ನಿನ್ನೆ ಒಂದೇ ದಿನ 197 ಹೊಸ ಪಾಸಿಟಿವ್ ಪ್ರಕರಣ, 2 ಸಾವು: ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1279ಕ್ಕೆ ಏರಿಕೆ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಕೊರೋನಾ ಸೋಂಕಿತರ ಸಂಖ್ಯೆ 1279ಕ್ಕೆ ಏರಿಕೆಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಕೊರೋನಾ ಸೋಂಕಿತರ ಸಂಖ್ಯೆ 1279ಕ್ಕೆ ಏರಿಕೆಯಾಗಿದೆ.

ಈ ಬಗ್ಗೆ ಬಿಬಿಎಂಪಿ ಕಮಿಷನರ್ ಅನಿಲ್ ಕುಮಾರ್ ಅವರು ಟ್ವೀಟ್ ಮಾಡಿದ್ದು, ಕಳೆದ 24 ಗಂಟೆಗಳಲ್ಲಿ ನಗರದಲ್ಲಿ 197 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಮೂಲಕ ನಗರದಲ್ಲಿನ ಒಟ್ಟಾರೆ ಸೋಂಕಿತರ ಸಂಖ್ಯೆ 1279ಕ್ಕೆ ಏರಿಕೆಯಾಗಿದೆ. ಅಂತೆಯೇ ನಗರದಲ್ಲಿ ಸೋಂಕಿನಿಂದ ಗುಣಮುಖರಾದ ಒಟ್ಟಾರೆ ಸೋಂಕಿತರ ಸಂಖ್ಯೆ 378ರಷ್ಟಿದೆ. ನಿನ್ನೆ ಬೆಂಗಳೂರಿನಲ್ಲಿ ಒಟ್ಟು ಇಬ್ಬರು ಕೊರೋನಾ ಸೋಂಕಿತರು ಸಾವನ್ನಪ್ಪಿದ್ದು, ಆ ಮೂಲಕ ನಗರದಲ್ಲಿ ಒಟ್ಟಾರೆ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 64ಕ್ಕೆ ಏರಿಕೆಯಾಗಿದೆ.

ಈ ಪೈಕಿ 68 ಸಕ್ರಿಯ ಕೇಸ್​ಗಳು, 85 ಜನ ಡಿಸ್ಚಾರ್ಜ್ ಆಗಿದ್ದಾರೆ ಹಾಗೂ 15 ಜನ ಸೋಂಕಿಗೆ ಬಲಿಯಾಗಿದ್ದಾರೆ. ಬೆಂಗಳೂರು ಪಶ್ಚಿಮದಲ್ಲಿ ಒಟ್ಟು 144 ಕೊರೋನಾ ಕೇಸ್​ಗಳು ಪತ್ತೆಯಾಗಿವೆ. ಈ ಪೈಕಿ 39 ಸಕ್ರಿಯ ಕೇಸ್, 94 ಜನ ಡಿಸ್ಚಾರ್ಜ್ ಅಗಿದ್ದು, ಇಲ್ಲಿ ಒಟ್ಟು 11 ಸೋಂಕಿತರು ಸಾವನ್ನಪ್ಪಿದ್ದಾರೆ. 

ಬೆಂಗಳೂರು ದಕ್ಷಿಣದಲ್ಲಿ ಒಟ್ಟು 136 ಕೊರೋನಾ ಪ್ರಕರಣಗಳಲ್ಲಿ 96 ಸಕ್ರಿಯ ಕೇಸ್ ಗಳಿದ್ದು, 28 ಜನ ಡಿಸ್ಚಾರ್ಜ್ ಆಗಿದ್ದು, 8 ಜನ ಮೃತಪಟ್ಟಿದ್ದಾರೆ.  ರಾಜರಾಜೇಶ್ವರಿ ನಗರ ವಲಯದಲ್ಲಿ ಒಟ್ಟು 23 ಕೊರೋನಾ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 12 ಸಕ್ರಿಯ ಪ್ರಕರಣಗಳು ಮತ್ತು 5 ಜನ ಸೋಂಕಿತರು ಡಿಸ್ಚಾರ್ಜ್ ಆಗಿದ್ದಾರೆ. ಇಲ್ಲಿ ಕೂಡ ಇಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ.

ಬೊಮ್ಮನಹಳ್ಳಿ ವಲಯದಲ್ಲಿ ಒಟ್ಟು 137 ಕೊರೋನಾ ಕೇಸ್​ಗಳಿದ್ದು, ಅದರಲ್ಲಿ 57 ಸಕ್ರಿಯ ಕೇಸ್ ಗಳು, 74 ಸೋಂಕಿತರು ಡಿಸ್ಚಾರ್ಜ್, 6 ಜನ ಸೋಂಕಿತರು ಸಾವನ್ನಪ್ಪಿದ್ದಾರೆ.  ಮಹದೇವಪುರ ವಲಯದಲ್ಲಿ ಒಟ್ಟು 54 ಕೊರೋನಾ ಪ್ರಕರಣಗಳಿವೆ. ಈ ಪೈಕಿ 27 ಸಕ್ರಿಯ ಕೇಸ್ ಗಳಿದ್ದು, 27 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಯಲಹಂಕ ವಲಯದಲ್ಲಿ ಒಟ್ಟು 21 ಕೊರೋನಾ ಕೇಸ್​ಗಳಿದ್ದು, ಇದರಲ್ಲಿ 15 ಸಕ್ರಿಯ ಪ್ರಕರಣ, 5 ಜನ ಡಿಸ್ಚಾರ್ಜ್, ಓರ್ವ ಸಾವನ್ನಪ್ಪಿದ್ದಾರೆ.

ದಾಸರಹಳ್ಳಿ ವಲಯದಲ್ಲಿ ಒಟ್ಟು 10 ಕೊರೋನಾ ಪ್ರಕರಣಗಳಿದ್ದು, 9 ಸಕ್ರಿಯ ಪ್ರಕರಣ, ಓರ್ವ ಗುಣಮುಖನಾಗಿ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರು ಹೊರವಲಯದಲ್ಲಿ 42 ಕೊರೋನಾ ಪ್ರಕರಣಗಳಲ್ಲಿ 30 ಸಕ್ರಿಯ ಪ್ರಕರಣ, 6 ಜನ ಡಿಸ್ಚಾರ್ಜ್, 6 ಜನ ಸಾವನ್ನಪ್ಪಿದ್ದಾರೆ.  

ಉಳಿದಂತೆ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಗೆ ಒಳಪಡದೆ ಇರುವ ಏರಿಯಾಗಳಲ್ಲಿ ಒಟ್ಟು 16 ಕೊರೋನಾ ಕೇಸ್ ಗಳು ದಾಖಲಾಗಿದ್ದು. ಈ ಪೈಕಿ 9 ಸಕ್ರಿಯ ಪ್ರಕರಣಗಳಿವೆ. 7 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com