ಅಮೂಲ್ಯ ಹಿಂದೆ ಕಾಣದ ಕೈ ಗಳ ಕೆಲಸ: ಸದಾನಂದ ಗೌಡ 

ವಿದ್ಯಾರ್ಥಿನಿ ಅಮೂಲ್ಯ ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಅತ್ಯಂತ ಖಂಡನೀಯ. ಅಮೂಲ್ಯ ವಿರುದ್ಧ ಅತ್ಯಂತ ಕಠೋರವಾದ ಕ್ರಮವನ್ನು ಜರುಗಿಸಬೇಕು. ಈ ಹುಡುಗಿಯ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಅವುಗಳನ್ನು ಪತ್ತೆ ಹಚ್ಚಬೇಕು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.
ಡಿ ವಿ ಸದಾನಂದಗೌಡ
ಡಿ ವಿ ಸದಾನಂದಗೌಡ
Updated on: 

ಬೆಂಗಳೂರು: ವಿದ್ಯಾರ್ಥಿನಿ ಅಮೂಲ್ಯ ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಅತ್ಯಂತ ಖಂಡನೀಯ. ಅಮೂಲ್ಯ ವಿರುದ್ಧ ಅತ್ಯಂತ ಕಠೋರವಾದ ಕ್ರಮವನ್ನು ಜರುಗಿಸಬೇಕು. ಈ ಹುಡುಗಿಯ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಅವುಗಳನ್ನು ಪತ್ತೆ ಹಚ್ಚಬೇಕು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.

ನೆಲಮಂಗಲ ಸಮೀಪದ ಸೋಲೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ನಾನಾ ವಿಶ್ವವಿದ್ಯಾಲಯಗಳಲ್ಲಿ ದೇಶದ್ರೋಹದ ಘಟನೆಗಳು ನಡೆಯುತ್ತಿವೆ. ಇದರ ಹಿಂದೆ ಕಾಣದ ದೊಡ್ಡ ಜಾಲವೇ ಕೆಲಸ ಮಾಡುತ್ತಿದೆ. 

ಪೊಲೀಸರು ಇಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು. ಮುಂದೆ ಯಾರೂ ಇಂತಹ ಕೆಲಸ ಮಾಡಲು ಮುಂದಾಗಬಾರದು ಎಂದು ಹೇಳಿದರು.

ದೇಶ ಬಲಿಷ್ಠವಾದಾಗ ಬೇರೆ ದೇಶಗಳ ನಾಯಕರು ನಮ್ಮ ದೇಶಕ್ಕೆ ಬರುವುದು ಸಹಜ. ಹಿಂದೆ ನಾವು ಬೇರೆ ದೇಶಕ್ಕೆ ಹೋಗುವ ಪರಿಸ್ಥಿತಿಯಿತ್ತು. ಮೋದಿ ಪ್ರಧಾನಿಯಾದ ಬಳಿಕ ಈಗ ಬೇರೆ ದೇಶಗಳ ಅಧ್ಯಕ್ಷರು ಬರುತ್ತಿದ್ದಾರೆ.

ಅಮೆರಿಕ ಅಧ್ಯಕ್ಷರು ನಮ್ಮ ದೇಶಕ್ಕೆ ಬರುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶ ಬಲಿಷ್ಠವಾಗಿದೆ. ಭಾರತ ಮುಂದೆಂದು ದಿನ ಜಗತ್ತಿನಲ್ಲೇ ಅತ್ಯಂತ ಮುಂಚೂಣಿಯ ದೇಶವಾಗಲಿದೆ. ಇದಕ್ಕೆ ಬೇಕಾದ ಎಲ್ಲಾ ಕೆಲಸ ಕಾರ್ಯಗಳನ್ನು ಪ್ರಧಾನಿ ಮೋದಿ ಮಾಡುತ್ತಿದ್ದಾರೆ ಎಂದು ಸದಾನಂದಗೌಡ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com