ಆನೆಗೊಂದಿ ಉತ್ಸವ ನಡೆದು ಬಂದ ಹಾದಿ!

1998ರಲ್ಲಿ ಹಂಪಿ ಉತ್ಸವದ ಜೊತೆಗೆ ಜಂಟಿಯಾಗಿ ಆನೆಗೊಂದಿ ಉತ್ಸವ ಆರಂಭವಾಯ್ತು. ಉತ್ಸವಕ್ಕೆ ಹಂಪಿಯಲ್ಲಿ ಚಾಲನೆ ಸಿಕ್ಕರೆ, ಆನೆಗೊಂದಿಯಲ್ಲಿ ಉತ್ಸವ ಸಮಾರೋಪಗೊಂಡಿತ್ತು. ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂಪಿ ಪ್ರಕಾಶ್ ಚಾಲನೆ ನೀಡಿದ್ದರು.
ಆನೆಗೊಂದಿ ಉತ್ಸವ
ಆನೆಗೊಂದಿ ಉತ್ಸವ
Updated on

1998ರಲ್ಲಿ ಹಂಪಿ ಉತ್ಸವದ ಜೊತೆಗೆ ಜಂಟಿಯಾಗಿ ಆನೆಗೊಂದಿ ಉತ್ಸವ ಆರಂಭವಾಯ್ತು. ಉತ್ಸವಕ್ಕೆ ಹಂಪಿಯಲ್ಲಿ ಚಾಲನೆ ಸಿಕ್ಕರೆ, ಆನೆಗೊಂದಿಯಲ್ಲಿ ಉತ್ಸವ ಸಮಾರೋಪಗೊಂಡಿತ್ತು. ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂಪಿ ಪ್ರಕಾಶ್ ಚಾಲನೆ ನೀಡಿದ್ದರು.

1999ರಲ್ಲಿ ಅಂದಿನ ಸಚಿವ ಎಂ.ವೈ.ಘೋರ್ಪಡೆ ಹಂಪಿ- ಆನೆಗೊಂದಿ ಉತ್ಸವಕ್ಕೆ ಚಾಲನೆ ನೀಡಿದ್ದರು.

2001ರಲ್ಲಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಆನೆಗೊಂದಿ ಉತ್ಸವವನ್ನ ಹಂಪಿಯಿಂದ ಬೇರ್ಪಡಿಸಿ ಚಾಲನೆ ನೀಡಿದ್ದರು. ಆನಂತರ ಹತ್ತು ವರ್ಷಗಳ ಕಾಲ ಉತ್ಸವ ನಡೆಯಲಿಲ್ಲ.

2011ರಲ್ಲಿ ಸಿಎಂ ಆಗಿದ್ದ ಬಿಎಸ್ ಯಡಿಯೂರಪ್ಪ ಆನೆಗೊಂದಿ ಉತ್ಸವಕ್ಕೆ ಚಾಲನೆ ನೀಡಿದ್ದರು.

2012 ರಲ್ಲಿ ನಡೆದ ಆನೆಗೊಂದಿ ಉತ್ಸವವನ್ನು ಸ್ಥಳೀಯ ಜನಪ್ರತಿನಿಧಿಗಳು ಸರಳವಾಗಿ ನಡೆಸಿದ್ದರು

2013ರಲ್ಲಿ ಆನೆಗೊಂದಿ ಉತ್ಸವ ನಡೆಯಲಿಲ್ಲ.

2014ರಲ್ಲಿ ನಡೆದ ಆನೆಗೊಂದಿ ಉತ್ಸವಕ್ಕೆ ಅಂದಿನ ಸಚಿವರಾಗಿದ್ದ ಶಿವರಾಜ ತಂಗಡಗಿ ಚಾಲನೆ ನೀಡಿದ್ದರು. ಅಂದಿನ ಸಿಎಂ ಸಿದ್ದರಾಮಯ್ಯ ಬಂದಿರಲಿಲ್ಲ.

2014ರ ನಂತರ 2020ರಲ್ಲಿ ಆನೆಗೊಂದಿ ಉತ್ಸವ ನಡೆಯುತ್ತಿದೆ. ಸಿಎಂ ಯಡಿಯೂರಪ್ಪ ಕಾರ್ಯಕ್ರಮ ಕೊನೇ ಕ್ಷಣದಲ್ಲಿ ರದ್ದಾಗಿದೆ.

ಉತ್ಸವದ ಸಮಯದಲ್ಲಿ ಸಿಎಂ ಆಗಿದ್ದವರು ಪಾಲ್ಗೊಳ್ಳಲು ಆಗದಿರುವುದಕ್ಕೆ ಯಾವುದೇ ವಿಶೇಷ ಕಾರಣಗಳಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com