ಆಹಾರ ಧಾನ್ಯಗಳ ದಾಸ್ತಾನು ಸಾಕಷ್ಟಿದ್ದು, 2021ರ ಮಾರ್ಚ್ 31ರವರೆಗೂ ಯಾವುದೇ ಸಮಸ್ಯೆಗಳಿಲ್ಲ: ಭಾರತೀಯ ಆಹಾರ ನಿಗಮ ಅಧ್ಯಕ್ಷ

ನಮ್ಮ ಬಳಿ ಆಹಾರ ಧಾನ್ಯಗಳ ದಾಸ್ತಾನು ಸಾಕಷ್ಟಿದ್ದು, 2021ರ ಮಾರ್ಚ್ 31ರವರೆಗೂ ಯಾವುದೇ ಸಮಸ್ಯೆಗಳೂ ಎದುರಾಗುವುದಿಲ್ಲ ಎಂದು ಭಾರತೀಯ ಆಹಾರ ನಿಗಮದ ಅಧ್ಯಕ್ಷ ಡಿವಿ ಪ್ರಸಾದ್ ಅವರು ಹೇಳಿದ್ದಾರೆ. 
ಡಿವಿ ಪ್ರಸಾದ್
ಡಿವಿ ಪ್ರಸಾದ್

ಬೆಂಗಳೂರು: ನಮ್ಮ ಬಳಿ ಆಹಾರ ಧಾನ್ಯಗಳ ದಾಸ್ತಾನು ಸಾಕಷ್ಟಿದ್ದು, 2021ರ ಮಾರ್ಚ್ 31ರವರೆಗೂ ಯಾವುದೇ ಸಮಸ್ಯೆಗಳೂ ಎದುರಾಗುವುದಿಲ್ಲ ಎಂದು ಭಾರತೀಯ ಆಹಾರ ನಿಗಮದ ಅಧ್ಯಕ್ಷ ಡಿವಿ ಪ್ರಸಾದ್ ಅವರು ಹೇಳಿದ್ದಾರೆ. 

ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮತಾನಾಡಿರುವ ಅವರು, ಪ್ರಸ್ತುತ ಕರ್ನಾಟಕದಲ್ಲಿರುವ ಸಾಕಷ್ಟು ಗೋದಾಮುಗಳು ರೆಡ್ ಝೋನ್ ನಲ್ಲಿವೆ. ಆದರೂ, ಗಂಭೀರವಾದ ಪರಿಸ್ಥಿತಿಗಳೇನೂ ಇಲ್ಲ. 1971ರ ಬಳಿಕ ದೇಶಕ್ಕೆ ಮೊದಲ ಬಾರಿ ಆಹಾರ ಪೂರೈಕೆಯ ಸವಾಲನ್ನು ಎದುರಿಸುತ್ತಿದೆ ಎಂದು ಹೇಳಿದ್ದಾರೆ. 

ರೆಡ್ ಜೋನ್ ನಲ್ಲಿರುವ ಪರಿಣಾಮ ನಂಜನಗೂಡಿನಲ್ಲಿರುವ ಎಫ್ಸಿಐ ಗೋದಾಮನ್ನು ಸೀಲ್ ಮಾಡಲಾಗಿದೆ, ಕರ್ನಾಟಕದ ಇತರೆ ಗೋದಾಮುಗಳ ಪರಿಸ್ಥಿತಿ ಏನು? 
ನಂಜನಗೂಡಿನ ಗೋದಾಮಿನಲ್ಲಿರುವ ಧಾನ್ಯಗಳನ್ನು ಬಳಕೆ ಮಾಡಲಾಗುತ್ತಿಲ್ಲ. ಕರ್ನಾಟಕದ ಇತರೆ ಗೋದಾಮುಗಳ ವಿಚಾರಕ್ಕೆ ಬಂದರೆ, ಕಲಬುರಗಿಯಲ್ಲಿರುವ ಗೋದಾಮು ಕೂಡ ರೆಡ್ ಝೋನ್ ನಲ್ಲಿರುವ ಪರಿಣಾಮ ಅದನ್ನೂ ಸೀಲ್ ಮಾಡಲಾಗಿದೆ. ಬೆಂಗಳೂರಿನ ಕೆಆರ್ ಪುರಂ ನಲ್ಲಿರುವ ಗೋದಾಮು ಕೂಡ ರೆಡ್ ಝೋನ್ ನಲ್ಲಿಯೇ ಇದೆ. ಮಂಗಳೂರು, ಬೆಳಗಾವಿ, ವಿಜಯಪುರ, ಮಂಡ್ಯ, ಬಾಗಲಕೋಟೆ, ಮೈಸೂರೂ, ಬೀದರ್ ನಲ್ಲಿಯೂ ಗೋದಾಮುಗಳಿದ್ದು, ಇದರಲ್ಲಿ ಕೆಲಸ ಮಾಡುತ್ತಿರುವ ಯಾವುದೇ ಎಫ್'ಸಿಐ ನೌಕರರಿಗೂ ಯಾವುದೇ ರೀತಿಯ ಸಮಸ್ಯೆಗಳು ಎದುರಾಗಿಲ್ಲ. ಗೋದಾಮುಗಳು ರೆಡ್ ಝೋನ್ ನಲ್ಲಿರುವ ಪರಿಣಾಮ ಕೆಲಸಗಳು ತಡವಾಗುತ್ತಿವೆ. ಚಾಮರಾಜನಗರದಲ್ಲಿರುವ ಗೋದಾಮಿಗೆ ಕೆಲಸಕ್ಕೆ ಬರುವ ಬಹುತೇಕ ಜನರು ನಂಜನಗೂಡು ಮೂಲದವರಾಗಿದ್ದಾರೆ. ಇದೀಗ ನಂಜನಗೂಡನ್ನು ಸೀಲ್ ಮಾಡಿದ ಹಿನ್ನೆಲೆಯಲ್ಲಿ ನೌಕರರು ಕೆಲಸಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಇದೀಗ ಸ್ಥಳೀಯ ಹಾಗೂ ರಾಷ್ಟ್ರೀಯ ನಿಯಂತ್ರಣ ಕೇಂದ್ರ ಪರಿಸ್ಥಿತಿಯನ್ನು 24*7 ಗಂಟೆಗಳ ವರೆಗೂ ಪರಿಶೀಲನೆ ನಡೆಸುತ್ತಿದೆ. ಗಡಿಯಾರದಂತೆ ನಾವೂ ಕೂಡ ಕೆಲಸ ಮಾಡುತ್ತಿದ್ದೇವೆ. ಮಧ್ಯರಾತ್ರಿಯಲ್ಲೂ ನನಗೆ ಕರೆ ಬರುತ್ತಿದೆ. ಪರಿಸ್ಥಿತಿ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. 

ಲಾಕ್'ಡೌನ್ ಘೋಷಣೆಯಾಗಿ 1 ತಿಂಗಳು ಕಳೆದಿದೆ. ಅವಶ್ಯಕತೆಗಳನ್ನು ಹೇಗೆ ಪೂರೈಸಲಾಗುತ್ತಿದೆ? 
ರಾಷ್ಟ್ರೀಯವಾಗಿ ಇದೀಗ ನಮ್ಮಲ್ಲಿ 53 ಮಿಲಿಯನ್ ಟನ್ ನಷ್ಟು ದಾಸ್ತಾನುಗಳಿವೆ. ಇದನ್ನು ಗಮನದಲ್ಲಿಟ್ಟುಕೊಂಡೇ ನಾವು ಪ್ರತೀ ವ್ಯಕ್ತಿಗೆ 10 ಕೆಜಿ ಅಕ್ಕಿಯನ್ನು ನೀಡುತ್ತಿದ್ದೇವೆ. ಇದರಿಂದ 81 ಕೋಟಿ ಜನರಿಗೆ ಅನುಕೂಲವಾಗುತ್ತಿದೆ. ಪರಿಸ್ಥಿತಿ ಹೀಗೆಯೇ ಆದರೆ, ಮುಂದಿನ ವರ್ಷ ಮಾರ್ಚ್ 31ರವರೆಗೂ ಯಾವುದೇ ಸಮಸ್ಯೆಗಳೂ ಎದುರಾಗುವುದಿಲ್ಲ. 35 ಮಿಲಿಯನ್ ಟನ್ ರಬಿ ಗೋಧಿ ಹಾಗೂ 10 ಮಿಲಿಯನ್ ಟನ್ ರಬಿ ಅಕ್ಕಿ ಬರುವ ನಿರೀಕ್ಷೆಗಳಿವೆ. ಪ್ರಸ್ತುತ ನಮ್ಮ ಬಳಿ ಸಾಕಷ್ಟು ಧಾನ್ಯಗಳ ದಾಸ್ತಾನು ಇರುವ ವಿಶ್ವಾಸವಿದೆ. ಬಫರ್ ಅಗತ್ಯತೆಗಳು ಇದೀಗ 21 ಮಿಲಿಯನ್ ಟನ್ ನಷ್ಟಿದೆ. ಪ್ರತೀ ತಿಂಗಳು ಇದರ ಅವಶ್ಯಕತೆ 5 ಮಿಲಿಯನ್ ರಷ್ಟಿರುತ್ತಿತ್ತು. ರಾಜ್ಯದಲ್ಲಿ ದಾಸ್ತಾನು ಸಾಮರ್ಥ್ಯವನ್ನು ಹೆಚ್ಚಿಸುತ್ತಿದ್ದೇವೆ. ರಾಜ್ಯದ ಜನರ ಬೇಡಿಕೆ ಪೂರೈಸುವ ಸಾಮರ್ಥ್ಯ ಎಫ್ಸಿಐಗೆ ಇದೆ. 

ಲಾಕ್'ಡೌನ್ ನಿಂದಾಗಿ ನಿಮ್ಮ ಕಾರ್ಯಾಚರಣೆ ಮೇಲೆ ಯಾವ ರೀತಿಯ ಪರಿಣಾಮ ಬೀರಿದೆ? 
ಎಫ್ಸಿಐ 24/7 ಆಧಾರದ ಮೇಲೆ ಕೆಲಸ ಮಾಡುತ್ತಿದೆ. ವರ್ಷದಲ್ಲಿ ಒಂದು ದಿನ ಸಿಕ್ಕರೂ ಕೂಡ ನಾವು 60 ರೈಲುಗಳಿಗೆ ಲೋಡ್ ಮಾಡುವ ಕೆಲಸ ಮಾಡುತ್ತಿದೆ. ಕಾರ್ಮಿಕರಾಗಿ ನಮ್ಮ ಕಾರ್ಯಾಚರಣೆ ಪರಿಣಾಮಕಾರಿಯಾಗಿದೆ. ದಿನದ ಆಧಾರದ ಮೇಲೆ 50,000ಕ್ಕೂ ಹೆಚ್ಚು ಜನರು ಕಾರ್ಯನಿರ್ವಹಿಸುತ್ತಿದ್ದಾರೆ. ರಾಷ್ಟ್ರ ಮಟ್ಟದಲ್ಲಿಯೂ ಲಾಕ್'ಡೌನ್ ಆಗಿರುವ ಪರಿಣಾಮ ಸಾಮಾನ್ಯವಾಗಿಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಲಾಕ್'ಡೌನ್ ಆದ ಬಳಿಕ ಬೇಡಿಕೆಗಳು ಹೆಚ್ಕಾಗಿವೆ. ನಮ್ಮ ಕಾರ್ಯಗಳೂ ಕೂಡ ದುಪ್ಪಟ್ಟಾಗಿದೆ. ಮೂರು ಹಂತದಲ್ಲಿ ಕೆಲಸಗಾರರು ಕಾರ್ಯನಿರ್ವಹಿಸುತ್ತಿದ್ದಾರೆ. 40,000 ನೌಕರರು 80,000 ಕೆಲಸಕಾರರು ಗುತ್ತಿಗೆ ಹಾಗೂ ಇಲಾಖೆಯಲ್ಲಿ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರೊಂದಿಗೆ ನಮ್ಮ ಕಾರ್ಯಾಚರಣೆಯನ್ನು ಮುಂದುವರೆಸುತ್ತಿದ್ದೇವೆ. 


ನಿಯಮದ ಆಧಾರದ ಮೇಲೆ ರಾಜ್ಯದ ಬೇಡಿಕೆಗಳನ್ನು ಪೂರೈಸಲಾಗುತ್ತಿದೆಯೇ? 
ಹೌದು, ರಾಜ್ಯದ ವಿವಿಧೆಡೆ ಬೇಡಿಕೆಗಳನ್ನು ಪೂರೈಸಲಾಗುತ್ತಿದೆ. ಈ ವರೆದೂ ಸುಮಾರು 4.6 ಎಂಎಂಟಿ ಆಹಾರ ಧಾನ್ಯಗಳನ್ನು ಹೊತ್ತ 1,649 ರೈಲು ಲೋಡ್‌ಗಳನ್ನು ಸ್ಥಳಾಂತರಿಸಲಾಗಿದೆ. ಅಲ್ಲದೆ,  27 ದಿನಗಳ ಲಾಕ್‌ಡೌನ್ ಅವಧಿಯಲ್ಲಿ 1,541 ರೈಲು ಲೋಡ್‌ಗಳನ್ನು (ಸುಮಾರು 4.2 ಎಂಎಂಟಿ) ಇಳಿಸಲಾಗಿದೆ. 

ಇತರೆ ರಾಜ್ಯಕ್ಕೆ 1,800ಕ್ಕೂ ಹೆಚ್ಚು ಕ್ವಿಂಟಾಲಷ್ಟು ಅಕ್ಕಿಯನ್ನು ಅಕ್ರಮವಾಗಿ ಸಾಗಣೆ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ?
ರಾಜ್ಯ ಗೋದಾಮಿಗೂ ಎಫ್'ಸಿಐ ಗೋದಾಮಿಗೂ ಸಾಕಷ್ಟು ವ್ಯತ್ಯಾಸಗಳಿವೆ. ರಾಜ್ಯದ ಗೋದಾಮುಗಳಿಗೆ ಸಂಬಂಧಿಸಿ ಈ ಆರೋಪಗಳು ಕೇಳಿ ಬಂದಿರಬಹುದು. ಈ ವಿಚಾರ ಕರ್ನಾಟಕರ ರಾಜ್ಯಕ್ಕೆ ಸಂಬಂಧಿಸಿದ ವಿಚಾರವಾಗಿದ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com