ಕೊರೋನಾದಿಂದ ಗುಣಮುಖರಾಗಿದ್ದ ಇಮ್ರಾನ್ ಪಾಷಾ ಅದ್ಧೂರಿ ಮೆರವಣಿಗೆಗೆ ಬ್ರೇಕ್, ಕಾರ್ಪೋರೇಟರ್ಗೆ ಖಾಕಿ ವಾರ್ನಿಂಗ್!
ಬೆಂಗಳೂರು: ಮಹಾಮಾರಿ ಕೊರೋನಾ ವೈರಸ್ ನಿಂದ ಗುಣಮುಖರಾಗಿ ಮನೆಗೆ ಹಿಂದಿರುಗುವಾಗ ಕಾರ್ಪೋರೇಟರ್ ಇಮ್ರಾನ್ ಪಾಷಾಗೆ ಆಸ್ಪತ್ರೆಯಿಂದ ಮನೆಯವರೆಗೂ ಅಭಿಮಾನಿಗಳು ಅದ್ಧೂರಿ ಮೆರವಣಿಗೆ, ರೋಡ್ ಶೋ ನಡೆಸಿದ್ದಕ್ಕೆ ಬೆಂಗಳೂರು ಪೊಲೀಸರು ತಡೆದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಇಮ್ರಾನ್ ಪಾಷಾ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅವರ ಅಭಿಮಾನಿಗಳು ರಸ್ತೆಯಲ್ಲಿ ಶಾಲೂ ಹೊದಿಸಿ ಹೂವಿನ ಹಾರ ಹಾಕಿ ಸ್ವಾಗತಿಸುತ್ತಿದ್ದರು. ಇನ್ನು ಇಮ್ರಾನ್ ಪಾಷಾ ಮೇಲೆ ಹೂವನ್ನು ಎಸೆದು ಅಭಿಮಾನ ತೋರಿಸುತ್ತಿದ್ದರು.
ನೂರಾರು ಸಂಖ್ಯೆಯಲ್ಲಿ ಸೇರಿದ್ದ ಇಮ್ರಾನ್ ಪಾಷಾ ಅಭಿಮಾನಿಗಳು ಆತನಿಗೆ ಜೈಕಾರ ಕೂಗುತ್ತಾ ಬರುತ್ತಿದ್ದರು. ಅನುಮತಿ ಇಲ್ಲದೆ ರೋಡ್ ಶೋ ನಡೆಸಿದ್ದಕ್ಕೆ ಪೊಲೀಸರು ಇಮ್ರಾನ್ ಪಾಷಾಗೆ ತರಾಟೆಗೆ ತೆಗೆದುಕೊಂಡು ರೋಡ್ ಶೋಗೆ ಬ್ರೇಕ್ ಹಾಕಿದ್ದಾರೆ.
ಇದೇ ವೇಳೆ ಅವರ ಹಿಂದೆ 150ಕ್ಕೂ ಹೆಚ್ಚು ಬೈಕ್ ಗಳಲ್ಲಿ ತೆರಳುತ್ತಿದ್ದ ಅಭಿಮಾನಿಗಳನ್ನು ರಸ್ತೆಯಲ್ಲೇ ತಡೆದ ಜೆಜೆ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸತೀಶ್ ಯಾರಾದರೂ ಒಂದು ಹೆಜ್ಜೆ ಮುಂದಕ್ಕೆ ಇಟ್ರೆ ಪರಿಮಾಮ ಸರಿ ಇರಲ್ಲ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.
ಕೊರೋನಾ ವೈರಸ್ ಗೆ ತುತ್ತಾಗಿದ್ದ ಇಮ್ರಾನ್ ಪಾಷಾ ಅವರನ್ನು 7 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ