ಕೊರೋನಾ ಎಫೆಕ್ಟ್: ತವರಿನಲ್ಲೇ ಉಳಿದ ಮುಂಬೈ ಉಡುಪಿ ಹೋಟೆಲ್'ನ ಸಾವಿರಾರು ಸಿಬ್ಬಂದಿ, ಕೆಲಸಕ್ಕಾಗಿ ಹುಡುಕಾಟ

ಮುಂಬೈನ ಪ್ರತಿಷ್ಟಿತ ಉಡುಪಿ ಹೋಟೆಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಾವಿರಾರು ನೌಕರರು ಕೊರೋನಾ ವೈರಸ್ ಪರಿಣಾಮ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದು, ಇದೀಗ ತಮ್ಮ ತವರು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿಯೇ ಉಳಿದಿರುವ ಸ್ಥಳೀಯ ನೌಕರಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಂಗಳೂರು; ಮುಂಬೈನ ಪ್ರತಿಷ್ಟಿತ ಉಡುಪಿ ಹೋಟೆಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಾವಿರಾರು ನೌಕರರು ಕೊರೋನಾ ವೈರಸ್ ಪರಿಣಾಮ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದು, ಇದೀಗ ತಮ್ಮ ತವರು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿಯೇ ಉಳಿದಿರುವ ಸ್ಥಳೀಯ ನೌಕರಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ. 

ಮಹಾರಾಷ್ಟ್ರದ ಮುಂಬೈನಲ್ಲಿ ಕೊರೋನಾ ತನ್ನ ರೌದ್ರನರ್ತನವನ್ನು ಮುಂದುವರೆಸಿದ್ದು, ವಾಣಿಜ್ಯ ನಗರಿಯಲ್ಲಿ ಯಾವಾಗ ರೆಸ್ಟೋರೆಂಟ್ ಹಾಗೂ ಹೋಟೆಲ್ ಗಳು ಆರಂಭವಾಗುತ್ತವೆ ಎಂಬುದು ತಿಳಿಯದಾಗಿದೆ. ಮಕ್ಕಳ ಶಾಲೆ, ಮನೆಯ ನಿರ್ವಹಣೆ ಮಾಡಬೇಕಿದ್ದು, ಹೀಗಾಗಿ ತವರಿನಲ್ಲಿಯೇ ಉದ್ಯೋಗಕ್ಕಾಗಿ ಹುಡುಕಾಟ ಆರಂಭಿಸಿದ್ದೇವೆಂದು ಮುಂಬೈನ ಉಡುಪಿ ಹೋಟೆಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ಹೇಳಿದ್ದಾರೆ. 

ಲಾಕ್'ಡೌನ್ ಸಡಿಲಗೊಂಡ ಬಳಿಕ ಕೆಲ ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳ ತೆರೆಯಲು ಅನುಮತಿ ನೀಡಲಾಗಿದೆ. ಆದರೆ, ಬೆರಳೆಣಿಕೆಯಷ್ಟು ಸಿಬ್ಬಂದಿಗಳಿಗೆ ಮಾತ್ರ ಅವಕಾಶ ನೀಡಿದೆ. ಎಲ್ಲರಿಗೂ ಕೆಲಸ ಮಾಡಲು ಅವಕಾಶ ನೀಡಲಾಗಿಲ್ಲ ಎಂದು ತಿಳಿಸಿದ್ದಾರೆ. 

ಮುಂಬೈನ ಉಡುಪಿ ಹೋಟೆಲ್ ನಲ್ಲಿ ರಾಜ್ಯ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಮೂಲದ ಸಾವಿರಾರು ಜನರು ಕಾರ್ಯನಿರ್ವಹಿಸುತ್ತಿದ್ದು, ಇದೀಗ 15,000 ಜನರು ಜಿಲ್ಲೆಗಳಿಗೆ ವಾಪಸ್ಸಾಗಿದ್ದಾರೆ. ಇದೀಗ ಮತ್ತೆ ಮುಂಬೈಗೆ ತೆರಳುವ ಬದಲು ತವರಿನಲ್ಲಿಯೇ ಕೆಲಸ ಹುಡುಕಿಕೊಂಡು ಜೀವನ ನಡೆಸಲು ಹಲವರು ನಿರ್ಧರಿಸಿದ್ದಾರೆ. 

ಮುಂಬೈಗೆ ತೆರಳುವುದು ಅಲ್ಲಿಯೇ ಹೋಟೆಲ್ ತೆರೆಯುವುದು, ಅಲ್ಲಿನ ಹೋಟೆಲ್ ಗಳಲ್ಲಿ ಕೆಲಸ ಮಾಡುವ ಪ್ರವೃತ್ತಿ 1940ರಿಂದ ಆರಂಭವಾಗಿತ್ತು. ಮುಂಬೈನ ಸಾಕಷ್ಟು ಜನರು ಉಡುಪಿಯ ಆಹಾರ ಪದ್ಧತಿಯನ್ನು ಇಷ್ಟಪಟ್ಟಿದ್ದು, ಮೆಚ್ಚುಗೆಗಳನ್ನೂ ಕೂಡ ಗಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com