ಆರ್‌ಎಸ್‌ಎಸ್ ಮುಖಂಡ ವೆಂಕಟರಮಣ ಹೊಳ್ಳ ರಸ್ತೆ ಅಪಘಾತದಲ್ಲಿ ದುರ್ಮರಣ

ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಕಬಕ ಬಳಿಯ ಪಾಳ್ಯದಲ್ಲಿ ಇಂದು ಮುಂಜಾನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ  ರಾಷ್ಟ್ರೀಯ ಸ್ವಯಂಸೇವಕ (ಆರ್‌ಎಸ್‌ಎಸ್)ದ ಹಿರಿಯ ಮುಖಂಡ ವೆಂಕಟರಮಣ ಹೊಳ್ಳ (60) ಮೃತಪಟ್ಟಿದ್ದಾರೆ. 
ವೆಂಕಟರಮಣ ಹೊಳ್ಳ
ವೆಂಕಟರಮಣ ಹೊಳ್ಳ
Updated on: 

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಕಬಕ ಬಳಿಯ ಪಾಳ್ಯದಲ್ಲಿ ಇಂದು ಮುಂಜಾನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ  ರಾಷ್ಟ್ರೀಯ ಸ್ವಯಂಸೇವಕ (ಆರ್‌ಎಸ್‌ಎಸ್)ದ ಹಿರಿಯ ಮುಖಂಡ ವೆಂಕಟರಮಣ ಹೊಳ್ಳ (60) ಮೃತಪಟ್ಟಿದ್ದಾರೆ. 

ಹೊಳ್ಳ ಓಡಿಸುತ್ತಿದ್ದ ಬೈಕ್ ರಸ್ತೆ ತಡೆಗೋಡೆಗೆ ಡಿಕ್ಕಿ ಹೊಡೆದಿದೆ ಪರಿಣಾಮ ಅವರು ಕೆಳಗೆ ಬಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಬಿ.ಸಿ. ರೋಡ್ ನ ಅಗ್ರಬೈಲ್ ನ ಹೊಳ್ಳ ಅವರು, ಮಂಗಳೂರು ವಿಭಾಗದ ಗ್ರಾಮ ವಿಕಾಸ್ ಘಟಕದ ಆರ್.ಎಸ್.ಎಸ್ ಪ್ರಮುಖರಾಗಿದ್ದರು.

ಸೋಮವಾರ ಆರ್‌ಎಸ್‌ಎಸ್ ಸಭೆಗೆ ಹಾಜರಾದ ನಂತರ ಪುತ್ತೂರಿನಲ್ಲಿ ರಾತ್ರಿ ತಂಗಿದ್ದ ಅವರು ಬೆಳಿಗ್ಗೆ ಮನೆಗೆ ವಾಪಸ್ಸಾಗುತ್ತಿದ್ದಾಗ ದುರಂತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ದಕ್ಷಿಣ ಕನ್ನಡ ಸಂಸದ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಹೊಳ್ಳ ಅವರು ಮಾರ್ಗದರ್ಶಕರಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com