ಕೊರೋನಾ ಲಾಕ್ಡೌನ್: ಸಂಕಷ್ಟಕ್ಕೆ ಸಿಲುಕಿದ ಎಪಿಎಂಸಿ ಮಾರುಕಟ್ಟೆ ರೈತರು

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೋನಾ ವೈರಸ್ ಸೋಂಕು ಹೆಚ್ಚಾಗುತ್ತಿರುವುದರಿಂದ ವಾರಗಳ ಕಾಲ ಲಾಕ್ಡೌನ್ ಘೋಷಣೆ ಮಾಡಲಾಗಿದ್ದು, ಅಗತ್ಯ ವಸ್ತುಗಳ ಮಾರಾಟಕ್ಕೆ ಬೆಳಿಗ್ಗೆ 5 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಅವಕಾಶ ಮಾಡಿಕೊಡಲಾಗಿದೆ.
ಎಪಿಎಂಪಿ ಮಾರುಕಟ್ಟೆಯಲ್ಲಿ ಬಂದ್ ಆಗಿರುವ ಅಂಗಡಿಗಳು
ಎಪಿಎಂಪಿ ಮಾರುಕಟ್ಟೆಯಲ್ಲಿ ಬಂದ್ ಆಗಿರುವ ಅಂಗಡಿಗಳು
Updated on

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೋನಾ ವೈರಸ್ ಸೋಂಕು ಹೆಚ್ಚಾಗುತ್ತಿರುವುದರಿಂದ ವಾರಗಳ ಕಾಲ ಲಾಕ್ಡೌನ್ ಘೋಷಣೆ ಮಾಡಲಾಗಿದ್ದು, ಅಗತ್ಯ ವಸ್ತುಗಳ ಮಾರಾಟಕ್ಕೆ ಬೆಳಿಗ್ಗೆ 5 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಅವಕಾಶ ಮಾಡಿಕೊಡಲಾಗಿದೆ. ಇದರಿಂದ ನಗರದ ಯಶವಂತಪುರದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಸಂಕಷ್ಟವನ್ನು ಎದುರಿಸುವಂತಾಗಿದೆ. 

ದೇಶದ ವಿವಿಧ ಭಾಗಗಳಲ್ಲಿ ಬೆಳೆಯುವ ದಿನಸಿ ಹಾಗೂ ತರಕಾರಿಗಳು ದಕ್ಷಿಣ ಭಾರತದ ಅತೀದೊಡ್ಡ ಸಗಟು ಮಾರುಕಟ್ಟೆಯಾಗಿರುವ ಎಪಿಎಂಸಿಯ 1,980 ಅಂಗಡಿಗಳಿಗೆ ಬರುತ್ತವೆ. ಬಳಿಕ ತರಕಾರಿ ಹಾಗೂ ದಿನಸಿ ಸಾಮಾಗ್ರಿಗಳು ಬೆಂಗಳೂರಿನ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿಲ್ಲರೆ ವ್ಯಾಪಾರಿಗಳಿಗೆ ಮಾರಾಟವಾಗುತ್ತವೆ. ಈ ಹಿಂದೆ ಹೇರಲಾಗಿದ್ದ ಲಾಕ್ಡೌನ್'ಗೆ ಈಗಾಗಲೇ ತತ್ತರಿಸಿದ್ದ ಎಪಿಎಂಸಿ ಮಾರುಕಟ್ಟೆ ಮೇಲೆ ಮತ್ತೆ ಹೇರಲಾಗಿರುವ ಲಾಕ್ಡೌನ್ ಮತ್ತಷ್ಟು ಸಂಕಷ್ಟವನ್ನು ತಂದೊಡ್ಡಿದೆ. 

ಲಾಕ್ಡೌನ್ ವೇಳೆ ಸರ್ಕಾರ ನೀಡಿರುವ ಸಮಯ ನಮ್ಮ ವ್ಯವಹಾರಕ್ಕೆ ಸೂಕ್ತವಲ್ಲ. ಇದೀಗ ಕೇವಲ ಶೇ.25ರಷ್ಟು ವ್ಯಾಪಾರ ವಹಿವಾಟುಗಳಷ್ಟೇ ನಡೆಯುತ್ತಿವೆ. ನಮ್ಮ ವ್ಯವಹಾರ ಯಾವಾಗಲೂ ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ಪರಿಣಾಮಕಾರಿಯಾಗಿ ನಡೆಯುತ್ತವೆ. ನಾವು ಯಾವಾಗಲೂ ಅಂಗಡಿ ಮುಂಗಟ್ಟುಗಳನ್ನು ಬೆಳಿಗ್ಗೆ 10.30ರ ಮೇಲೆಯೇ ತೆರೆಯುತ್ತಿದ್ದೇವೆ. ಲಾಕ್ಡೊನ್ ಹಿನ್ನೆಲೆಯಲ್ಲಿ ಈ ವಾರ ಬೆಳಿಗ್ಗೆ 8 ಗಂಟೆಗಳಿಗೆ ತೆರೆಯುತ್ತಿದ್ದೇವೆ. ಆದರೆ, ತರಕಾರಿ ಹಾಗೂ ದಿನಸಿ ವಸ್ತುಗಳ ಲಾರಿಗಳು ಚಾಲಕರು ಬಹಳ ದೂರದಿಂದ ಬರಬೇಕಿದ್ದು, ಬೆಳಿಗ್ಗೆ 5 ಗಂಟೆಗೆ ಬರಲು ಅವರಿಗೆ ಸಾಧ್ಯವಾಗುವುದಿಲ್ಲ ಸಗಟು ಆಹಾರ ಧಾನ್ಯಗಳು ಮತ್ತು ದ್ವಿದಳ ಧಾನ್ಯ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸಂಜಯ್ ಭಾಸಿನ್ ಹೇಳಿದ್ದಾರೆ. 

ಸಾಮಾನ್ಯವಾಗಿ ಲಾರಿ ಚಾಲಕರು ಕೇವಲ ಒಂದು ಅಂಗಡಿಗೆ ಸರಕನ್ನು ಹಾಕುವುದಿಲ್ಲ. ಸಾಕಷ್ಟು ಅಂಗಡಿಗಳಿಗೆ ತೆರಳುತ್ತಾರೆ. ಪ್ರತೀ ಅಂಗಡಿಯಿಂದ ತೆರಳಬೇಕಾದರೂ 1-2 ಗಂಟೆಗಳ ಕಾಲಾವಕಾಶ ಬೇಕಾಗುತ್ತದೆ. ಹೀಗಾಗಿ ಲಾರಿಗಳು ಅನ್'ಲೋಡಿಂಗ್ ಕಾರ್ಯವನ್ನು ಅರ್ಧ ದಿನದಲ್ಲಿ ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಲಾರಿ ಚಾಲಕರು ಶೀಘ್ರಗದಿಯಲ್ಲಿ ಬರಲು ಹೆಚ್ಚೆಚ್ಚು ಹಣವನ್ನು ಕೇಳುತ್ತಿದ್ದಾರೆ. ಇನ್ನು ಸರಕುಗಳನ್ನು ಕೊಳ್ಳುವ ವ್ಯಾಪಾರಿಗಳೂ ಕೂಡ ಇದರಿಂದ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಸರ್ಕಾರ ಅಗತ್ಯ ವಸ್ತುಗಳ ಮಾರಾಟದ ಅವಧಿಯನ್ನು ವಿಸ್ತರಣೆ ಮಾಡಬೇಕು ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com