ಬಾಣಸವಾಡಿ ಠಾಣೆ ಎದುರು ಸ್ಥಳೀಯರ ಪ್ರತಿಭಟನೆ

ಯಲಹಂಕದ ಹೆಗಡೆ ನಗರದ ಹಜ್ ಭವನದಲ್ಲಿ ತಬ್ಲೀಘಿಗಳನ್ನು ಬಾಣಸವಾಡಿ ಸಮೀಪದ ವಸತಿ ಗೃಹವೊಂದಕ್ಕೆ ಸ್ಥಳಾಂತರ ಮಾಡಿರುವುದನ್ನು ವಿರೋಧಿಸಿ ಸ್ಥಳೀಯರು ಶನಿವಾರ ಬಾಣಸವಾಡಿ ಠಾಣೆ ಬಳಿ ಪ್ರತಿಭಟನೆ ನಡೆಸಿದರು. 
ಬಾಣಸವಾಡಿ ಠಾಣೆ ಎದುರು ಸ್ಥಳೀಯರ ಪ್ರತಿಭಟನೆ
ಬಾಣಸವಾಡಿ ಠಾಣೆ ಎದುರು ಸ್ಥಳೀಯರ ಪ್ರತಿಭಟನೆ
Updated on

ಬೆಂಗಳೂರು: ಯಲಹಂಕದ ಹೆಗಡೆ ನಗರದ ಹಜ್ ಭವನದಲ್ಲಿ ತಬ್ಲೀಘಿಗಳನ್ನು ಬಾಣಸವಾಡಿ ಸಮೀಪದ ವಸತಿ ಗೃಹವೊಂದಕ್ಕೆ ಸ್ಥಳಾಂತರ ಮಾಡಿರುವುದನ್ನು ವಿರೋಧಿಸಿ ಸ್ಥಳೀಯರು ಶನಿವಾರ ಬಾಣಸವಾಡಿ ಠಾಣೆ ಬಳಿ ಪ್ರತಿಭಟನೆ ನಡೆಸಿದರು. 

ಕಾಚರಕನಹಳ್ಳಿ, ಬಾಣಸವಾಡಿ ಹಾಗೂ ಕಮ್ಮನಹಳ್ಳಿಯ ನಿವಾಸಿಗಳು ಬಾಣಸವಾಡಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿ, ತಬ್ಲೀಘಿಗಳನ್ನು ನಗರದ ಹೊರವಲಯಕ್ಕೆ ಸ್ಥಳಾಂತರ ಮಾಡುವಂತೆ ಆಗ್ರಹಿಸಿದರು. 

ರಾಮನಗರ ಜಿಲ್ಲಾ, ಕಾರಾಗೃಹದಿಂದ ಹಜ್ ಭವನಕ್ಕೆ ಪಾದರಾಯನಪುರ ಗಲಭೆ ಪ್ರಕರಣದ ಆರೋಪಿಗಳನ್ನು ಸ್ಥಳಾಂತರಿಸುವ ಬಗ್ಗೆ ಅಭ್ಯಂತರವೇನೂ ಇಲ್ಲ. ಆದರೆ, ಹಜ್ ಭವನದಲ್ಲಿ ಕ್ವಾರಂಟೈನ್ ಅವಧಿ ಮುಗಿಸಿದ ತಬ್ಲೀಘಿಗಳನ್ನು ಬಾಣಸವಾಡಿ ಸಮೀಪದ ವಸತಿ ಗೃಹವೊಂದಕ್ಕೆ ಸ್ಥಳಾಂತರಿಸಿರುವುದು ಸರಿಯಲ್ಲ ಎಂದು ದೂರಿದರು. 

ಪಾದರಾಯನಪುರ ಆರೋಪಿಗಳಲ್ಲಿ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನು ರಾಮನಗರ ಜಿಲ್ಲಾ ಕಾರಾಗೃಹದಿಂದ ಹೆಗಡೆ ನಗರದಲ್ಲಿರುವ ಹಜ್ ಭವನನಕ್ಕೆ ಸ್ಥಳಾಂತರ ಮಾಡಲಾಗಿತ್ತು. ಹಜ್ ಭವನದಲ್ಲಿದ್ದ ತಬ್ಲೀಘಿಗಳನ್ನು ಬಾಣಸವಾಡಿ ಠಾಣಾ ವ್ಯಾಪ್ತಿಯ ವಸತಿ ಗೃಹವೊಂದಕ್ಕೆ ಸ್ಥಳಾಂತರ ಮಾಡಲಾಗಿದೆ. ಇದಕ್ಕೆ ಸ್ಥಳೀಯ ನಿವಾಸಿಗಳಿಂದ ವಿರೋಧ ವ್ಯಕ್ತವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com