ಹೀರೆಕೆರೂರು ಕ್ಷೇತ್ರವನ್ನು ಸೀಲ್ ಡೌನ್ ಮಾಡಿ: ಸಚಿವ ಬಿ.ಸಿ. ಪಾಟೀಲ್

ಹಿರೇಕೆರೂರು ಕ್ಷೇತ್ರದಲ್ಲಿ ಕೊರೊನಾ ಮಹಾಮಾರಿ ಲಗ್ಗೆಯಿಟ್ಟಿದ್ದು, ಹಿರೇಕೆರೂರನ್ನು ಸೀಲ್ ಡೌನ್ ಮಾಡುವಂತೆ ಕೃಷಿ ಸಚಿವ, ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್ ಮನವಿ ಮಾಡಿದ್ದಾರೆ.
ಬಿಸಿ ಪಾಟೀಲ್
ಬಿಸಿ ಪಾಟೀಲ್
Updated on: 

ಬೆಂಗಳೂರು: ಹಿರೇಕೆರೂರು ಕ್ಷೇತ್ರದಲ್ಲಿ ಕೊರೊನಾ ಮಹಾಮಾರಿ ಲಗ್ಗೆಯಿಟ್ಟಿದ್ದು, ಹಿರೇಕೆರೂರನ್ನು ಸೀಲ್ ಡೌನ್ ಮಾಡುವಂತೆ ಕೃಷಿ ಸಚಿವ, ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್ ಮನವಿ ಮಾಡಿದ್ದಾರೆ.

ಕೊರೊನಾದಿಂದ ಬಚಾವ್ ಆಗಲು ಸಾಮಾಜಿಕ ಅಂತರ ಕಡ್ಡಾಯ ಮಾಸ್ಕ್ ಧರಿಸುವುದರ ಜೊತೆಗೆ ಜನತೆ ಎಚ್ಚರದಿಂದ ಇರಬೇಕು ಎಂದು ತಿಳಿಸಿದ್ದಾರೆ. ಗಿರಿಧಾಮಗಳ ಪ್ರವಾಸಕ್ಕೆ ನಿರ್ಬಂಧ ಕ್ಷೇತ್ರದ ಗ್ರಾಮೀಣ ಭಾಗಗಳಾದ ಗುಡ್ಡದಮಾದಾಪುರ, ಕೋಡ, ಸುತ್ಕೋಟೆ, ಎಮ್ಮಿಗನೂರು ಸೇರಿದಂತೆ ವಿವಿಧ ಭಾಗಗಳಿಗೂ ವ್ಯಾಪಿಸಿದೆ.

ಜನತೆ ಆದಷ್ಟು ಎಚ್ಚೆತ್ತುಕೊಂಡಿರಬೇಕು. ಯಾರಿಗಾದರೂ ಸೋಂಕು ತಗುಲಿದ ಶಂಕೆ ವ್ಯಕ್ತವಾದಲ್ಲಿ ಅಥವಾ ಶೀತ,ಜ್ವರ,ಕೆಮ್ಮಿನಂತಹ ಲಕ್ಷಣ ಕಂಡುಬಂದಲ್ಲಿ ಆಸ್ಪತ್ರೆಗಳಿಗೆ ಭೇಟಿ ನೀಡಿ ತಪಾಸಣೆಗೊಳಪಡಬೇಕು .ಅಗತ್ಯವಿದ್ದಲ್ಲಿ ಮಾತ್ರ ಮನೆಯಿಂದ ಹೊರಬರಬೇಕು ಎಂದು ತಿಳಿಸಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ನಾಯಕರ ನಂತರ ಬಿಜೆಪಿ ಸಚಿವ ಬಿಸಿ ಪಾಟೀಲ್ ಹೀರೆಕೆರೂರು ಕ್ಷೇತ್ರವನ್ನು ಲಾಕ್ ಡೌನ್ ಮಾಡುವಂತೆ ಮನವಿ ಮಾಡಿದ್ದಾರೆ. ಈ ಹಿಂದೆ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಸೇರಿದಂತೆ ಹಲವು ಶಾಸಕರು ಮತ್ತೆ ರಾಜ್ಯವನ್ನು ಲಾಕ್ ಡೌನ್ ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com