ಬೆಂಗಳೂರಿನಲ್ಲಿ ಸ್ಫೋಟಕ ಮಾದರಿಯ ವಸ್ತು ಪತ್ತೆ, ಆತಂಕ ಸೃಷ್ಟಿ; ಭಾಸ್ಕರ್ ರಾವ್ ಹೇಳಿದ್ದೇನು?

ಕೊರೋನಾ ಲಾಕ್ ಡೌನ್ ನಿಂದ ಕಂಗಾಲಾಗಿರುವ ಬೆಂಗಳೂರಿನಲ್ಲಿ ಇದೀಗ ಸ್ಫೋಟಕ ಮಾದರಿಯ ವಸ್ತು ಪತ್ತೆಯಾಗಿದ್ದು ಆತಂಕ ಸೃಷ್ಟಿಸಿದೆ.
ಭಾಸ್ಕರ್ ರಾವ್
ಭಾಸ್ಕರ್ ರಾವ್

ಬೆಂಗಳೂರು: ಕೊರೋನಾ ಲಾಕ್ ಡೌನ್ ನಿಂದ ಕಂಗಾಲಾಗಿರುವ ಬೆಂಗಳೂರಿನಲ್ಲಿ ಇದೀಗ ಸ್ಫೋಟಕ ಮಾದರಿಯ ವಸ್ತು ಪತ್ತೆಯಾಗಿದ್ದು ಆತಂಕ ಸೃಷ್ಟಿಸಿದೆ. 

ನಗರದ ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕತ್ರಿಗುಪ್ಪೆ ಮುಖ್ಯರಸ್ತೆಯಲ್ಲಿ ಅನುಮಾನಾಸ್ಪದ ಸ್ಫೋಟಕ ವಸ್ತು ಪತ್ತೆಯಾಗಿದೆ. ಇದನ್ನು ಎಫ್ಎಸ್ಎಲ್ ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ. 

ಎಫ್ಎಸ್ಎಲ್ ತಂಡ ಸ್ಫೋಟಕ ವಸ್ತುವನ್ನು ಬಸ್ ಮೂಲಕ ಕೆಂಪೇಗೌಡ ಮೈದಾನಕ್ಕೆ ಸ್ಥಳಾಂತರಿಸಿದ್ದಾರೆ.

ಎಫ್ ಎಸ್ಎಲ್ ತಜ್ಞ ಶ್ರೀನಿವಾಸ್ ಅವರು ಈ ಕುರಿತು ಪ್ರತಿಕ್ರಿಯಿಸಿ, ತೆಂಗಿನಕಾಯಿ ಮಾದರಿಯ ಐಸ್ ಕ್ರೀಮ್ ಡಬ್ಬಿಯೊಳಗೆ ಸ್ಫೋಟಕ ತುಂಬಿದ್ದಾರೆ. ಅದರಲ್ಲಿ ಪೊಟ್ಯಾಷಿಯಂ ನೈಟ್ರೇಟ್ ರಾಸಾಯನಿಕ ವಿದ್ದು, ಪಟಾಕಿಗೆ ಉಪಯೋಗಿಸುವ ರಾಸಾಯನಿಕ ಇದಾಗಿದೆ ಎಂದರು. ಈಗಾಗಲೇ ರಾಸಾಯನಿಕವನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. 

ಆತಂಕ ಬೇಡ, ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ: ಭಾಸ್ಕರ್ ರಾವ್
ಬೆಂಗಳೂರಿನಲ್ಲಿ ಸ್ಫೋಟಕ ಮಾದರಿ ವಸ್ತು ಪತ್ತೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಬೆಂಗಳೂರು ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಅವರು ಆತಂಕ ಬೇಡ. ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com