ರಾಜ್ಯ

ಹೆಚ್ಚುತ್ತಿರುವ ಕೊರೋನಾ ಆತಂಕದ ನಡುವೆ ಗುಡ್ ನ್ಯೂಸ್: ಆಸ್ಪತ್ರೆಯಿಂದ 519 ಮಂದಿ ಡಿಸ್ಚಾರ್ಜ್

ಹೆಚ್ಚುತ್ತಿರುವ ಕೊರೋನಾ ಆತಂಕದ ನಡುವೆ ಗುಡ್ ನ್ಯೂಸ್: ಆಸ್ಪತ್ರೆಯಿಂದ 519 ಮಂದಿ ಡಿಸ್ಚಾರ್ಜ್
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ರಾಜ್ಯದಲ್ಲಿ ಗುರುವಾರ ಒಂದೇ ದಿನ 442 ಮಂದಿಗೆ ಕರೋನಾ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 10,560ಕ್ಕೆ ಏರಿಕೆಯಾಗಿದೆ. ಜೊತೆಗೆ ಒಂದೇ ದಿನ ಸೋಂಕಿನಿಂದ ಗುಣಮುಖರಾದ ದಾಖಲೆಯ 519 ಜನರನ್ನು ಬಿಡುಗಡೆ ಮಾಡಲಾಗಿದೆ.

ಈ ವರೆಗಿನ ಅಂಕಿ ಅಂಶಗಳ  ಪ್ರಕಾರ ದಿನವೊಂದರಲ್ಲಿ ಇಷ್ಟುದೊಡ್ಡ ಸಂಖ್ಯೆಯಲ್ಲಿ ಗುಣಮುಖರಾದವರು ಬಿಡುಗಡೆಯಾಗಿದ್ದು ಇದೇ ಮೊದಲು. ಧಾರವಾಡ, ಯಾದಗಿರಿ, ದಕ್ಷಿಣ ಕನ್ನಡ, ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗುಣಮುಖರಾಗಿದ್ದಾರೆ.

ಇದರ ನಡುವೆ ಸೋಂಕಿತರ ಸರಣಿ ಸಾವಿನ ಸರಣಿ ಗುರುವಾರವೂ ಮುಂದುವರೆದಿದ್ದು, ಬೆಂಗಳೂರು ಗ್ರಾಮಾಂತರದ ಮೂವರು ಸೇರಿ ಒಟ್ಟು 6 ಮಂದಿ ಮೃತಪಟ್ಟಿದ್ದಾರೆ. ಇದರಿಂದ ಮೃತರಾದ ಒಟ್ಟು ಸೋಂಕಿತರ ಸಂಖ್ಯೆ 170ಕ್ಕೆ ಏರಿಕೆಯಾಗಿದೆ.

ಗುರುವಾರದ ಪ್ರಕರಣಗಳಲ್ಲಿ ಗುಜರಾತ್‌, ಮಹಾರಾಷ್ಟ್ರ ಸೇರಿದಂತೆ ಅಂತಾರಾಜ್ಯ ಪ್ರಯಾಣದ ಹಿನ್ನೆಲೆಯ 81 ಮಂದಿಗೆ, ಸೌದಿ ಅರೇಬಿಯಾ ಸೇರಿ ಅಂತಾರಾಷ್ಟ್ರೀಯ ಪ್ರಯಾಣದ ಹಿನ್ನೆಲೆಯ 23 ಮಂದಿಗೆ ಸೋಂಕು ದೃಢಪಟ್ಟಿದೆ. ಉಳಿದ 338 ಜನರಿಗೆ ಸ್ಥಳೀಯವಾಗಿ ಸೋಂಕು ತಗುಲಿದೆ. ಈ ಪೈಕಿ 86 ಐಎಲ್‌ಐ, 20 ಸಾರಿ ಮತ್ತು ಇತರೆ ಪ್ರಕರಣಗಳು ಕಂಟೈನ್‌ಮೆಂಟ್‌ ಜೋನ್‌, ಸೋಂಕಿತರ ಸಂಪರ್ಕದಿಂದ ದೃಢಪಟ್ಟಿವೆ.

ರಾಜ್ಯದಲ್ಲಿ 11 ಮೆಡಿಕಲ್ ಕಾಲೇಜುಗಳು ಕೋವಿಡ್ ಆಸ್ಪತ್ರೆಗಳಾಗಿ ಕಾರ್ಯ ನಿರ್ವಹಿಸುತ್ತಿವೆ, ಅವುಗಳಲ್ಲಿ 2,200 ಬೆಡ್ ಗಳಿವೆ, ಇದರಲ್ಲಿ 281 ಐಸಿಯು, 120 ವೆಂಟಿಲೇಟರ್ ಬೆಡ್ ಗಳಿವೆ, ಪ್ರತಿ ಮೆಡಿಕಲ್ ಕಾಲೇಜಿನಲ್ಲೂ ಟೆಸ್ಟಿಂಗ್ ಲ್ಯಾಬ್ ಮತ್ತು ಎರಡು ಫೀವರ್ ಕ್ಲಿನಿಕ್ ಸೌಲಭ್ಯ ಇರಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ ಸುಧಾಕರ್ ಟ್ವೀಟ್ ಮಾಡಿದ್ದಾರೆ.

ಬೆಂಗಳೂರು ಗ್ರಾಮಾಂತರದಲ್ಲಿ ಜೂ.30ರಂದು ಮೃತಪಟ್ಟಿದ್ದ 80 ವರ್ಷದ ವೃದ್ಧೆ, ಜೂ.20ರಂದು ಮೃತಪಟ್ಟಿದ್ದ 60 ವರ್ಷದ ಮತ್ತೊಬ್ಬ ವೃದ್ಧೆ ಹಾಗೂ ಜೂ.21ರಂದು ಮೃತಪಟ್ಟಿದ್ದ 38 ವರ್ಷದ ಪುರುಷನಿಗೆ ಮರಣಾನಂತರ ಬಂದ ವರದಿಯಲ್ಲಿ ಸೋಂಕು ದೃಢಪಟ್ಟಿದೆ. ಇನ್ನು, ಜೂನ್‌ 23 ರಂದು ಕಲಬುರಗಿಯ ಮೃತಪಟ್ಟಿದ್ದ 61 ವರ್ಷದ ವೃದ್ಧ, ದಕ್ಷಿಣ ಕನ್ನಡದಲ್ಲಿ ಜೂನ್‌ 24ರಂದು ಮೃತಪಟ್ಟಿದ್ದ 68 ವರ್ಷದ ವೃದ್ಧೆ, ಮೈಸೂರಿನನಲ್ಲಿ ಜೂ.24 ರಂದು ಆಸ್ಪತ್ರೆಗೆ ದಾಖಲಾಗಿ ಅಂದೇ ಮೃತಪಟ್ಟಿದ್ದ 87 ವರ್ಷದ ವೃದ್ಧನಿಗೆ ಸೋಂಕು ದೃಢಫಟ್ಟಿದೆ. ಆರೂ ಮಂದಿ ಉಸಿರಾಟ ತೊಂದರೆ, ಜ್ವರ ಮತ್ತಿತರ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾದಾಗ ಕೋವಿಡ್‌ ಪರೀಕ್ಷೆ ನಡೆಸಲಾಗಿತ್ತು.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.