ಕುದುರೆ ರೇಸ್ ಮೇಲೂ ಬಿದ್ದ ಕೊರೋನಾ ಕರಿನೆರಳು: 10 ಜಾಕಿಗಳಲ್ಲಿ ವೈರಸ್ ದೃಢ, ಹೆಚ್ಚಿದ ಆತಂಕ

ನಗರದ ಕುದುರೆ ರೇಸ್ ಮೇಲೂ ಕೊರೋನಾ ಕರಿನೆರಳು ಬಿದ್ದಿದ್ದು, 10 ಮಂದಿ ಜಾಕಿಗಳಿಗೆ ಕೊರೋನಾ ವೈರಸ್ ದೃಢಪಟ್ಟಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಗರದ ಕುದುರೆ ರೇಸ್ ಮೇಲೂ ಕೊರೋನಾ ಕರಿನೆರಳು ಬಿದ್ದಿದ್ದು, 10 ಮಂದಿ ಜಾಕಿಗಳಿಗೆ ಕೊರೋನಾ ವೈರಸ್ ದೃಢಪಟ್ಟಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ರೇಸಿಂಗ್ ಸೀಸನ್ ಆರಂಭಕ್ಕೆ ತಯಾರಿಗಳು ನಡೆಯುತ್ತಿದ್ದು, ರೇಸ್ ನಲ್ಲಿ ಪಾಲ್ಗೊಳ್ಳುವ ಸಲುವಾಗಿ ಬಿಟಿಸಿಯ ಟ್ರ್ಯಾಕ್ ನಲ್ಲಿ ತರಬೇತಿ ನಡೆಸಲು ಬೆಂಗಳೂರು ಮೂಲದ 55 ಜಾಕಿಗಳು ಮುುಂದಾಗಿದ್ದರು. ಹೀಗಾಗಿ ಕೊರೋನಾ ಪರೀಕ್ಷೆ ಮಾಡಿಸಿಕೊಂಡು ಪ್ರಮಾಣಪತ್ರ ಸಲ್ಲಿಸುವಂತೆ ಕ್ಲಬ್ ಅಧಿಕಾರಿಗಳು ಸೂಚಿಸಿದ್ದರು. ಇದರಂತೆ ಇದೀಗ 10 ಮಂದಿ ಜಾಕಿಗಳಿಗೆ ಕೊರೋನಾ ಪಾಸಿಟಿವ್ ಬಂದಿರುವುದು ದೃಢಪಟ್ಟಿದೆ. 

ಈ ನಡುವೆ ಕೆಲ ದಿನಗಳ ಹಿಂದಷ್ಟೇ 10 ಮಂದಿ ಸೋಂಕಿತ ಜಾಕಿಗಳಲ್ಲಿ ಒಬ್ಬರು ಕೆಲ ದಿನಗಳ ಹಿಂದಷ್ಟೇ ಕ್ಲಬ್'ಗೆ ಭೇಟಿ ನೀಡಿರುವ ಹಿನ್ನೆಲೆಯಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ. 

ಸೋಂಕಿತ ಜಾಕಿ ಕ್ಲಬ್'ಗೆ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಜಾಕಿ ಕ್ಲಬ್ ಕಚೇರಿಗೆ ಪ್ರವೇಶ ಮಾಡಿದ್ದ ಹಿನ್ನೆಲೆಯಲ್ಲಿ ಎಲ್ಲ ಉದ್ಯೋಗಿಗಳಿಗೆ ಕ್ಲಬ್ ಖಾಲಿ ಮಾಡುವಂತೆ ಬಿಬಿಎಂಪಿ ಅಧಿಕಾರಿಗಳು ಸೂಚನೆ ನೀಡಿದ್ದು, ಸ್ಯಾನಿಟೈಸ್ ಮಾಡುವ ಕಾರ್ಯ ಮಾಡುತ್ತಿದೆ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com