ಬೆಳಗಾವಿ: ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟಿದ್ದ ಕಾಡು ಕೋಣವನ್ನು ಹೊರತೆಗೆದ ಅರಣ್ಯ ಸಿಬ್ಬಂದಿ!

ಕಾಡಿನಿಂದ ಹೊರ ಬಂದ 5 ವರ್ಷದ ಕಾಡು ಕೋಣ ಆಕಸ್ಮಿಕವಾಗಿ ತೆರದ ಬಾವಿಗೆ ಬಿದ್ದು ಮೃತಪಟ್ಟಿದ್ದು ಅರಣ್ಯ ಸಿಬ್ಬಂದಿ ಹೊರ ತೆಗೆದಿದ್ದಾರೆ. 
ಕಾಡು ಕೋಣ
ಕಾಡು ಕೋಣ

ಬೆಳಗಾವಿ: ಕಾಡಿನಿಂದ ಹೊರ ಬಂದ 5 ವರ್ಷದ ಕಾಡು ಕೋಣ ಆಕಸ್ಮಿಕವಾಗಿ ತೆರದ ಬಾವಿಗೆ ಬಿದ್ದು ಮೃತಪಟ್ಟಿದ್ದು ಅರಣ್ಯ ಸಿಬ್ಬಂದಿ ಹೊರ ತೆಗೆದಿದ್ದಾರೆ. 

ಬೆಳಗಾವಿ ತಾಲೂಕಿನ ಹಂಚಿನಾಳ ಗ್ರಾಮದ ಕುಲಕರ್ಣಿ ಫಾರ್ಮ್ ಹೌಸ್ ನಲ್ಲಿದ್ದ ಬಾವಿಗೆ ಗುರುವಾರ ಸಂಜೆ ಕಾಡು ಕೋಣ ಬಿದ್ದಿತ್ತು.  ಇದನ್ನು ಗಮನಿಸಿ ಸ್ಥಳೀಯರು ಕೂಡಲೇ ಅರಣ್ಯ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದರು. 

ಕೂಡಲೇ ಘಟನಾ ಸ್ಥಳಕ್ಕೆ ಅರಣ್ಯ ಸಿಬ್ಬಂದಿಗಳು ಬಂದರೂ ಪ್ರಯೋಜನವಾಗಲಿಲ್ಲ. ಅದಾಗಲೇ ಕಾಡುಕೋಣ ಮೃತಪಟ್ಟಿತ್ತು. ರಾತ್ರಿಯೆಲ್ಲಾ ನೀರು ತೆಗೆದು ಬೆಳಗ್ಗೆ ಕಾಡುಕೋಣವನ್ನು ಹೊರ ತೆಗೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com