ಲಾಕ್'ಡೌನ್ ಸಡಿಲಗೊಂಡ ಬೆನ್ನಲ್ಲೆ ಕೋಳಿ ಮಾಂಸಕ್ಕೆ ಹೆಚ್ಚಿದ ಬೇಡಿಕೆ; ಗಗನಕ್ಕೇರಿದ ಬೆಲೆ

ರಾಜ್ಯದಲ್ಲಿ ಲಾಕ್'ಡೌನ್ ಸಡಿಲಗೊಂಡ ಬೆನ್ನಲ್ಲೇ ಕೋಳಿ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿದ್ದು, ಬೇಡಿಕೆ ಹೆಚ್ಚಳದಿಂದಾಗಿ ಬೆಲೆ ಕೂಡ ದುಬಾರಿಯಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ರಾಜ್ಯದಲ್ಲಿ ಲಾಕ್'ಡೌನ್ ಸಡಿಲಗೊಂಡ ಬೆನ್ನಲ್ಲೇ ಕೋಳಿ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿದ್ದು, ಬೇಡಿಕೆ ಹೆಚ್ಚಳದಿಂದಾಗಿ ಬೆಲೆ ಕೂಡ ದುಬಾರಿಯಾಗಿದೆ. 

ಕೊರೋನಾ ಮತ್ತು ಹಕ್ಕಿ ಜ್ವರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದ ವದಂತಿಗಳನ್ನು ನಂಬಿದ್ದ ಜನರು ಈ ಹಿಂದೆ ಕೋಳಿ ಮಾಂಸ ಖರೀದಿ ಮಾಡಲು ಹಿಂದೇಟು ಹಾಕಿದ್ದರು. ಈ ವೇಳೆ ಕೆಜಿ ಮಾಂಸದ ಬೆಲೆ ರೂ.30ಕ್ಕೆ ಇಳಿಕೆ ಕಂಡಿತ್ತು. ಪರಿಣಾಮ ಕೇವಲ ಒಂದೇ ತಿಂಗಳಲ್ಲಿ ಮಂಡಳಿಗೆ ರೂ.1,000ಕೋಟಿ ನಷ್ಟ ಎದುರಾಗಿತ್ತು. 

ಇದೀಗ ವದಂತಿಗಳಿಂದ ಹೊರಬಂದಿರುವ ಜನರು ಲಾಕ್'ಡೌನ್ ಸಡಿಲಗೊಂಡ ಬೆನ್ನಲ್ಲ ಭಾರೀ ಸಂಖ್ಯೆಯಲ್ಲಿ ಮಾಂಸ ಖರೀದಿ ಮಾಡಲು ಆರಂಭಿಸಿದ್ದಾರೆ. ಇದೀಗ ಕೋಳಿ ಮಾಂಸ ಮಾರಾಟ ಶೇ.10 ರಿಂದ 60ಕ್ಕೆ ಏರಿಕೆಯಾಗಿದೆ. ಅಲ್ಲದೆ, ರೂ.30 ಇದ್ದ ಕೆಜಿ ಮಾಂಸ ಇದೀಗ ರೂ.280ಕ್ಕೆ ಏರಿಕೆಯಾಗಿದೆ. 

ಭೂಪಸಂದ್ರದಲ್ಲಿರುವ ಕೋಳಿ ಮಾಂಸದ ಅಂಗಡಿ ಮಾಲೀಕ ಮೊಯಿನುದ್ದೀನ್ ಅವರು ಮಾತನಾಡಿ, ಪ್ರಸ್ತುತ ನಾವು 1 ಕೆಜಿ ಕೋಳಿ ಮಾಂಸಕ್ಕೆ ರೂ.280 ಪಡೆಯುತ್ತಿದ್ದೇವೆ. ಬದುಕಿರುವ ಕೋಳಿಗೆ ರೂ.150 ಪಡೆಯುತ್ತಿದ್ದೇವೆ. ಅಂಗಡಿಯಲ್ಲಿ ಕೆಲಸ ಮಾಡುವವರಿಗೂ ನಾವು ವೇತನ ನೀಡಬೇಕಿರುವ ಹಿನ್ನೆಲೆಯಲ್ಲಿ ಬೆಲೆಯನ್ನು ಏರಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ. 

ಮತ್ತೊಬ್ಬ ಅಂಗಡಿ ಮಾಲೀಕ ಮಾತನಾಡಿ, ಈ ಹಿಂದೆ ಕೋಳಿ ಮಾಂಸ ಖರೀದಿ ಮಾಡಲು ಜನರು ಹಿಂದೇಟು ಹಾಕಿದ್ದರು. ಖರೀದಿಗೆ ಯಾರೊಬ್ಬರೂ ಬರುತ್ತಿರಲಿಲ್ಲ. ಬಳಿಕ ಕೆಜಿ ಕೋಳಿ ಮಾಂಸ ರೂ.30ಕ್ಕೆ ಇಳಿದಿತ್ತು. ಇದೀಗ ದಿನೇ ದಿನೇ ಖರೀದಿ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಕೆಜಿಗೆ ರೂ.120 ಏರಿಕೆ ಕಂಡಿದೆ ಎಂದು ತಿಳಿಸಿದ್ದಾರೆ. 

ಇದೀಗ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿದೆ. ಬೆಲೆ ಕೂಡ ಏರಿಕೆ ಕಂಡಿದೆ. ನಮ್ಮ ನಷ್ಟವನ್ನು ಇದೀಗ ಪರಿಹಾರಗೊಳ್ಳಲಿದೆ. ಆದರೆ, ಪೂರೈಕೆ ಕಡಿಮೆಯಿದೆ ಎಂದು ಕರ್ನಾಟಕ ಕೋಳಿ ರೈತರು ಮತ್ತು ತಳಿಗಾರರ ಸಂಘದ ಅಧ್ಯಕ್ಷ ಡಾ.ಸುದರ್ಶನ್ ರಾಯ್ ಬಿಯವರು ಹೇಳಿದ್ದಾರೆ. 

ಕೊರೋನಾ ವೈರಸ್ ಮೂಲ ಕೋಳಿ ಆಗಿದೆ ಎಂದು ವದಂತಿಗಳು ಹಬ್ಬಿದಾಗ ಜನರು ಕೋಳಿ ಮಾಂಸ ಖರೀದಿ ಮಾಡಲು ಹಿಂದೇಟು ಹಾಕಿದ್ದರು. ಇದೀಗ ಶೇ.60ರಷ್ಟು ಮಾರಾಟ ಏರಿಕೆ ಕಂಡಿದೆ. ಆದರೂ ರೆಸ್ಟೋರೆಂಟ್ ಗಳು ಬಂದ್ ಆಗಿರುವ ಪರಿಣಾಮ ನಾವಿನ್ನೂ ನಷ್ಟದಲ್ಲಿಯೇ ಇದ್ದೇವೆ. ರೆಸ್ಟೋರೆಂಟ್ ಗಳು ಪುನರಾರಂಭವಾದರೆ ಮಾರಾಟ ಏರಿಕೆ ಕಾಣಲಿದೆ. ಎಂದು ತಿಳಿಸಿದ್ದಾರೆ. 

ಈ ನಡುವೆ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕರು ಮನಸೋಇಚ್ಛೆ ಬೆಲೆ ಏರಿಕೆ ಮಾಡಿ ಮಾರಾಟ ಮಾಡುವುದಕ್ಕೆ ಕಡಿವಾಣ ಹಾಕಲು ಬಿಬಿಎಂಪಿ ಸುತ್ತೋಲೆಯೊಂದರನ್ನು ಹೊರಡಿಸಿದ್ದು, ಬದುಕಿರುವ ಕೋಳಿಗೆ ರೂ.125 ಹಾಗೂ ಕೆಜಿ ಮಾಂಸಕ್ಕೆ 160, ಸ್ಕಿನ್ ಔಟ್ ಚಿಕನ್'ಗೆ ರೂ.180 ಪಡೆಯುವಂತೆ ಸೂಚಿಸಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಇದೇ ವೇಳೆ ಎಚ್ಚರಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com