170 ಬಿಎಂಟಿಸಿ ಸಿಬ್ಬಂದಿಗೆ ಕೊರೋನಾ ಪಾಸಿಟಿವ್: ಇಬ್ಬರ ಸಾವು

ಇದುವರೆಗೂ ಬಿಎಂಟಿಸಿ ಸುಮಾರು 170 ಸಿಬ್ಬಂದಿಗೆ ಕೊರೋನಾ ದೃಢವಾಗಿದ್ದು, ಅದರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಜುಲೈ 2 ರಂದು 58 ವರ್ಷದ ಚಾಲಕ ಕೊರೋನಾದಿಂದ ಸಾವನ್ನಪ್ಪಿದ್ದರು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ಇದುವರೆಗೂ ಬಿಎಂಟಿಸಿ ಸುಮಾರು 170 ಸಿಬ್ಬಂದಿಗೆ ಕೊರೋನಾ ದೃಢವಾಗಿದ್ದು, ಅದರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

ಜುಲೈ 2 ರಂದು 58 ವರ್ಷದ ಚಾಲಕ ಕೊರೋನಾದಿಂದ ಸಾವನ್ನಪ್ಪಿದ್ದರು, ಮತ್ತೊಂದು ಪ್ರಕರಣದಲ್ಲಿ  ಬಿಎಂಟಿಸಿ ಪ್ರಧಾನ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ 51 ವರ್ಷದ ನೌಕರ ಕೂಡ ಸಾವನ್ನಪ್ಪಿದ್ದರು. 

169 ಚಾಲಕರು ಮತ್ತು ನಿರ್ವಾಹಕರು ಮತ್ತು ಇತರ ಸಿಬ್ಬಂದಿಗೆ ಕೊರೋನಾ ದೃಢಪಟ್ಟಿದ್ದು, ಅವರ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಯಾವುದೇ ಪ್ರಯಾಣಿಕನನ್ನು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ, ಮೊಬೈಲ್ ಟವರ್ ಆದರಿಸಿ ಇನ್ನೂ ಅವರ ಶೋಧ ಕಾರ್ಯಾಚರಣೆ ಮುಂದುವರಿದಿದೆ,

ಈ ತಂತ್ರಜ್ಞಾನ ಕೆಲಸ ಮಾಡಬೇಕೆಂದರೇ ವ್ಯಕ್ತಿಯೊಬ್ಬ ತಾನಿದ್ದ ಸ್ಥಳದಲ್ಲಿ ಕನಿಷ್ಠ ಪಕ್ಷ15 ನಿಮಿಷ ಇರಬೇಕಾಗುತ್ತದೆ. ಆದರೆ ಬಸ್ ಸದಾ ಚಲಿಸುವ ಕಾರಣದಿಂದ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಮೊದಲ ಬಿಎಂಟಿಸಿ ಕೊರೋನಾ ಸಿಬ್ಬಂದಿ ಮೇ ತಿಂಗಳಲ್ಲಿ ಕಲಬುರಗಿ ಮತ್ತು ವಿಜಯಪುರಗಳಿಗೆ ಪ್ರಯಾಣಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com