

ಬೆಂಗಳೂರು: ಆರ್ಎಸ್ಎಸ್ ನಾಯಕ ಹಾಗೂ ಅಮಿತ್ ಶಾ, ಜೆಪಿ ನಡ್ಡಾ ಸೇರಿ ಇತರೆ ಬಿಜೆಪಿ ನಾಯಕರ ಹೆಸರು ಹೇಳಿಕೊಂಡು ಸಾಕಷ್ಟು ಮಾಜಿ ಸಂಸದ ಹಾಗೂ ಶಿಕ್ಷಣ ತಜ್ಞರೊಬ್ಬರಿಗೆ ಬರೋಬ್ಬರಿ ರೂ.20 ಕೋಟಿ ವಂಚಿಸಿದ್ದ ಆರೋಪಿಯೊಬ್ಬ ಸಿಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾನೆ.
ಯುವರಾಜ್ ಸ್ವಾಮಿ ಬಂಧಿತ ಆಱೋಪಿಯಾಗಿದ್ದಾನೆ. ಬಿಜೆಪಿ ನಾಯಕರೊಂದಿಗೆ ಭಾವಚಿತ್ರ ತೆಗೆಸಿಕೊಂಡಿದ್ದ ಆರೋಪಿ, ತಾನು ಬಹಳಷ್ಟು ಮಂದಿ ಬಿಜೆಪಿ ನಾಯಕರೊಂದಿಗೆ ಆತ್ಮೀಯನಾಗಿದ್ದೇನೆ ಎಂದು ಜನರನ್ನು ನಂಬಿಸುತ್ತಿದ್ದ.
ಇವನ ಮಾಯದ ಜಾಲಕ್ಕೆ ಮಾಜಿ ಸಂಸದ ಹಾಗೂ ಶಿಕ್ಷಣ ತಜ್ಞರೊಬ್ಬರೂ ಕೂಡ ಸಿಕಿಬಿದ್ದಿದ್ದು, ಆರೋಪಿಯ ಮಾಯದ ಮಾತನ್ನು ನಂಬಿ ಬರೋಬ್ಬರಿ ರೂ.20 ಕೋಟಿವರೆಗೂ ನೀಡಿದ್ದಾರೆ. ಹಣ ಪಡೆದಿದ್ದ ಆರೋಪಿ ಹಲವು ಬಾರಿ ಸಾಕಷ್ಟು ಸಭೆಗಳನ್ನು ನಡೆಸಿದ್ದಾನೆ. ಬಳಿಕ ಆತನಿಂದ ಯಾವುದೇ ಕೆಲಸಗಳಾಗುತ್ತಿಲ್ಲಿ ಎಂಬುದನ್ನು ಅರಿತ ಮಾಜಿ ಸಂಸದರು, ಹಣವನ್ನು ಹಿಂದಕ್ಕೆ ನೀಡುವಂತೆ ತಿಳಿಸಿದಾಗ ಕೆಟ್ಟ ಪದಗಳಿಂದ ನಿಂದಿಸಿದ್ದಾನೆ. ಅಲ್ಲದೆ. ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದೀರೆಂಂದು ಆರೋಪಿಸಿದ್ದಾನೆಂದು ತಿಳಿದುಬಂದಿದೆ.
ಬಳಿಕ ಹಣವನ್ನು ಹಿಂಪಡೆಯಲು ಮಾಜಿ ಸಂಸದರು ಕಳೆದ ಮೂರುವ ವರ್ಷಗಳಿಂದ ಸತತ ಯತ್ನ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ತಮಗೆ ಕೆಟ್ಟ ಹೆಸರು ಬರಬಹುದು ಎಂದು ತಿಳಿದಿದ್ದ ಅವರು ಪೊಲೀಸರಿಗೆ ದೂರು ನೀಡಲು ಹಿಂದೇಟು ಹಾಕಿದ್ದಾರೆ. ಬಳಿಕ 2019ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ಹೈ ಪ್ರೊಫೈಲ್ ಹೊಂದಿರುವ ಹಿರಿಯ ಅಧಿಕಾರಿಗಳು ಆರೋಪಿಯನ್ನು ಬಂಧಿಸಲು ಮುಂದಾಗಿದ್ದಾರೆ. ಬಳಿಕ ಆರೋಪಿಯ ಮೊಬೈಲ್ ಫೋನ್'ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪರಿಶೀಲನೆ ವೇಳೆ ಹಲವು ರಾಜಕೀಯ ನಾಯಕರ ಮೊಬೈಲ್ ಸಂಖ್ಯೆಗಳಿರುವುದು ಕಂಡು ಬಂದಿದೆ. ಇದರಿಂದ ಕೆಲವರೊಂದಿಗೆ ಸಂಪರ್ಕದಲ್ಲಿರುವುದು ಖಚಿತವಾಗಿದೆ. ಈ ಬಗ್ಗೆ ತನಿಖೆ ಪೂರ್ಣಗೊಂಡ ಬಳಿಕ ವಿವರವಾಗಿ ಮಾಹಿತಿಗಳನ್ನು ನೀಡಲು ಸಾಧ್ಯ. ವಂಚಕನೊಂದಿಗೆ ಈ ಹಿಂದೆ ಯಾವುದೇ ರೀತಿಯ ಸಂಪರ್ಕಗಳಿರಲಿಲ್ಲ ಎಂದು ಮಾಜಿ ಸಂಸದರು ಹೇಳಿದ್ದಾರೆಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ಹೇಳಿದ್ದಾರೆ.