ಕೊರೋನಾ ಎಫೆಕ್ಟ್: ಸಂಕಷ್ಟದಲ್ಲಿರುವ ನೀಟ್, ಕೆ-ಸೆಟ್ ವಿದ್ಯಾರ್ಥಿಗಳ ನೆರವಿಗೆ ಬಂದ ಸರ್ಕಾರ; ಆ್ಯಪ್, ವೆಬ್'ಸೈಟ್ ಮೂಲಕ ತರಬೇತಿ

ಕೊರೋನಾ ವೈರಸ್ ಪರಿಣಾಮ ವಿದ್ಯಾರ್ಥಿಗಳು ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಪ್ರಮುಖವಾಗಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಂತೂ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ನೀಟ್ ಹಾಗೂ ಕೆ-ಸೆಟ್ ಪರೀಕ್ಷಾ ಆಕಾಂಕ್ಷಿಗಳ ನೆರವಿಗೆ ಬಂದಿರುವ ರಾಜ್ಯ ಸರ್ಕಾರ, ಆ್ಯಪ್ ಹಾಗೂ ವೆಬ್'ಸೈಟ್ ಗಳ ಮೂಲಕ ತರಬೇತಿ ನೀಡಲಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ವೈರಸ್ ಪರಿಣಾಮ ವಿದ್ಯಾರ್ಥಿಗಳು ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಪ್ರಮುಖವಾಗಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಂತೂ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ನೀಟ್ ಹಾಗೂ ಕೆ-ಸೆಟ್ ಪರೀಕ್ಷಾ ಆಕಾಂಕ್ಷಿಗಳ ನೆರವಿಗೆ ಬಂದಿರುವ ರಾಜ್ಯ ಸರ್ಕಾರ, ಆ್ಯಪ್ ಹಾಗೂ ವೆಬ್'ಸೈಟ್ ಗಳ ಮೂಲಕ ತರಬೇತಿ ನೀಡಲಿದೆ. 

ಆ್ಯಪ್ ಹಾಗೂ ಗೆಟ್'ಸೆಟ್'ಗೋ ಎಂಬ ವೆಬ್ ಸೈಟ್ ಮೂಲಕ ಕೆ-ಸೆಟ್ ಹಾಗೂ ನೀಟ್ ಪರೀಕ್ಷಾ ಆಕಾಂಕ್ಷಿಗಳಿಗೆ ಸರ್ಕಾರ ತರಬೇತಿ ನೀಡಲಿದೆ. 

ಈ ಕುರಿತ ಆ್ಯಪ್ ಹಾಗೂ ವೆಬ್'ಸೈಟ್'ನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರು ಇಂದು ಬಿಡುಗಡೆಗೊಳಿಸಲಿದ್ದಾರೆ. https://getcetgo.in/ ವೆಬ್ ಸೈಟ್ ಮೂಲಕ ಸರ್ಕಾರ ಪ್ರಸಕ್ತ ಸಾಲಿನಲ್ಲಿ ಸಿಇಟಿ ಬರೆಯಲು ನೋಂದಾವಣಿ ಮಾಡಿಕೊಂಡಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಅಧ್ಯಯನಕ್ಕೆ ಅಗತ್ಯವಿರುವ ಪಠ್ಯಗಳನ್ನು ಒದಗಿಸಲಿದೆ. 

ತರಬೇತಿ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು ಸಿಇಟಿ ರೋಲ್ ನಂಬರ್ ಮೂಲಕ ಲಾಗ್ ಇನ್ ಆಗಬಹುದು. ಹಾಗೂ ಪಾಸ್'ವರ್ಡ್ ಗಳನ್ನು ಸಿಇಟಿಗೆ ನೋಂದಾವಣಿ ಮಾಡಿಕೊಂದಿರುವ ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ. ಈ ಪಾಸ್'ವರ್ಡ್ ಗಳನ್ನು ಹಾಕುವ ಮೂಲಕ ವಿದ್ಯಾರ್ಥಿಗಳು ಲಾಗ್'ಇನ್ ಆಗಿ ತರಬೇತಿ ಪಡೆಬಹುದಾಗಿದೆ. 

ಗೆಟ್'ಸೆಟ್'ಗೋ ಎಂಬ ಆ್ಯಪ್'ನ್ನು ಈಗಾಗಲೇ ಸಿದ್ಧಪಡಿಸಲಾಗಿದ್ದು, ಈ ಆ್ಯಪ್ ಮೂಲಕವೂ ವಿದ್ಯಾರ್ಥಿಗಳು ಅಧ್ಯಯನಕ್ಕೆ ಸಂಬಂಧ ಪಟ್ಟಂತಹ ಮಾಹಿತಿಗಳನ್ನು ಪಡೆಯಬಹುದಾಗಿದೆ. ಆದರೆ, ಈ ಆ್ಯಪ್ ಬುಧವಾರದ ಬಳಿಕವಷ್ಟೇ ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ವೆಬ್'ಸೈಟ್ ಗಳಲ್ಲಿ ನೀಡಲಾಗಿರುವ ಲಿಂಕ್ ಮೂಲಕ ವಿದ್ಯಾರ್ಥಿಗಳು GetCETGo v1.0 ಆ್ಯಪ್ ಪಡೆಯಬಹುದಾಗಿದೆ. ಆ್ಯಪ್ ನಲ್ಲಿ ಸಿನಾಪ್ಸಿಸ್, ಕ್ಲಾಸ್ ವರ್ಕ್ ಕ್ವೆಷನ್ಸ್, ಹೋಂವರ್ಕ್ ಪ್ರಾಕ್ಟಿಸ್ ಕ್ವೆಷನ್ಸ್ ಮತ್ತು ಮಾಕ್ ಟೆಸ್ಟ್ ಗಳು ಇರಲಿವೆ. ಇಂಟರ್ನೆಟ್ ಸೇವೆ ಇಲ್ಲದಿದ್ದರೂ ವಿದ್ಯಾರ್ಥಿಗಳು ಆಫ್ ಲೈನ್ ಮೂಲಕ ಅಗತ್ಯವಿರುವ ಅಧ್ಯಯನಕ್ಕೆ ಸಂಬಂಧಪಟ್ಟಂತಹ ವಿಷಯಗಳನ್ನು ಡೌನ್'ಲೋಡ್ ಮಾಡಿಕೊಳ್ಳಬಹುದಾಗಿದೆ. 

ಶಿಕ್ಷಣ ಇಲಾಖೆ ಈಗಾಗಲೇ ಗೆಟ್ ಸೆಟ್ ಗೋ ಎಂಬ ಯೂಟ್ಯೂಬ್ ಚಾನೆಲ್ ಕೂಡ ತೆರೆದಿದ್ದು, ಈ ಮೂಲಕ ಅಧ್ಯಯನಕ್ಕೆ ಸಂಬಂಧಪಟ್ಟಂತಹ ವಿಡಿಯೋಗಳನ್ನು ಪೋಸ್ಟ್ ಮಾಡಲಿದೆ. shorturl.at/zG259 ಇದು ಯೂಟ್ಯೂಬ್ ಚಾನೆಲ್ ಲಿಂಕ್ ಆಗಿದ್ದು, ಇಲಾಖೆಯು ಹಂತ ಹಂತವಾಗಿ ವಿಡಿಯೋಗಳನ್ನು ಬಿಡುಗಡೆ ಮಾಡಲಿದೆ. ಸಿಇಟಿಗೆ ಸಂಬಂಧ ವಿಚಾರಗಳಷ್ಟೇ ಅಲ್ಲದೆ, ರಿವಿಷನ್ ಕುರಿತ ವಿಡಿಯೋಗಳು ಇಲ್ಲಿ ಲಭ್ಯವಾಗಲಿದೆ. ನೀಟ್ ಹಾಗೂ ಸಿಇಟಿಗಳ ವಿಷಯಕ್ಕೆ ತಕ್ಕಂತೆ ಚಾನೆಲ್ ವಿಡಿಯೋಗಳನ್ನು ಪ್ರಕಟಿಸಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com