ಕೊಕ್ಕರೆಗಳ ಸಾಮೂಹಿಕ ಸಾವು: ಮೈಸೂರಿನಲ್ಲಿ ಹೆಚ್ಚಿದ ಆತಂಕ

ನೆರೆ ರಾಜ್ಯ ಕೇರಳದಲ್ಲಿ ಹಕ್ಕಿಜ್ವರ ಆರಂಭವಾಗಿರುವ ಬೆನ್ನಲ್ಲೇ ಮೈಸೂರಿನ ವಿದ್ಯಾರಣ್ಯಪುರದಲ್ಲಿ ಕೊಕ್ಕರಗಳೂ ಇದ್ದಕ್ಕಿದ್ದಂತೆ ಸಾಮೂಹಿಕವಾಗಿ ಸಾವನ್ನಪ್ಪಿದ್ದು, ಪರಿಣಾಮ ಜನತೆಯಲ್ಲಿ ಆತಂಕ ಹೆಚ್ಚಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಮೈಸೂರು: ನೆರೆ ರಾಜ್ಯ ಕೇರಳದಲ್ಲಿ ಹಕ್ಕಿಜ್ವರ ಆರಂಭವಾಗಿರುವ ಬೆನ್ನಲ್ಲೇ ಮೈಸೂರಿನ ವಿದ್ಯಾರಣ್ಯಪುರದಲ್ಲಿ ಕೊಕ್ಕರಗಳೂ ಇದ್ದಕ್ಕಿದ್ದಂತೆ ಸಾಮೂಹಿಕವಾಗಿ ಸಾವನ್ನಪ್ಪಿದ್ದು, ಪರಿಣಾಮ ಜನತೆಯಲ್ಲಿ ಆತಂಕ ಹೆಚ್ಚಾಗಿದೆ. 

ವಿದ್ಯಾರಣ್ಯಪುರಂನ 5ನೇ ಮುಖ್ಯ ರಸ್ತೆಯಲ್ಲಿ ಈ ವರೆಗೂ ಕಳೆದ 1 ವಾರದಿಂದ 12ಕ್ಕೂ ಹೆಚ್ಚು ಕೊಕ್ಕರೆಗಳು ಸಾವನ್ನಪ್ಪಿದ್ದು, ಸಾವಿಗೆ ಕಾರಣಗಳು ತಿಳಿದುಬಂದಿಲ್ಲ. 

ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿರುವ ಪಾಲಿಕೆ ಸದಸ್ಯ ರಾಮಪ್ರಸಾದ ಅವರು, ಪಶುವೈದ್ಯ ಡಾ.ನಾಗರಾಜ್ ಅವರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಪಶುವೈದ್ಯ ಕೂಡ ಸ್ಥಳಕ್ಕೆ ಧಾವಿಸಿ, ಮೃತ ಕೊಕ್ಕರೆ ಶವಗಳನ್ನು ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ತಪಾಸಣೆಗೆ ಕಳುಹಿಸಿದ್ದಾರೆ.
 
ಮೈಸೂರಿನಲ್ಲಿ ವಿಶ್ವವಿಖ್ಯಾತ ಮೃಗಾಲಯವಿದ್ದು, ಇತರೆ ಪ್ರಾಣಿ, ಪಕ್ಷಿಗಳಿಗೆ ಈ ಕೊಕ್ಕರೆಗಳಿಗೆ ತಗುಲಿರುವ ಸೋಂಕು ಮೃಗಾಲಯದ ಪಕ್ಷಿಗಳಿಗೂ ತಗುಲದಂತೆ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಪಶುವೈದ್ಯರು ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com