ಆರ್ಥಿಕ ಬಿಕ್ಕಟ್ಟಿಗೆ ಸಹಕಾರಿಯಾಗಲಿದೆ ತಂಬಾಕು ಉತ್ಪನ್ನಗಳ ಮೇಲಿನ ಕೋವಿಡ್ ಸೆಸ್!

ಭಾರತ ಸರಕಾರವು ಘೋಷಿಸಿರುವ ವಿಶೇಷ ಆರ್ಥಿಕ ಪ್ಯಾಕೇಜ್‍ಗೆ ಪೂರಕವಾಗಿ, ತಂಬಾಕು ಉತ್ಪನ್ನಗಳ ಮೇಲೆ ಕೋವಿಡ್ ಸೆಸ್ ವಿಧಿಸುವಂತೆ ಸಾರ್ವಜನಿಕ ಆರೋಗ್ಯ ತಜ್ಞರು, ವೈದ್ಯರು ಹಾಗು ಅರ್ಥಶಾಸ್ತ್ರಜ್ಞರ ಸಹಕಾರದೊಂದಿಗೆ ಜಿ.ಎಸ್.ಟಿ. ಕೌನ್ಸಿಲ್‍ಗೆ ಕೋರಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಭಾರತ ಸರಕಾರವು ಘೋಷಿಸಿರುವ ವಿಶೇಷ ಆರ್ಥಿಕ ಪ್ಯಾಕೇಜ್‍ಗೆ ಪೂರಕವಾಗಿ, ತಂಬಾಕು ಉತ್ಪನ್ನಗಳ ಮೇಲೆ ಕೋವಿಡ್ ಸೆಸ್ ವಿಧಿಸುವಂತೆ ಸಾರ್ವಜನಿಕ ಆರೋಗ್ಯ ತಜ್ಞರು, ವೈದ್ಯರು ಹಾಗು ಅರ್ಥಶಾಸ್ತ್ರಜ್ಞರ ಸಹಕಾರದೊಂದಿಗೆ ಜಿ.ಎಸ್.ಟಿ. ಕೌನ್ಸಿಲ್‍ಗೆ ಕೋರಿದ್ದಾರೆ. 

ಸಿಗರೇಟ್, ಬೀಡಿ ಹಾಗು ಇತರೆ ತಂಬಾಕು ಉತ್ಪನ್ನಗಳ ಮೇಲೆ ಕೋವಿಡ್-19 ಸೆಸ್ ವಿಧಿಸುವುದರಿಂದ ಸರಕಾರಕ್ಕೆ ರೂ. 49,740 ಕೋಟಿ ತೆರಿಗೆ ಸಂಗ್ರಹವಾಗುತ್ತದೆ, ಇದು ವಿಶೇಷ ಆರ್ಥಿಕ ಪ್ಯಾಕೇಜ್‍ನ ಶೇ. 29 ರಷ್ಟಿದೆ. ಕೋವಿಡ್ ಸೆಸ್ ತೆರಿಗೆ ವಿಧಿಸುವುದರಿಂದ ಕೇವಲ ತೆರಿಗೆ ಸಂಗ್ರಹ ಮಾತ್ರವಲ್ಲದೆ, ಉತ್ಪನ್ನಗಳ ಬೆಲೆ ಹಚ್ಚಾಗುವುದರಿಂದ ತಂಬಾಕು ಉತ್ಪನ್ನಗಳು ಎಲ್ಲರಿಗೂ ಕೈಗೆಟುಕದಂತಾಗದೆ ತಂಬಾಕು ತ್ಯಜಿಸುವುದಕ್ಕೆ ಮಾರ್ಗವಾಗುತ್ತದೆ. ಇದರಿಂದ ಕೊರೋನಾ ವೈರಾಣು ಹರಡುವುದನ್ನು ತಡೆಗಟ್ಟಬಹುದಾಗಿದೆ. ಅಧ್ಯಯನಗಳ ಪ್ರಕಾರ, ಧೂಮಪಾನ & ತಂಬಾಕು ಬಳಕೆಯು ಶ್ವಾಶಕೋಶದ ಸ್ವಾಸ್ಥ್ಯವನ್ನು ಹಾಗು ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡಿ ಹಾಗು ಕೋವಿಡ್-19 ಸೊಂಕಿನ ಭೀತಿಯನ್ನು ಹೆಚ್ಚು ಮಾಡುತ್ತದೆ. 

ಕೊರೋನಾ ಸಮಯವು ಭಾರತ ದೇಶ ಕಂಡಿರುವ ಅತ್ಯಂತ ದೊಡ್ಡ ಆರ್ಥಿಕ ಹೊಡೆತವಾಗಿದೆ. ಸರಕಾರಕ್ಕೆ ಇದರಿಂದ ಆದ ನಷ್ಟವನ್ನು ಭರಿಸಲು ತುಂಬ ಸಮಯ ಹಾಗು ಹಣಕಾಸಿನ ಅಗತ್ಯತೆ ಇದೆ. ಭಾರತ ಸರ್ಕಾರವು ಆರ್ಥಿಕ ಮುಗ್ಗಟ್ಟಿನಿಂದ ಹೊರಬರಲು ಹಾಗು ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡಲು ಹಲವಾರು ವಿಶೇಷ ಪ್ಯಾಕೇಜ್‍ಗಳನ್ನು ಘೋಷಣೆ ಮಾಡಿದೆ (ರೂ. 20ಲಕ್ಷ ಕೋಟಿ ಪ್ಯಾಕೇಜ್ ಸೇರಿ). ವಿವಿಧ ಕಾರ್ಯಕ್ರಮಗಳ ಜೊತೆಗೆ ರೂ. 1.7 ಲಕ್ಷ ಕೋಟಿಯ ಆರ್ಥಿಕ ಪ್ಯಾಕೇಜನ್ನು ಮಾರ್ಚ್ ತಿಂಗಳಿನಲ್ಲಿ ಘೊಷಣೆ ಮಾಡಿದ್ದು, ಲಾಕ್‍ಡೌನ್ ಸಮಯದಲ್ಲಿ ತತ್ತರಿಸಿ ಹೋಗಿದ್ದ ಜನರಿಗೆ, ಆಹಾರ ಭದ್ರತೆ ಹಾಗು ನೇರ ಲಾಭ ವರ್ಗಾವಣೆ ಮೂಲಕ ಲಾಭವಾಗಲಿದೆ. 

“ಬೀಡಿ ಸಹಿತ ಎಲ್ಲಾ ತಂಬಾಕು ಉತ್ಪನ್ನಗಳ ಮೇಲೆ ಸೆಸ್ ವಿಧಿಸಿವುದರಿಂದ ಕೋವಿಡ್-19 ವಿರುದ್ದ ಹೋರಾಡಲು ಹಾಗು ಅದರಿಂದಾಗಿರುವ ಆರ್ಥಿಕ ಪರಿಸ್ಥಿತಿಯಿಂದ ಹೊರಬರಲು ಸಹಕಾರಿಯಾಗಿದ್ದು, ಸರಕಾರಕ್ಕೆ ಸಕರಾತ್ಮಕವಾಗಿ ಪರಿಣಮಿಸಲಿದೆ, ತಂಬಾಕು ಬಳಕೆಯನ್ನು ತಗ್ಗಿಸಲು ತೆರಿಗೆಯು ಒಂದು ಉತ್ತಮ ಅಸ್ತ್ರವಾಗಿದೆ. ಇತರೆ ಖಾಯಿಲೆಗಳಿಂದ ಬಳಲುತ್ತಿರುವವರಿಗೆ ಕೋವಿಡ್-19 ಸೋಂಕು ವ್ಯತಿರಿಕ್ತ ಪರಿಣಾಮ ಬೀರುವುದರಿಂದ ಈ ಕ್ರಮವು ಕೊರೋನಾ ಸೋಂಕನ್ನು ತಡೆಗಟ್ಟುವಲ್ಲಿ ಸಫಲವಾಗಲಿದೆ,” ಎಂದು ಪ್ರಸಿದ್ದ ಕ್ಯಾನ್ಸರ್ ತಜ್ಞ ಡಾ. ವಿಶಾಲ್ ರಾವ್ ಅಭಿಪ್ರಯಿಸಿದ್ದಾರೆ. 

ತೆರಿಗೆಯಿಂದ ಸರಕಾರದ ಆದಾಯವನ್ನು ದುಪ್ಪಟ್ಟು ಮಾಡುವುದರ ಜೊತೆಗೆ ತಂಬಾಕು ಸಂಬಂಧಿ ಖಾಯಿಲೆಗಳಿಂದ ಆಗುವ ಸಾವುಗಳನ್ನು ಅರ್ಧಕ್ಕೆ ತಗ್ಗಿಸಬಹುದು”, ಎಂದೂ ಅವರು ತಿಳಿಸಿದ್ದಾರೆ. 

ಅರ್ಥ ಶಾಸ್ತ್ರಜ್ಞರು ಹಾಗು ಆರೋಗ್ಯ ನೀತಿ ವಿಶ್ಲೇಷಕರಾದ ಡಾ. ರಿಜು ಜಾನ್, ರವರು, “ಕೋವಿಡ್-19 ನಿಂದಾಗಿ ಸೃಷ್ಠಿಯಗಿರುವ ದೇಶದ ಆರ್ಥಿಕ ಪರಿಸ್ಥಿತಿಯನ್ನು ಮೇಲೆತ್ತಲು ಅಪಾರವಾಗಿ ಧನದ ಹರಿವಾಗಬೇಕಾಗಿದೆ. ಸಾರ್ವಜನಿಕರ ಮೇಲೆ ಹಚ್ಚಿನ ತೆರಿಗೆಯನ್ನು ಹೇರುವುದು ಸೂಕ್ತವಲ್ಲವಾದರೂ, ತಂಬಾಕು ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಿಸುವುದು ಸರ್ಕಾರದ ಹಾಗು ಸಾರ್ವಜನಿಕ ಆರೋಗ್ಯ ಹಿತದೃಷ್ಠಿಯಿಂದ ಅವಶ್ಯಕವಾಗಿದೆ. ಇದರಿಂದ ತಂಬಾಕು ಬಳಕೆಯು ಕಡಿಮೆಯಾಗುವುದರೊಂದಿಗೆ ಸರ್ಕಾರದ ಬೊಕ್ಕಸಕ್ಕೆ ದುಡ್ಡಿನ ಹರಿವಾಗುತ್ತದೆ. ಒಂದು ಬೀಡಿಯ ಮೇಲೆ ರೂ. 1, ಸಿಗರೇಟ್ ಮೇಲೆ ರೂ. 5 ಹಾಗು ಜಗಿಯುವ ತಂಬಾಕು ಉತ್ಪನ್ನಗಳ ಮೇಲೆ ಅಧಿಕ ತೆರಿಗೆ ಹಾಗುವುದರಿಂದ ರೂ. 50,000 ಕೋಟಿ ತೆರಿಗೆ ಸಂಗ್ರಹವಾಗುವುದು”, ಎಂದು ತಿಳಿಸಿದ್ದಾರೆ. 

ತೆರಿಗೆ ಹೆಚ್ಚಳದಿಂದ, ತಂಬಾಕು ಉತ್ಪನ್ನಗಳ ಖರೀದಿ ಸಾಮಥ್ರ್ಯ ಹಾಗೂ ತಂಬಾಕು ಸೇವನೆ ಕಡಿತಗೊಳ್ಳುವುದರೊಂದಿಗೆ ತಂಬಾಕು ಸೇವನೆಯಿಂದಾಗುವ ಅರೋಗ್ಯ ಸಮಸ್ಯೆ ಹಾಗೂ ಜೀವ ಕಂಟಕವಾದ ತೊಂದರೆಗಳು ನಿಯಂತ್ರಿಸಬಹುದು. ಚೈನಾ ಹಾಗೂ ಇಟಲಿಯ ಪ್ರಾಥಮಿಕ ಮಾಹಿತಿಯ ಪ್ರಕಾರ ತಂಬಾಕು ಸೇವನೆ ಮಾಡುವ ಹಾಗು ಇತರೆ ಆರೋಗ್ಯ ಸಮಸ್ಯೆ ಇರವ ವ್ಯಕ್ತಿಗಳಲ್ಲಿ ಕೋವಿಡ್‍ನಿಂದ ತೀವರ ಆರೋಗ್ಯ ಸಮಸ್ಯೆಯಾಗುವ ಸಾಧ್ಯತೆ ಹಚ್ಚಿದೆ ಎಂದು ಚೈನಾ ಹಾಗು ಇಟಲಿಯ ಪ್ರಾಥಮಿಕ ಮಾಹಿತಿಯ ಪ್ರಕಾರ ತಿಳಿದುಬಂದಿದೆ. 

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ತಂಬಾಕು ಉತ್ಪನ್ನದ ಮೌಲ್ಯದ ಶೇ. 75 ರಷ್ಟು ತೆರಿಗೆ ವಿಧಿಸಬೇಕಾಗಿದೆ. ಆದರೆ ಭಾರತದ ಈಗಿನ ತೆರಿಗೆಯು, ಸಿಗರೇಟ್‍ಗಳ ಮೇಲೆ ಶೇ. 49.50 ಹಾಗು ಜಗಿಯುವ ತಂಬಾಕು ಉತ್ಪನ್ನಗಳ ಮೇಲೆ ಶೇ. 63.7 ಇದೆ, ಮತ್ತು ಇದು ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸ್ಸಿಗೂ ಕಡಿಮೆ ಇದೆ. ಬೀಡಿಯು, ಸಿಗರೇಟು ಹಾಗು ಜಗಿಯುವ ತಂಬಾಕಿಗಿಂತ ಹೆಚ್ಚು ಅಪಾಯಕಾರಿಯಾಗಿದೆ, ಪ್ರತಿ ವರ್ಷ ರೂ. 80,550 ಕೋಟಿಯಷ್ಟು ಹಣವನ್ನು ಬೀಡಿಗೆ ಸಂಬಂಧಿಸಿದ ಖಾಯಿಲೆಗಳ ಚಿಕಿತ್ಸೆಗಾಗಿ ವ್ಯಯ ಮಾಡಲಾಗುತ್ತದೆ ಇದಾಗಿಯೂ ಇದರ ಮೇಲಿನ ತೆರಿಗೆ ತೀರಾ ಕಡಿಮೆ ಅಂದರೆ ಶೆ. 22 ರಷ್ಟಿದೆ. ಜಿ.ಎಸ್.ಟಿ. ತೆರಿಗೆ ಪದ್ದತಿ ಬಂದಮೇಲೆ ತಂಬಾಕು ಉತ್ಪನ್ನಗಳ ಬೆಲೆ ಕೈಗುಟುಕುವಂತಾಗಿರುವುದು ವಿಶಾದಕರ ಸಂಗತಿಯಾಗಿದೆ. 

ಭಾರತವು ಪ್ರಪಂಚದಲ್ಲಿಯೇ ತಂಬಾಕು ಬಳಕೆಯಲ್ಲಿ ಎರಡನೆಯ ಸ್ಥಾನದಲ್ಲಿದೆ. ದೇಶದಲ್ಲಿ ಶೇ. 28.6 ರಷ್ಟು ಮಂದಿ ಅಂದರೆ 26.8 ಕೋಟಿ ಮಂದಿ ಒಂದಲ್ಲಾ ಒಂದು ರೀತಿಯಲ್ಲಿ ತಂಬಾಕು ಬಳಕೆ ಮಾಡುತ್ತಾರೆ, ಮತ್ತು ಇವರಲ್ಲಿ 12 ಲಕ್ಷ ಜನರು ಆಯಸ್ಸಿಗೂ ಮುನ್ನವೇ ಸಾವನ್ನಪ್ಪುತ್ತಿದ್ದಾರೆ. ತಂಬಾಕು ಸಂಬಂಧಿ ಖಾಯಿಲೆಗಳ ಚಿಕಿತ್ಸೆಗೆ, ಸರಕಾರವು ರೂ.1,04,500 ಕೋಟಿಯನ್ನು ಪ್ರತಿ ವರ್ಷ ವ್ಯಯ ಮಾಡುತ್ತಿದೆ. ಇದು ದೇಶದ ಜಿಡಿಪಿಯ ಶೇ.1.16 ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com