ಮಂಗಳೂರು: ಉಗ್ರರ ಪರ ಗೋಡೆ ಬರಹ ಪ್ರಕರಣ; ಮತ್ತಿಬ್ಬರು ಆರೋಪಿಗಳ ಬಂಧನ

ಮಂಗಳೂರು ನಗರದಲ್ಲಿ ಉಗ್ರರ ಪರ ಗೋಡೆ ಬರಹ ಬರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಮತ್ತಿಬ್ಬರು ಆರೋಪಿಯನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಉಗ್ರರ ಪರ ಬರೆದಿರುವ ಗೋಡೆ ಬರಹ
ಉಗ್ರರ ಪರ ಬರೆದಿರುವ ಗೋಡೆ ಬರಹ
Updated on

ಮಂಗಳೂರು: ಮಂಗಳೂರು ನಗರದಲ್ಲಿ ಉಗ್ರರ ಪರ ಗೋಡೆ ಬರಹ ಬರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಮತ್ತಿಬ್ಬರು ಆರೋಪಿಯನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ತಿಳಿದುಬಂದಿದೆ. 

ನ.27ರಂದು ಕದ್ರಿ‌ ಪೊಲೀಸ್ ಠಾಣೆ ಸಮೀಪದ ಬಿಜೈ ಬಳಿಯ ರಸ್ತೆಯ ಗೋಡೆಯೊಂದರಲ್ಲಿ "ನಮ್ಮನ್ನು ವಿದ್ವಂಸಕ ಕೃತ್ಯ ನಡೆಸಲು ಉತ್ತೇಜಿಸಲು ಬರಬೇಡಿ, ಲಷ್ಕರ್ ಇ ತೊಯಿಬಾ ಮತ್ತು ತಾಲಿಬಾನ್ ಗಳಿಗೆ ಸಂಘಿಗಳನ್ನು ಯಾವ ರೀತಿ ನೋಡಿಕೊಳ್ಳಬೇಕು ಎನ್ನುವುದು ತಿಳಿದಿದೆ.'' ಅಲ್ಲದೆ 'ಲಷ್ಕರ್ ಝಿಂದಾಬಾದ್' ಎಂದು ಬರೆಯಲಾಗಿತ್ತು. 

ಬಳಿಕ ನ.29ರಂದು ನಗರದ ಪಿವಿಎಸ್ ಸಮೀಪದ ನ್ಯಾಯಾಲಯದ ಆವರಣದ ಹಳೆ ಕಟ್ಟಡದ ಗೋಡೆಯ ಮೇಲೆ "Gustak e rasool ek hi saza tan say juda" ಎಂದು ಬರಹ ಪ್ರತ್ಯಕ್ಷವಾಗಿತ್ತು. ಪ್ರವಾದಿಗೆ ಕೋಪ ಬಂದರೆ ಒಂದೇ ಶಿಕ್ಷೆ, ತಲೆಯು ದೇಹದಿಂದ ಬೇರ್ಪಡುವುದು ಎಂಬ ಅರ್ಥ ನೀಡುವ ಬರವಣಿಗೆ ಇದಾಗಿದೆ.

ಪ್ರಕರಣ ದಾಖಲಿಸಿಕೊಂಡಿದ್ದ ಕದ್ರಿ ಪೊಲೀಸರು ನಾಲ್ಕು ತಂಡಗಳಾಗಿ ಆರೋಪಿಗಳ ಪತ್ತೆಗೆ ಕಾರ್ಯ ಆರಂಭಿಸಿದ್ದು, ಎರಡು ದಿನಗಳ ಹಿಂದಷ್ಟೇ ಶಿವಮೊಗ್ಗದ ತೀರ್ಥಹಳ್ಳಿಯ ನಝೀರ್ ಮೊಹಮ್ಮದ್ (26) ಎಂಬಾತನನ್ನು ಬಂಧನಕ್ಕೊಳಪಡಿಸಿತ್ತು. ಈತನನ್ನು ವಿಚಾರಣೆಗೊಳಪಡಿಸಿದಾಗ ಕೆಲ ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆಂದು ತಿಳಿದುಬಂದಿದೆ.

ಈತ ನೀಡಿದ ಮಾಹಿತಿ ಮೇರೆಗೆ ಇದೀಗ ಪೊಲೀಸರು ಬೆಂಗಳೂರು ಹಾಗೂ ತೀರ್ಥಹಳ್ಳಿಯಿಂದ ಇಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆಂದು ವರದಿಗಳು ತಿಳಿಸಿವೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com