ರಾಜ್ಯ
ಹೊಸ ವರ್ಷ ಸಂಭ್ರಮಕ್ಕೆ ಸಂಗ್ರಹಿಸಿಟ್ಟಿದ್ದ 1.15 ಕೋಟಿ ರೂ. ಮೌಲ್ಯದ ಮಾದಕ ವಸ್ತು ಸಿಸಿಬಿ ವಶಕ್ಕೆ
ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ,ನಾಲ್ವರು ಅಂತಾರಾಜ್ಯ ಡ್ರಗ್ಸ್ ಪೆಡ್ಲರ್ ಅನ್ನು ಬಂಧಿಸಿ 1.15 ಕೋಟಿ ರೂ. ಮೌಲ್ಯದ ಮಾದಕ ವಸ್ತು ಜಪ್ತಿಮಾಡಿಕೊಂಡಿದ್ದಾರೆ.
ಬೆಂಗಳೂರು: ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ,ನಾಲ್ವರು ಅಂತಾರಾಜ್ಯ ಡ್ರಗ್ಸ್ ಪೆಡ್ಲರ್ ಅನ್ನು ಬಂಧಿಸಿ 1.15 ಕೋಟಿ ರೂ. ಮೌಲ್ಯದ ಮಾದಕ ವಸ್ತು ಜಪ್ತಿಮಾಡಿಕೊಂಡಿದ್ದಾರೆ.
ಎಂ. ತಿರುಪಾಲ್ (32), ಕಮಲೇಶನ್ (31), ಸತೀಶ್ ಕುಮಾರ್ (27),ಏಜಾಜ್ ಪಾಷ (45) ಬಂಧಿತ ಆರೋಪಿಗಳು.
ಬಂಧಿತರಿಂದ 5 ಕೆ ಜಿ 600 ಗ್ರಾಂ ಹ್ಯಾಶ್ ಆಯಿಲ್ ಹಾಗೂ 3 ಕೆಜಿ 300 ಗ್ರಾಂ ಗಾಂಜಾ, 1 ಕಾರು, 1ದ್ವಿಚಕ್ರ ಸೇರಿ 5,500 ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.