ಕೆಎಸ್ ಆರ್ ಟಿಸಿಯಿಂದ ಸದ್ಯದಲ್ಲಿಯೇ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ!

ರಾಜ್ಯಾದ್ಯಂತ ಸ್ಟಾರ್ಟ್ ಆಫ್ ಆಧಾರಿತ ಟ್ಯಾಕ್ಸಿ ಮತ್ತು ಕೊರಿಯರ್ ಸೇವೆಯನ್ನು ಆರಂಭಿಸಲು ಕೆಎಸ್ ಆರ್ ಟಿಸಿ ಚಿಂತನೆ ನಡೆಸಿದೆ. ಇದಕ್ಕೆ ಇಸ್ರೋ ತಂತ್ರಜ್ಞಾನ ನೆರವು ನೀಡುವ ಸಾಧ್ಯತೆಯಿದೆ. ಆದಾಗ್ಯೂ, ಚರ್ಚೆಗಳು ಇನ್ನೂ ಪ್ರಾಥಮಿಕ ಹಂತದಲ್ಲಿವೆ.
ಕೆಎಸ್ ಆರ್ ಟಿಸಿ ಬಸ್
ಕೆಎಸ್ ಆರ್ ಟಿಸಿ ಬಸ್

ಬೆಂಗಳೂರು: ರಾಜ್ಯಾದ್ಯಂತ ಸ್ಟಾರ್ಟ್ ಆಫ್ ಆಧಾರಿತ ಟ್ಯಾಕ್ಸಿ ಮತ್ತು ಕೊರಿಯರ್ ಸೇವೆಯನ್ನು ಆರಂಭಿಸಲು ಕೆಎಸ್ ಆರ್ ಟಿಸಿ
ಚಿಂತನೆ ನಡೆಸಿದೆ. ಇದಕ್ಕೆ ಇಸ್ರೋ ತಂತ್ರಜ್ಞಾನ ನೆರವು ನೀಡುವ ಸಾಧ್ಯತೆಯಿದೆ.ಆದಾಗ್ಯೂ, ಚರ್ಚೆಗಳು ಇನ್ನೂ ಪ್ರಾಥಮಿಕ ಹಂತದಲ್ಲಿವೆ.

ಈ ಯೋಜನೆಯಿಂದ ಕೆಎಸ್ ಆರ್ ಟಿಸಿಗೆ ಹೆಚ್ಚುವರಿ ಆದಾಯ ಬರಲಿದೆ. ಅನೇಕ ಸೇವೆಗಳಿಗಾಗಿ ತಂತ್ರಜ್ಞಾನ ಸಂಬಂಧಿತ ನೆರವಿಗಾಗಿ ಕೆಎಸ್ ಆರ್ ಟಿಸಿ ಇಸ್ರೋ ಜೊತೆಗೆ ಒಪ್ಪಂದಕ್ಕೆ ಮುಂದಾಗಿದೆ. ಇಲ್ಲದೇ , ಇಸ್ರೋ ವಿಜ್ಞಾನಿಗಳು ಮತ್ತು ಸರ್ಕಾರದ ನಡುವೆ ಒಬ್ಬ ಸಮನ್ವಯಕಾರರನ್ನು ನೇಮಕ ಮಾಡಲಾಗುತ್ತಿದೆ. ಮೊಬೈಲ್ ಆಧಾರಿತ ಟ್ಯಾಕ್ಸಿ ಸೇವೆ ಸೇವೆಗಳಲ್ಲಿ ಒಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಒಂದು ಸುತ್ತಿನ ಚರ್ಚೆಯನ್ನು ಪೂರ್ಣಗೊಳಿಸಿರುವ ಇಲಾಖೆ, ಮುಂದಿನ ಕೆಲ ದಿನಗಳಲ್ಲಿ ಹಿರಿಯ ಇಸ್ರೋ ಪ್ರತಿನಿಧಿಗಳನ್ನು
ಅಧಿಕಾರಿಗಳು ಭೇಟಿ ಮಾಡಲಿದ್ದಾರೆ. ಅಲ್ಲದೇ, ಕೆಎಸ್ ಆರ್ ಟಿಸಿ, ವಾಯುವ್ಯ ಹಾಗೂ ಈಶಾನ್ಯ ಸಂಚಾರಿ ಘಟಕದ ಸಹಯೋಗದೊಂದಿಗೆ ' ನಮ್ಮ ಕೊರಿಯರ್' ಸೇವೆ ಆರಂಭಿಸಲು ಚಿಂತನೆ ನಡೆಸಲಾಗಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇದಕ್ಕೆ ಶೀಘ್ರದಲ್ಲಿಯೇ ಚಾಲನೆ ನೀಡಲಿದ್ದು, ವಾರ್ಷಿಕ 100 ಕೋಟಿ ಆದಾಯ ಸಂಗ್ರಹಿಸಲು ಸರ್ಕಾರ ಎದುರು ನೋಡುತ್ತಿದೆ.

ಅನೇಕ ಕಡೆಗಳಲ್ಲಿ ಕೆಎಸ್ ಆರ್ ಟಿಸಿ ಕಾಯ್ದಿರಿಸುವಿಕೆ ಪ್ರಾಂಚೈಸಿಗಳನ್ನು ಹೊಂದಿದ್ದು, ಗ್ರಾಹಕರು ಇಂತಹ ಕೌಂಟರ್ ಗಳಲ್ಲಿ ತಮ್ಮ ಪ್ಯಾಕೇಜ್ ಗಳನ್ನು ನೀಡಬಹುದು. ಇಲ್ಲಿಂದ ಅವುಗಳು ತಲುಪಬೇಕಾದ ಹತ್ತಿರದ ಬಸ್ ನಿಲ್ದಾಣಕ್ಕೆ ತಲುಪುತ್ತವೆ.ಅಲ್ಲಿಗೆ ಹೋದ ಬಳಿಕ ಏಜೆನ್ಸಿ ಸಿಬ್ಬಂದಿ ಪ್ಯಾಕೇಜ್ ಗಳನ್ನು ಗ್ರಾಹಕರಿಗೆ ತಲುಪಿಸಲಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com