ಆಡು ಮುಟ್ಟದ ಸೊಪ್ಪಿಲ್ಲ ಅನ್ನುವಂತೆ 'ಮಹಿಳೆ ಸಾಧನೆ ಮಾಡಿರದ ಕ್ಷೇತ್ರಗಳಿಲ್ಲ': ನ್ಯಾಯಾಧೀಶೆ ಪೂರ್ಣಿಮ ಅಭಿಮತ

ಇಂದು‌ ಹೆಣ್ಣು ಸಾಧನೆ ಮಾಡಿರದ ಯಾವ ಕ್ಷೇತ್ರವೂ ಉಳಿದಿಲ್ಲ. ಒಬ್ಬ ತಾಯಿ, ಗೃಹಿಣಿ, ಮಗಳಾಗಿ ಹೀಗೆ  ವಿಭಿನ್ನ ರೂಪಗಳಲ್ಲಿ ಕುಟುಂಬದ ಪ್ರಮುಖ ಭಾಗವಾಗಿ, ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸುತ್ತಲೇ ಸಮಾಜದ ಕಣ್ಣಾಗಿದ್ದಾಳೆ ಎಂದು ನ್ಯಾಯಾಧೀಶೆ ಪೂರ್ಣಿಮ ತಿಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹೊಸಪೇಟೆ: ಇಂದು‌ ಹೆಣ್ಣು ಸಾಧನೆ ಮಾಡಿರದ ಯಾವ ಕ್ಷೇತ್ರವೂ ಉಳಿದಿಲ್ಲ. ಒಬ್ಬ ತಾಯಿ, ಗೃಹಿಣಿ, ಮಗಳಾಗಿ ಹೀಗೆ  ವಿಭಿನ್ನ ರೂಪಗಳಲ್ಲಿ ಕುಟುಂಬದ ಪ್ರಮುಖ ಭಾಗವಾಗಿ, ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸುತ್ತಲೇ ಸಮಾಜದ ಕಣ್ಣಾಗಿದ್ದಾಳೆ ಎಂದು ನ್ಯಾಯಾಧೀಶೆ ಪೂರ್ಣಿಮ ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಭಾನುವಾರ ಹಮ್ಮಿಕೊಂಡಿದ್ದ ಪ್ರಥಮ ಮಹಿಳಾ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು. ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಕೆಲಸ ಮಾಡುವುದರೊಂದಿಗೆ ಪುರುಷರಿಗೆ ಸರಿಸಮಾನವಾಗಿ ನಿಂತಿದ್ದಾರೆ. ಜೊತೆಗೆ ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸುತ್ತಲೇ ಎಲ್ಲಾ ಕ್ಷೇತ್ರಗಳಲ್ಲಿ ಹಿರಿದಾದ ಸಾಧನೆ ಮಾಡುತ್ತಿದ್ದಾಳೆ' ಎಂದು ಹೇಳಿದರು.

ಹಂಸಾಂಬ ಆಶ್ರಮದ ಮಾತಾ ಪ್ರಮೋದಾಮಯಿ ಮಾತನಾಡಿ, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಸಮಾವೇಶಗಳು ನಡೆಯಬೇಕು. ಅದರಲ್ಲಿ ಮಹಿಳೆ ಪಾಲ್ಗೊಳ್ಳುವಿಕೆ ಹೆಚ್ಚಾಗಬೇಕು. ಸ್ವಾವಲಂಬನೆ, ಸಹಬಾಳ್ವೆಯ ತಿಳಿವಳಿಕೆ ಮೂಡಿಸಬೇಕು' ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com