ಬೆಂಗಳೂರು: ಮೆಟ್ರೋಗೆ ದಾರಿ ಮಾಡಿಕೊಡಲು 120 ವರ್ಷದ ಹಳೆಯ ಹನುಮ ದೇಗುಲ ತೆರವು

ಸ್ಥಳೀಯರ ಪರ ಹಾಗೂ ವಿರೋಧದ ನಡುವೆಯೂ ಮೆಟ್ರೋ ಕಾಮಗಾರಿಗಾಗಿ ಸುಮಾರು 120 ವರ್ಷಗಳಷ್ಟು ಹಳೆಯದಾದ ಆಂಜನೇಯಸ್ವಾಮಿ ದೇವಾಲಯವನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. 
ಮೆಟ್ರೋಗೆ ದಾರಿ ಮಾಡಿಕೊಡಲು 120 ವರ್ಷದ ಹಳೆಯ ಹನುಮ ದೇಗುಲ ತೆರವು
ಮೆಟ್ರೋಗೆ ದಾರಿ ಮಾಡಿಕೊಡಲು 120 ವರ್ಷದ ಹಳೆಯ ಹನುಮ ದೇಗುಲ ತೆರವು

ಬೆಂಗಳೂರು: ಸ್ಥಳೀಯರ ಪರ ಹಾಗೂ ವಿರೋಧದ ನಡುವೆಯೂ ಮೆಟ್ರೋ ಕಾಮಗಾರಿಗಾಗಿ ಸುಮಾರು 120 ವರ್ಷಗಳಷ್ಟು ಹಳೆಯದಾದ ಆಂಜನೇಯಸ್ವಾಮಿ ದೇವಾಲಯವನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. 

ಹೊಸೂರು-ಬೊಮ್ಮಸಂದ್ರಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ ರೈಲು ಕಾಮಗಾರಿಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ಕೈಗೆತ್ತಿಕೊಂಡಿದೆ. 

ಗಾರ್ವೇಬಾವಿ ಪಾಳ್ಯದ ಆಂಜನೇಯ ಸ್ವಾಮಿ ದೇವಸ್ಥಾನ ಇರುವ ಮಾರ್ಗದಲ್ಲಿಯೇ ಮೆಟ್ರೋ ಮಾರ್ಗ ಹಾದು ಹೋಗಬೇಕಿದೆ. ಈ ಹಿನ್ನೆಲೆಯಲ್ಲಿ ಸುಮಾರು 120 ವರ್ಷಗಳಷ್ಟು ಹಳೆಯದಾದ ಆಂಜನೇಯಸ್ವಾಮಿ ದೇವಾಲಯ ತೆರವಿಗೆ ಸೋಮವಾರ ಮೆಟ್ರೋ ನಿಗಮ ಮುಂದಾಗಿದ್ದು, ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈಗಾಗಲೇ ಆಂಜನೇಯ ಸ್ವಾಮಿ ದೇವಾಲಯ ಇರುವ ಭೂಸ್ವಾಧೀನಕ್ಕಾಗಿ ಮೆಟ್ರೋ ನಿಗಮ ದೇವಾಲಯದ ಆಡಳಿತ ಮಂಡಳಿಗೆ ಸುಮಾರು ಒಂದೂವರೆ ಕೋಟಿಯಷ್ಟು ಪರಿಹಾರ ನೀಡಿದೆ. ಈ ವಿಷಯ ತಿಳಿಯದ ಸ್ಥಳೀಯರು ದೇವಸ್ಥಾನ ತೆರವುಗೊಳಿಸದಂತೆ ಅಡ್ಡಿಪಡಿಸಿದ್ದರಿಂದ ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿತ್ತು. 

ಆದರೂ ಮೆಟ್ರೋ ನಿಗಮದ ಅಧಿಕಾರಿಗಳು ಮತ್ತು ದೇವಾಲಯದ ಆಡಳಿತ ಮಂಡಳಿಯ ಸದಸ್ಯರು ಸ್ಥಳೀಯರಿಗೆ ವಾಸ್ತವ ಪರಿಸ್ಥಿತಿ ಕುರಿತು ಮನವರಿಕೆ ಮಾಡಿಕೊಟ್ಟರು. ಪಿಲ್ಲರ್ ಸಮೀಪದಲ್ಲಿಯೇ ದೇವಾಲಯ ಇರುವುದರಿಂದ ತೆರವು ಅನಿವಾರ್ಯ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟ ಬಳಿಕ ತೆರವು ಕಾರ್ಯ ಮುಂದುವರೆಯಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com