೆ. ಇದನ್ನು ಹ್ಯಾಂಡಲ್ ಮಾಡುವುದೂ ಕೂಡ ಸುಲಭವಾಗಿರುತ್ತದೆ. ಖಾಸಗಿ ಕಂಪನಿಗಳೂ ಕೂಡ ಅವುಗಳನ್ನು ನಿಭಾಯಿಸಬಹುದಾಗಿದೆ ಎಂದು ಹೇಳಿದ್ದಾರೆ. 

ಪ್ರಸ್ತುತ ಬೆಳಕಿಗೆ ಬರುತ್ತಿರುವ ಹೊಸ ಪ್ರಕರಣಗಳು ನಂಜನಗೂಡು ಔಷಧಿ ಕಂಪನಿ ಅಥವಾ ದೆಹಲಿ ನಿಜಾಮುದ್ದೀರ್ ಧಾರ್ಮಿಕ ಕಾರ್ಯಕ್ರಮದೊಂದಿಗೆ ನಂಟು ಹೊಂದಿದ್ದವಾಗಿವೆ. ಕಳೆದ 4 ದಿನಗಳಿಂದ ನಾವು ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಿದ್ದೇವೆ. ಈ ಹಿಂದೆ ನಾವು ದಿನಕ್ಕೆ  300-200 ಸ್ಯಾಂಪಲ್'ಗಳ ಪರೀಕ್ಷೆ ನಡೆಸುತ್ತಿದ್ದೆವು. ಆದರೆ, ಇದರ ಸಂಖ್ಯೆ ಇದೀಗ 1200-1,300ಕ್ಕೆ ಏರಿಕೆಯಾಗಿದೆ. ಸರ್ಕಾರ ಮೊದಲೇ ಟೆಸ್ಟ್ ಕಿಟ್ ಗಳಿಗೆ ಆರ್ಡರ್  ಮಾಡಿದ್ದಕ್ಕೆ ಧನ್ಯವಾದಗಳನ್ನು ಹೇಳುತ್ತಿದ್ದೇನೆ. ಕೇಂದ್ರ ಸರ್ಕಾರದಿಂದ ಟೆಸ್ಟ್ ಕಿಟ್ ಬಂದಿದ್ದು, ಸಂತಸ ತಂದಿದೆ. ಸಮಯಕ್ಕೆ ಸರಿಯಾಗಿ ಕೇಂದ್ರ ಸರ್ಕಾರ ಟೆಸ್ಟ್ ಕಿಟ್ ಗಳನ್ನು ಒದಗಿಸಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com