ಪರೀಕ್ಷೆಗೆ ನಿರಾಕರಿಸುವ ಖಾಸಗಿ ಪ್ರಯೋಗಾಲಯಗಳ ವಿರುದ್ಧ ಕಠಿಣ ಕ್ರಮ: ಕೆ. ಸುಧಾಕರ್

ಚಿಕಿತ್ಸೆ ನೀಡಲು ನಿರಾಕರಿಸುವ ಆಸ್ಪತ್ರೆಗಳ ವಿರುದ್ದ ಕೈಗೊಳ್ಳಲಾದ ಕಠಿಣ ಕ್ರಮದಂತಯೇ ಪರೀಕ್ಷೆ ನಡೆಸಲು ನಿರಾಕರಿಸುವ ಖಾಸಗಿ ಪ್ರಯೋಗಾಲಯದ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ  ಸಚಿವ ಡಾ.ಕೆ.ಸುಧಾಕರ್ ಅವರು ಬುಧವಾರ ತಿಳಿಸಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಚಿಕಿತ್ಸೆ ನೀಡಲು ನಿರಾಕರಿಸುವ ಆಸ್ಪತ್ರೆಗಳ ವಿರುದ್ದ ಕೈಗೊಳ್ಳಲಾದ ಕಠಿಣ ಕ್ರಮದಂತಯೇ ಪರೀಕ್ಷೆ ನಡೆಸಲು ನಿರಾಕರಿಸುವ ಖಾಸಗಿ ಪ್ರಯೋಗಾಲಯದ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ  ಸಚಿವ ಡಾ.ಕೆ.ಸುಧಾಕರ್ ಅವರು ಬುಧವಾರ ತಿಳಿಸಿದ್ದಾರೆ. 

ಸರ್ಕಾರಿ ಮತ್ತು ಖಾಸಗಿ ಪ್ರಯೋಗಾಲಯಗಳ ಮುಖ್ಯಸ್ಥರೊಂದಿಗೆ ವಿಡಿಯೋ ಸಭೆ ನಡೆಸಿದ ಸಚಿವರು ಈ ಸೂಚನೆ ನೀಡಿದ್ದಾರೆ. 

ಪರೀಕ್ಷೆ ನಡೆಸಲು ಕೆಲ ಖಾಸಗಿ ಪ್ರಯೋಗಾಲಯಗಳು ನಿಕಾರಿಸುತ್ತಿವೆ ಎಂಬ ಆರೋಪಗಳು ಕೇಳಿ ಬಂದಿವೆ. ಇಂತಹ ಪ್ರಯೋಗಾಲಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 

ಪ್ರತೀ ನಿತ್ಯ 1 ಲಕ್ಷ ಪರೀಕ್ಷೆ ನಡೆಸುವ ಗುರಿಯನ್ನು ಸರ್ಕಾರ ಹೊಂದಿದ್ದು, ಕೊರೋನಾ ಸೋಂಕಿತರನ್ನು ಬೇಗನೆ ಪತ್ತೆ ಮಾಡುವ ದೃಷ್ಟಿಯಿಂದ ಎಲ್ಲ ಕೋವಿಡ್ ಪ್ರಯೋಗಾಲಯಗಳೂ ನಿಗದಿಪಡಿಸಿದ ಗುರಿಯಷ್ಟು ಪರೀಕ್ಷೆ ನಡೆಸಬೇಕು ಈಗಾಗಲೇ ಸರ್ಕಾರ ಸೂಚನೆ ನೀಡಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಬಾಕಿ ಉಳಿದಿರುವ ಸ್ಯಾಂಪಲ್ಸ್ ಪರೀಕ್ಷೆಗಳು ಹೆಚ್ಚಾಗಿರುವುದರಿಂದ ಹಲವು ಖಾಸಗಿ ಪ್ರಯೋಗಾಲಯಗಳು ಹೊಸದಾಗಿ ಪರೀಕ್ಷೆ ಬರುವ ಸ್ಯಾಂಪಲ್ ಪರೀಕ್ಷೆ ಮಾಡಲು ನಿರಾಕರಿಸುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಸಿಬ್ಬಂದಿಗಳ ಕೊರತೆ ಎಂದು ಹೇಳಲಾಗುತ್ತಿದೆ. ಸ್ವಯಂಚಾಲಿತ ಯಂತ್ರಗಳ ಮೂಲಕ ಪರೀಕ್ಷೆ ನಡೆಸುವಂತೆ ಸರ್ಕಾರ ಕಠಿಣ ಆದೇಶ ನೀಡಿದ್ದರು. ಸಾಕಷ್ಟು ಪ್ರಯೋಗಾಲಯಗಳು ಈಗಲೂ ಆರ್'ಟಿಪಿಸಿಆರ್ ಮೂಲಕವೇ ಪರೀಕ್ಷೆ ನಡೆಸುತ್ತಿದೆ. ಇದರ ಪರಿಣಾಮ ಪರೀಕ್ಷೆ ನಡೆಸಲು ಸಮಯ ಸಾಕಷ್ಟು ತೆಗೆದುಕೊಳ್ಳುತ್ತಿದೆ. ಹೀಗಾಗಿ ಇಂತಹ ಪ್ರಯೋಗಾಲಯಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ ಎನ್ನಲಾಗುತ್ತಿದೆ. 

ನಗರದಲ್ಲಿ 8 ಸರ್ಕಾರಿ ಪ್ರಯೋಗಾಲಯಗಳು, 21 ಖಾಸಗಿ ಪ್ರಯೋಗಾಲಯಗಳು ಪರೀಕ್ಷೆಗಳನ್ನು ನಡೆಸುತ್ತಿದ್ದು, ಈ ಎಲ್ಲಾ ಪ್ರಯೋಗಾಲಯಗಳಲ್ಲೂ ಒಟ್ಟಾರೆ 30,000-40,000 ಸ್ಯಾಂಪಲ್ಸ್ ಗಳ ಪರೀಕ್ಷೆ ಬಾಕಿ ಉಳಿಸಿದವೆ ಎಂದು ಮೂಲಗಳು ತಿಳಿಸಿವೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com