ಸೆನಗಲ್ ಜೊತೆಗಿನ ಕಾನೂನು ಪ್ರಕ್ರಿಯೆ ಪೂರ್ಣ: ಶೀಘ್ರದಲ್ಲೇ ಭೂಗತ ಪಾತಕಿ ರವಿ ಪೂಜಾರಿ ಭಾರತಕ್ಕೆ ಹಸ್ತಾಂತರ

ಭೂಗತ ಪಾತಕಿ ರವಿ ಪೂಜಾರಿಯನ್ನು ರಾಜ್ಯಕ್ಕೆ ಕರೆತರಲು ತೊಡಕಾಗಿದ್ದ ಕೆಲ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಆರೋಪಿಯನ್ನು ಸೆನಗಲ್ ದೇಶದಿಂದ ರಾಜ್ಯಕ್ಕೆ ಕರೆತರಲಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 
ಭೂಗತ ಪಾತಕಿ ರವಿ ಪೂಜಾರಿ
ಭೂಗತ ಪಾತಕಿ ರವಿ ಪೂಜಾರಿ

ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿಯನ್ನು ರಾಜ್ಯಕ್ಕೆ ಕರೆತರಲು ತೊಡಕಾಗಿದ್ದ ಕೆಲ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಆರೋಪಿಯನ್ನು ಸೆನಗಲ್ ದೇಶದಿಂದ ರಾಜ್ಯಕ್ಕೆ ಕರೆತರಲಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 

ಈ ಸಂಬಂಧ ಹಿರಿಯ ಅಧಿಕಾರಿಗಳ ತಂಡ ಶೀಘ್ರ ಸೆನಗಲ್ ದೇಶಕ್ಕೆ ತರಳಲು ಸಿದ್ಧತೆ ನಡೆಸಿದೆ ಎಂದು ಹೇಳಲಾಗುತ್ತಿದೆ. '

ಸೆನಗಲ್ ದೇಶದ ಜೊತೆಗೆ ಭಾರತಕ್ಕೆ ಒಪ್ಪಂದ ಹಿನ್ನೆಲೆಯಲ್ಲಿ ರವಿ ಪೂಜಾರಿ ಬಂಧನಕ್ಕೆ ತೊಡಕಾಗಿತ್ತು. ಇದೀಗ ರವಿ ಪೂಜಾರಿಯನ್ನು ರಾಜ್ಯಕ್ಕೆ ಕರೆತರುವ ಸಂಬಂಧ ಕಾನೂನು ಪ್ರಕ್ರಿಯೆಗಳು ನಿವಾರಣೆಯಾಗಿದ್ದು, ಸದಸ್ಯದಲ್ಲಿಯೇ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ಪೊಲೀಸರ ತಂಡ ಸೆನಗಲ್'ಗೆ ತೆರಳಿ ಆತನನ್ನು ರಾಜ್ಯಕ್ಕೆ ಕರೆ ತರುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ. 

ಪೊಲೀಸರು ಕೆಲ ದಾಖಲೆಗಳೊಂದಿಗೆ ಆತನನ್ನು ಕರೆತರಲು ಸಿದ್ಧತೆ ನಡೆಸುತ್ತಿದ್ದಾರೆಂದು ಮೂಲಗಳು ಮಾಹಿತಿ ನೀಡಿವೆ. 

ವಿದೇಶದಲ್ಲಿ ಅಡಗಿ ಕುಳಿತಿರುವ ಭೂಗತ ಪಾತಕಿ ರವಿ ಪೂಜಾರಿ ಉದ್ಯಮಗಳು ಮತ್ತು ರಾಜಕಾರಣಿಗಳಿಗೆ ಕರೆ ಮಾಡಿ ಹಣ ನೀಡುವಂತೆ ಬೆದರಿಕೆವೊಡ್ಡುತ್ತಿದ್ದ. ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಹಲವು ರಾಜಕಾರಣಿಗಳಿಗೆ ಆರೋಪಿ ಹೆಸರಿನಲ್ಲಿ ಕರೆ ಬಂದಿದ್ದವು. ಹೀಗೆ ವಿದೇಶದಲ್ಲಿ ಕುಳಿತು ಹಫ್ತಾ ವಸೂಲಿ ಮಾಡುವುದನ್ನೇ ದಂಧೆಯಾಗಿಸಿಕೊಂಡಿದ್ದ. ಈತನ ವಿರುದ್ಧ ಬೆಂಗಳೂರಿನಲ್ಲಿ 39, ಮಂಗಳೂರಿನಲ್ಲಿ 36, ಉಡುಪಿಯಲ್ಲಿ 11 ಮತ್ತು ಮೈಸೂರು, ಹುಬ್ಬಳ್ಳಿ-ಧಾರವಾಡ, ಕೋಲಾರ ಮತ್ತು ಶಿವಮೊಗ್ಗದಲ್ಲಿ ತಲಾ ಒಂದೊಂದು ಪ್ರಕರಣಗಳು ದಾಖಲಾಗಿದ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com