
ಮೈಸೂರು: ಜಿಲ್ಲೆಯಲ್ಲಿ ಶನಿವಾರ ಹೊಸದಾಗಿ 635 ಮಂದಿಗೆ ಕೋವಿಡ್ ಇರುವುದು ದೃಢವಾಗಿದೆ. ಕೋವಿಡ್ ಸೋಂಕಿನಿಂದ 10 ಮಂದಿ ಮೃತಪಟ್ಟಿದ್ದಾರೆ. ಈಗಾಗಲೇ ಸೋಂಕಿತರ ಪೈಕಿ 259 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆಯು 9915ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 294ಕ್ಕೆ ಹೆಚ್ಚಳವಾಗಿದೆ. ಸೋಂಕಿತರ ಪೈಕಿ 6089 ಮಂದಿ ಗುಣಮುಖರಾಗಿದ್ದಾರೆ. ಸಾರಿ ಪ್ರಕರಣದಲ್ಲಿ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ 42 ವರ್ಷದ ವ್ಯಕ್ತಿ, 68 ವರ್ಷದ ವೃದ್ಧೆ, 70 ವರ್ಷದ ವೃದ್ಧ, 63 ವರ್ಷದ ವೃದ್ಧ, 59 ವರ್ಷದ ವ್ಯಕ್ತಿ ಹಾಗೂ 45 ವರ್ಷದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಹಾಗೆಯೇ 48 ವರ್ಷದ ಮಹಿಳೆ ಆಸ್ಪತ್ರೆ ಕರೆದುಕೊಂಡು ಬರುವಾಗಲೇ ಮೃತಪಟ್ಟಿದ್ದಾರೆ.
ಕೊರೋನಾ ಸೋಂಕಿತರ ಸಂಪರ್ಕದಿಂದ 279, ಅಂತರ ಜಿಲ್ಲಾ ಮತ್ತು ರಾಜ್ಯ ಪ್ರವಾಸದಿಂದ 220, ಐಎಲ್ಐ ಪ್ರಕರಣ 126, ಸಾರಿ ಪ್ರಕರಣ 10 ಸೇರಿದಂತೆ ಒಟ್ಟು 635 ಮಂದಿಗೆ ಸೋಂಕು ಇರುವುದು ದೃಢವಾಗಿದೆ.
Advertisement