ಬೆಂಗಳೂರು: ಗಲಭೆಗೆ ಕಾರಣವಾದ ಫೇಸ್ಬುಕ್ ಪೋಸ್ಟ್ ಮೂಲ ಪತ್ತೆಗೆ ಚುರುಕುಗೊಂಡ ತನಿಖೆ

ಬೆಂಗಳೂರು ಗಲಭೆಗೆ ಕಾರಣವಾದ ಫೇಸ್'ಬುಕ್ ಪೋಸ್ಟ್ ಮೂಲ ಪತ್ತೆಗೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. 
ಸಾಕ್ಷ್ಯಾಧಾರ ಕಲೆ ಹಾಕುತ್ತಿರುವ ಪೊಲೀಸರು
ಸಾಕ್ಷ್ಯಾಧಾರ ಕಲೆ ಹಾಕುತ್ತಿರುವ ಪೊಲೀಸರು

ಬೆಂಗಳೂರು: ಬೆಂಗಳೂರು ಗಲಭೆಗೆ ಕಾರಣವಾದ ಫೇಸ್'ಬುಕ್ ಪೋಸ್ಟ್ ಮೂಲ ಪತ್ತೆಗೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. 

ಪ್ರಾಥಮಿಕ ತನಿಖೆಯಲ್ಲಿ ಗಲಭೆ ಹಿಂದೆ ಎಸ್'ಡಿಪಿಐ ಕೈವಾಡವಿದೆ ಎಂದು ತಿಳಿದುಬಂದಿದೆ. ಆದರೆ, ಈ ಬಗ್ಗೆ ಆಳವಾದ ತನಿಖೆಯ ನಡೆಯಬೇಕಿದೆ. ಈಗಾಗಲೇ ಪ್ರಕರಣ ಸಂಬಂಧ ಹಲವು ಎಸ್'ಡಿಪಿಐ ಸಂದಸ್ಯರನ್ನೂ ಬಂಧನಕ್ಕೊಳಪಡಿಸಲಾಗಿದೆ ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ. 

ಘಟನೆ ನಡೆದ 10 ಗಂಟೆಗಳ ಬಳಿಕ ನವೀನ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ನವೀನ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರ ಸಂಬಂಧಿಯಾಗಿದ್ದು, ಇವರು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದ ಪೋಸ್ಟ್ ವೊಂದರಿಂದಲೇ ಗಲಭೆ ಸೃಷ್ಟಿಯಾಗಿತ್ತು ಎಂದು ಹೇಳಲಾಗುತ್ತಿದೆ.

ಇನ್ನು ನವೀನ್ ಅವರ ಕುರಿತು ಇದು ದಾಖಲಾಗುತ್ತಿರುವ ಮೊದಲ ಪ್ರಕರಣವಲ್ಲ. ನವೀನ್ ಹಾಗೂ ಅವರ ಸಹೋದರ ಇಬ್ಬರೂ ಕಾನೂನು ತೊಡಕಿರುವಂತ ಭೂಮಿಯನ್ನು ಮಾರಾಟ ಮಾಡುವುದರಲ್ಲಿ ಹೆಸರುವಾಸಿಯಾಗಿದ್ದಾರೆ. ಸಾಕಷ್ಟು ಸಾಲವನ್ನೂ ಮಾಡಿಕೊಂಡಿದ್ದಾರೆ. ನವೀನ್ ವಿರುದ್ಧ ಸಾಕಷ್ಟು ಚೆಕ್ ಬೌನ್ಸ್ ಪ್ರಕರಣಗಿವೆ. ಹಿಂದೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಣಸವಾಡಿ ಪೊಲೀಸರು ನವೀನ್'ನ್ನು ಬಂಧನಕ್ಕೊಳಪಡಿಸಿದ್ದರು ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. 

ಗಲಭೆ ನಡೆದ ದಿನ ಸಂಜೆ 4 ಗಂಟೆ ಸುಮಾರಿಗೆ ನವೀನ್ ಮೊಬೈಲ್ ಕಳೆದುಕೊಂಡಿದ್ದ. ಈ ಬಗ್ಗೆ ಪೊಲೀಸರಿಗೂ ದೂರು ನೀಡಿತ್ತೆ. ಸಂಜೆ ಬಳಿಕವೇ ಈ ರೀತಿ ಪೋಸ್ಟ್ ಶೇರ್ ಹಂಚಿಕೆಯಾಗಿದೆ ಎಂದು ಹೇಳಲಾಗುತ್ತಿದೆ. 

ನವೀನ್ ಮಾತನಾಡುವ ಇಂಗ್ಲೀಷ್ ಭಾಷೆ ಅಷ್ಟು ಸ್ಪಷ್ಟವಾಗಿರುತ್ತಿರಲಿಲ್ಲ. ಫೇಸ್ಬುಕ್ ನಲ್ಲಿ ಬಳಕೆ ಮಾಡಿರುವ ಅತ್ಯಂತ ಅವಹೇಳನಕಾರಿಯಾಗಿದೆ. ಬೇರೊಬ್ಬರು ಮಾಡಿದ್ದ ಪೋಸ್ಟ್ ಇದಾಗಿರಬಹುದು. ಗಲಭೆ ಸೃಷ್ಟಿಸುವ ಸಲುವಾಗಿಯೇ ಬೇರೊಬ್ಬ ವ್ಯಕ್ತಿ ಬರೆದಿರುವಂತಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಘಳು ಮಾಹಿತಿ ನೀಡಿದ್ದಾರೆ. 
ಗಲಭೆಯಲ್ಲಿ ಪಾಲ್ಗೊಂಡಿದ್ದ ಗಲಭೆಕೋರರ ಫೋನ್ ಟವರ್ ಪರಿಶೀಲನೆ
ಇನ್ನು ಗಲಭೆಯಲ್ಲಿ ಪಾಲ್ಗೊಂಡಿದ್ದ ಗಲಭೆಕೋರರ ಮೊಬೈಲ್ ಪೋನ್ ಟವರ್ ಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದು, ಬಹುತೇಕರ ಫೋನ್ ಟವರ್ ಆರ್'ಟಿ ನಗರ, ಗೋರಿಪಾಳ್ಯ, ಫ್ರೇಜರ್ ಟೌನ್ ತೋರಿಸಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಗಲಭೆಕೋರರು ನಿಜವಾಗಿಯೂ ಅದೇ ಪ್ರದೇಶದ ನಿವಾಸಿಗಳಾಗಿದ್ದರೆ, ಖಂಡಿತವಾಗಿಯೂ ಇದೊಂದು ಪೂರ್ವ ನಿಯೋಜಿತ ಕೃತ್ಯವೆಂಬುದು ಸ್ಪಷ್ಟವಾಗುತ್ತದೆ. ಜನರನ್ನು ಒಗ್ಗೂಟಿಸಲು ದಾಳಿಕೋರರು ಸಾಕಷ್ಟು ಸಮಯ ತೆಗೆದುಕೊಂಡಿರುವುದೂ ಕೂಡ ಇದರಲ್ಲಿ ಸ್ಪಷ್ಟವಾಗುತ್ತದೆ. ಗಲಭೆಯಲ್ಲಿ ಪಾಲ್ಗೊಂಡಿದ್ದ ಬಹುತೇಕರು ಮಾದಕ ವ್ಯಸನಿಗಳಾಗಿದ್ದರು. ಬಂಧಿತರ ಬಗ್ಗೆ ಮಾಹಿತಿ ಕಲೆಹಾಕಲು ಸಾಕಷ್ಟು ಸಮಯ ಬೇಕಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ. 

ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿದರೆ ಗಲಭೆಕೋರರು ಪೆಟ್ರೋಲ್ ತುಂಬಿದ ಪ್ಯಾಕೆಟ್ ಗಳನ್ನು ತಂಡು ಪೊಲೀಸರು ಹಾಗೂ ಅವರ ವಾಹನಗಳ ಮೇಲೆ ಎಸೆದಿರುವುದು ಕಂಡು ಬಂದಿದೆ. ಸ್ಥಳೀಯ ಪೆಟ್ರೋಲ್ ಬಂಕ್'ಗೆ ತೆರಳಿ ಪೆಟ್ರೋಲ್ ಸಂಗ್ರಹಿಸಿರುವುದ ಸ್ಪಷ್ಟವಾಗಿದೆ. ಈ ಬಗ್ಗೆ ತನಿಖೆ ಪ್ರಗತಿಯಲ್ಲಿದೆ ಎಂದಿದ್ದಾರೆ. 

ದಾಳಿಯಲ್ಲಿ ಎಸ್'ಡಿಪಿಐ ಕೈವಾಡ ದೃಢವಾಗಿದೆ. ಜನರನ್ನು ಈ ಮಟ್ಟದಲ್ಲಿ ಸೇರ್ಪಡೆಗೊಳಿಸುವ ಶಕ್ತಿ ಅದಕ್ಕಿದೆ. ಗಲಭೆ ನಡೆದ ಪ್ರದೇಶದಲ್ಲಿ ಎಲ್ಲಾ ರೀತಿಯ ಜನರೂ ಇದ್ದರು. 16-21 ವಯಸ್ಸಿನ ಯುವಕರು ಹೆಚ್ಚಾಗಿದ್ದರು. ಎಲ್ಲರೂ ಮಾದಕ ದ್ರವ್ಯ ಸೇವನೆ ಮಾಡಿದ ಸ್ಥಿತಿಯಲ್ಲಿದ್ದರು. ಇಂತಹ ಸ್ಥಿತಿಯಲ್ಲಿದ್ದವರು ಯಾವುದೇ ಕೃತ್ಯವೆಸಗಲು ಹಿಂಜರಿಯುವುದಿಲ್ಲ. ಎಸ್'ಡಿಪಿಐ ನ ನಾಲ್ಕು ತಂಡ ಈ ಕೃತ್ಯದಲ್ಲಿ ಭಾಗಿಯಾಗಿರುವ ಸಾಧ್ಯತೆಗಳಿವೆ. ಶೀಘ್ರದಲ್ಲಿಯೇ ಈ ಬಗೆಗಿನ ಮಾಹಿತಿಗಳು ಬಹಿರಂಗಗೊಳ್ಳಲಿದೆ ಎಂದು ತಿಳಿಸಿದ್ದಾರೆ. 

ಪೊಲೀಸರ ವಾಹನಗಳು ಬೆಂಕಿಗಾಹುತಿಯಾಗುವ ಸಂದರ್ಭದಲ್ಲಿ ಪರಿಸ್ಥಿತಿ ನಿಯಂತ್ರಿಸುವಲ್ಲಿ ಪೊಲೀಸರು ಅಸಹಾಯಕರಾಗಿದ್ದರು. ಠಾಣೆಯಲ್ಲಿ ಹಲವು ಪೊಲೀಸ್ ಅಧಿಕಾರಿಗಳು ನಿವೃತ್ತರಾಗುತ್ತಿದ್ದ ಹಿನ್ನೆಲೆಯಲ್ಲಿ ಅವರನ್ನು ಬೀಳ್ಕೊಡುವ ಕಾರ್ಯಕ್ರವನ್ನೂ ಆಯೋಜಿಸಲಾಗಿತ್ತು. ಇದರಿಂದ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಲು ತಡವಾಗಿತ್ತು ಎಂದು ಹೇಳಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com