ಸಿನಿಮಾ ಥಿಯೇಟರ್ ಗಳು ತೆರೆದರೂ ನಾಟಕ ರಂಗಗಳಿಗಿಲ್ಲ ಪ್ರದರ್ಶನದ ಅವಕಾಶ, ಸಂಕಷ್ಟದಲ್ಲಿ ರಂಗ ಕಲಾವಿದರು

ಮಾರಕ ಕೊರೋನಾ ವೈರಸ್ ನಿಂದಾಗಿ ಭಾರಿ ಪೆಟ್ಟು ಬಿದ್ದಿರುವ ವಲಯಗಳಲ್ಲಿ ಸಿನಿಮಾ ಮತ್ತು ನಾಟಕರಂಗಗಳೂ ಕೂಡ ಒಂದಾಗಿದ್ದು, ಈ ಪೈಕಿ ಈಗಾಗಲೇ ಸಿನಿಮಾಗಳ ಪ್ರದರ್ಶನಕ್ಕೆ ಅವಕಾಶ ಸಿಕ್ಕಿದೆಯಾದರೂ ನಾಟಕ ಪ್ರದರ್ಶನಕ್ಕೆ ಇನ್ನೂ ಅವಕಾಶ ಸಿಕ್ಕಿಲ್ಲ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮಾರಕ ಕೊರೋನಾ ವೈರಸ್ ನಿಂದಾಗಿ ಭಾರಿ ಪೆಟ್ಟು ಬಿದ್ದಿರುವ ವಲಯಗಳಲ್ಲಿ ಸಿನಿಮಾ ಮತ್ತು ನಾಟಕರಂಗಗಳೂ ಕೂಡ ಒಂದಾಗಿದ್ದು, ಈ ಪೈಕಿ ಈಗಾಗಲೇ ಸಿನಿಮಾಗಳ ಪ್ರದರ್ಶನಕ್ಕೆ ಅವಕಾಶ ಸಿಕ್ಕಿದೆಯಾದರೂ ನಾಟಕ ಪ್ರದರ್ಶನಕ್ಕೆ ಇನ್ನೂ ಅವಕಾಶ ಸಿಕ್ಕಿಲ್ಲ.

ಹೀಗಾಗಿ ನಾಟಕ ರಂಗವನ್ನೇ ನೆಚ್ಚಿಕೊಂಡಿರುವ ಸಾವಿರಾರು ಕಲಾವಿದರು ಇದೀಗ ಸಂಕಷ್ಟ ಎದುರಿಸುವಂತಾಗಿದೆ. ನಾಟಕ ಕಂಪನಿಗಳಿಗೆ ರಂಗಭೂಮಿ ನಾಟಕಗಳ ಪ್ರದರ್ಶನಕ್ಕೆ ಅನುಮತಿ ಇಲ್ಲದಿರುವುದರಿಂದ ಅವುಗಳು ಇನ್ನೂ ನಿಶ್ಚಲವಾಗಿವೆ. ನಾಟಕಗಳನ್ನು ಪ್ರದರ್ಶಿಸುವ ಮೂಲಕ ಜೀವನವನ್ನು  ರೂಪಿಸಿಕೊಂಡಿದ್ದ ಸಂಗೀತಗಾರರು ಸೇರಿದಂತೆ 2,500 ಕ್ಕೂ ಹೆಚ್ಚು ಕಲಾವಿದರು ಇನ್ನೂ ಕಷ್ಟಪಡುತ್ತಿದ್ದಾರೆ.

ಗುಬ್ಬಿ ವೀರಣ್ಣ ನಟಕ ಸಂಘ ಸೇರಿದಂತೆ ಕನಿಷ್ಠ 12 ನಾಟಕ ಕಂಪನಿಗಳು ಬಾದಾಮಿಯಲ್ಲಿ ನಡೆದ ವಾರ್ಷಿಕ ಬನಶಂಕರಿ ರಥೋತ್ಸವದಲ್ಲಿ ನಾಟಕಗಳನ್ನು ಪ್ರದರ್ಶಿಸಲು ಡೇರೆಗಳನ್ನು ಹಾಕುತ್ತಿದ್ದವು. ಒಂದು ತಿಂಗಳ ಉತ್ಸವದಲ್ಲಿ ಅವರು 500 ಕ್ಕೂ ಹೆಚ್ಚು ಕುಟುಂಬಗಳಿಗೆ ಈ ನಾಟಕ ಪ್ರದರ್ಶನಗಳು ಉದ್ಯೋಗವನ್ನು  ಒದಗಿಸುತ್ತಿದ್ದವು, ಆದರೆ ಇದೀಗ ಅದೂ ಕೂಡ ರದ್ದಾಗಿದೆ. ಈ ಬಗ್ಗೆ ಮಾತನಾಡಿರುವ ಬಾದಾಮಿಯ ನಾಗರತ್ನ (44) ಅವರು, ನಿಜಕ್ಕೂ ಜಿಲ್ಲಾಡಳಿತದ ಆದೇಶ ಆಘಾತವನ್ನುಂಟು ಮಾಡಿದೆ. ಹಬ್ಬದ ಸಮಯದಲ್ಲಿ ನಾನು ನಾಟಕ ಪ್ರದರ್ಶನ ಮಾಡಿ ಅದರಿಂದ ಬಂದ ಸಾಂಪಾದನೆಯಲ್ಲಿ ಒಂದಿಷ್ಟು ಯೋಜನೆಗಳನ್ನು  ಹಾಕಿಕೊಂಡಿದ್ದೆ. ಆದರೆ ಈಗ ಏಕಾಏಕಿ ನಾನು ನಿರುದ್ಯೋಗಿಯಾಗಿದ್ದೇನೆ. ನನ್ನ ಮಕ್ಕಳ ಶಾಲಾ ಶುಲ್ಕವನ್ನು ನಾನು ಪಾವತಿಸಬೇಕು ಮತ್ತು ಸಾಲಗಳನ್ನು ಮರುಪಾವತಿಸಬೇಕು ಎಂದು ಕಳೆದ 3 ದಶಕಗಳಿಂದ ನಾಟಕ ಕಲಾವಿದರಾಗಿರುವ ಅವರು ಹೇಳಿದ್ದಾರೆ.

ನಾಟಕ ಕಂಪೆನಿಗಳು ಪುನರಾರಂಭಕ್ಕೆ ಅವಕಾಶ ನೀಡುವಂತೆ ಅನೇಕ ಕಲಾವಿದರು ಜಿಲ್ಲಾಡಳಿತವನ್ನು ಒತ್ತಾಯಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಜಮ್ಖಂಡಿಯ ರಂಗಭೂಮಿ ಕಲಾವಿದ ರಾಯಪ್ಪ ಡಿ ಅವರು ಮಾತನಾಡಿ, ಇತ್ತೀಚಿನ ಉಪಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು ನಡೆಸುವ ರ್ಯಾಲಿಗಳಲ್ಲಿ  ಲಕ್ಷಾಂತರ ಮಂದಿ ಪಾಲ್ಗೊಂಡಿದ್ದರು. ಆದರೆ ಈ ವೇಳೆ ಯಾರೂ ಕೂಡ ಕೋವಿಡ್ ನಿಯಮಾವಳಿಗಳನ್ನು ಪಾಲಿಸಿರಲಿಲ್ಲ. ಈ ಬಗ್ಗೆ ಸರ್ಕಾರ ಯಾವುದೇ ರೀತಿಯ ಕ್ರಮ ಕೈಗೊಳ್ಳಲಿಲ್ಲ. ಆದರೆ ನಾಟಕ ಪುನಾರಂಭಕ್ಕೆ ಮಾತ್ರ ಜನ ಸೇರುವ ಕಾರಣ ನೀಡಿ ಪ್ರದರ್ಶನ ರದ್ದು ಮಾಡಲಾಗುತ್ತಿದೆ. ನಿಜಕ್ಕೂ ಇದು ಸರಿಯಲ್ಲ.  ನಾಟಕ ಪ್ರದರ್ಶನದ ವೇಳೆ ನಾವು ಎಲ್ಲ ರೀತಿಯ ಮಾನದಂಡಗಳನ್ನೂ ಅನುಸರಿಸುತ್ತೇವೆ ಎಂಬ ಭರವಸೆ ನೀಡಿದ ಬಳಿಕಿವೂ ಜಿಲ್ಲಾಡಳಿತ ನಮಗೆ ಅವಕಾಶ ನಿರಾಕರಿಸಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇನ್ನು ಇದೇ ವಿಚಾರವಾಗಿ ಮಾತನಾಡಿರುವ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅವರು, ನಾವು ನಾಟಕ ಕಂಪನಿಗಳಿಗೆ ರಂಗಭೂಮಿಗಳಿಗೆ ಅವಕಾಶ ನೀಡುವುದಿಲ್ಲ. ನಾವು ಯಾವುದೇ ರೀತಿಯ ಅಪಾಯವನ್ನು ತೆಗೆದುಕೊಳ್ಳಲು ಬಯಸುವುದಿಲ್ಲ. ಕಲಾವಿದರು ಆರ್ಥಿಕ ತೊಂದರೆಯಲ್ಲಿದ್ದಾರೆ, ಆದರೆ ಅವರು  ಸಹಕರಿಸಬೇಕು ಎಂದು ಹೇಳಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com