ರಾಜ್ಯದಲ್ಲಿ 1 ಲಕ್ಷ ಗಡಿಯತ್ತ ಕೊರೋನಾ ಸೋಂಕು: ಪ್ರತಿನಿತ್ಯ ಏರುತ್ತಲೇ ಇದೇ ಸೋಂಕಿತರ ಸಂಖ್ಯೆ!

ರಾಜ್ಯದಲ್ಲಿ ಕೊರೋನಾ ವೈರಸ್ ಆರ್ಭಟ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಸತತ ನಾಲ್ಕನೇ ದಿವೂ ಕೂಡ 5 ಸಾವಿರ ಗಡಿ ದಾಟಿದ್ದು, ಭಾನುವಾರ ದಾಖಲೆಯ 5199 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಆರ್ಭಟ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಸತತ ನಾಲ್ಕನೇ ದಿವೂ ಕೂಡ 5 ಸಾವಿರ ಗಡಿ ದಾಟಿದ್ದು, ಭಾನುವಾರ ದಾಖಲೆಯ 5199 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1 ಲಕ್ಷ ಗಡಿಯತ್ತ ಸಾಗಿದ್ದು, ಈ ವರೆಗೂ ಒಟ್ಟು 96,141 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಗುಣಮುಖರಾದವರ ಒಟ್ಟು ಸಂಖ್ಯೆ 35,838 ಆಗಿದೆ. ಕೊರೋನಾ ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ ಅನ್ಯ ಕಾರಣದ ಸಾವು ಹೊರತುಪಡಿಸಿ 1878ಕ್ಕೆ ಏರಿದೆ. 

ಭಾನುವಾರ ಮೃತಪಟ್ಟ 82 ಮಂದಿ ಸೋಂಕಿತರ ಪೈಕಿ ಬೆಂಗಳೂರಿನಲ್ಲಿಯೇ 29 ಅಸುನೀಗಿದ್ದಾರೆ. ಉಳಿದಂತೆ ದಕ್ಷಿಣ ಕನ್ನಡ ಜಿಲ್ಲೆಯ 7, ಧಾರವಾಡ, ಕಲಬುರಗಿ ಮತ್ತು ಬೆಳಗಾವಿ ತಲಾ 6, ಮೈಸೂರು ಮತ್ತು ತುಮಕೂರು ತಲಾ 5, ಹಾಸನ ಮತ್ತು ದಾವಣಗೆರೆ ತಲಾ 3, ಉತ್ತರ ಕನ್ನಡ, ಚಿಕ್ಕಬಳ್ಳಾಪುರ, ಗದಗ ಮತ್ತು ಬಾಗಲಕೋಟೆ ತಲಾ 2 ಮಂಡ್ಯ, ಶಿವಮೊಗ್ಗೆ, ಚಿಕ್ಕಮಗಳೂರು ಮತ್ತು ವಿಜಯಪುರ ಜಿಲ್ಲೆಯಲ್ಲಿ ತಲಾ ಒಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ಇದರಲ್ಲಿ ಏಳು ಪ್ರಕರಣಗಳಲ್ಲಿ ಸೋಂಕು ತಗುಲಿದ ಮೂಲ ಪತ್ತೆಯಾಗಿಲ್ಲ. ಉಳಿದ 75 ಪ್ರಕರಣಗಳು ಸಾರಿ ಮತ್ತು ಐಎಲ್ಐ ಹಿನ್ನಲೆಯಿಂದ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com